ನವದೆಹಲಿ: ಪೂರ್ವ ದೆಹಲಿಯ ಶಕರ್ ಪುರ್ ಪ್ರದೇಶದಲ್ಲಿ ಹಾಡು ಹಗಲೇ ಕೋಚಿಂಗ್ ಸೆಂಟರ್ ಹೊರಗೆ ನಿಲ್ಲಿಸಿದ್ದ ಸ್ಕೂಟರ್ ಅನ್ನು ಕಳ್ಳ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೊ ಸಿಸಿಟಿವಿ ದೃಶ್ಯಾವಳಿಗಳಾಗಿದ್ದು, ಇದರಲ್ಲಿ ಕಳ್ಳನು ಮಧ್ಯಾಹ್ನದ ವೇಳೆ ಸ್ಕೂಟರ್ ಅನ್ನು ಕದಿಯುತ್ತಿದ್ದಾನೆ. ಕಳ್ಳತನದ ಸಂಪೂರ್ಣ ಘಟನೆಯನ್ನು ಸಮೀಪದಲ್ಲಿರುವ ಸಿಸಿಟಿವಿಯಲ್ಲಿ ಚಿತ್ರಣಗೊಂಡಿದೆ.


COMMERCIAL BREAK
SCROLL TO CONTINUE READING

ಜೂನ್ 19 ರಂದು ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶಕರ್ ಪೂರ್ ಅವರ ಕೋಚಿಂಗ್ ಸೆಂಟರ್ನಲ್ಲಿ ಬೋಧಿಸುವ ಶಿಕ್ಷಕ ಕಿಶೋರ್ ಕುಮಾರ್ ಕೋಚಿಂಗ್ ಸೆಂಟರ್ ಹೊರಗೆ ತನ್ನ ಸ್ಕೂಟರ್ ನಿಲ್ಲಿಸಿ ಒಳಗೆ ಹೋದರು. ಆದರೆ ಶಿಕ್ಷಕ ಹಿಂತಿರುಗಿ ಬಂದಾಗ, ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಾಣೆಯಾಗಿತ್ತು.


ತಕ್ಷಣ ಅವರು ಸುತ್ತ ಮುತ್ತ ಎಲ್ಲೆಡೆ ಹುಡುಕಿದರೂ ಅವರ ಸ್ಕೂಟರ್ ಎಲ್ಲಿಯೂ ಸಿಗಲಿಲ್ಲ. ಬಳಿಕ  ಕೋಚಿಂಗ್‌ನಲ್ಲಿ ಸಿಸಿಟಿವಿಯನ್ನು ಪರಿಶೀಲಿಸಿದಾಗ ಆಶ್ಚರ್ಯವಾಯಿತು. 3 ಗಂಟೆ ಸುಮಾರಿಗೆ ಆತನ ಸ್ಕೂಟರ್ ಕಳವು ಮಾಡಲಾಗಿದೆ. ಕಳ್ಳನು ತನ್ನ ಸ್ಕೂಟಿಯನ್ನು ಕೆಲವೇ ನಿಮಿಷಗಳಲ್ಲಿ ಕದ್ದಿದ್ದಾನೆ. ಬಹಳ ಜಾಗರೂಕನಾಗಿ ಆಟ ಈ ಕೃತ್ಯ ಮಾಡಿದ್ದಾನೆ ಎಂದು ತಿಳಿಯಿತು. ಆದರೆ ಕಳ್ಳನ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಯಾಯಿತು.


ಇತ್ತೀಚಿಗೆ ಈ ಕಳ್ಳರ ಉತ್ಸಾಹ ಎಷ್ಟು ಪ್ರಬಲವಾಗಿದೆಯೆಂದರೆ, ಕೇವಲ ರಾತ್ರಿ ವೇಳೆ ಮಾತ್ರವಲ್ಲದೆ, ಹಗಲಿನಲ್ಲೂ ಸಹ ಅವರು ಕಳ್ಳತನ ಮಾಡಲು ಹೆದರುವುದಿಲ್ಲ. ಕಳ್ಳತನ ಪ್ರಕರಣದ ಬಗ್ಗೆ ಕಿಶೋರ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ನಂತರ ಪೊಲೀಸರು ಸಿಸಿಟಿವಿ ಸಹಾಯದಿಂದ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.