Viral Railway Ticket: ಪಾಕಿಸ್ತಾನದಿಂದ ಭಾರತಕ್ಕೆ ರೈಲು ಟಿಕೆಟ್ ಬೆಲೆ ಕೇವಲ ರೂ.4! ಇಷ್ಟೊಂದು ಕಡಿಮೆ ದರ ಯಾಕೆ ಗೊತ್ತಾ?
Viral Railway Ticket: ಸ್ವಾತಂತ್ರ್ಯದ ಕಾಲದ ರೈಲು ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪಾಕಿಸ್ತಾನದ ರಾವಲ್ಪಿಂಡಿ ಮತ್ತು ಅಮೃತಸರ ನಡುವೆ ಪ್ರಯಾಣಿಸುವ ಟಿಕೆಟ್ ಇದಾಗಿದ್ದು, ಒಂಬತ್ತು ಮಂದಿಗೆ ಈ ಟಿಕೆಟ್ ನ್ನು ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಟಿಕೆಟ್‌ಗಳು ಮತ್ತು ಬೆಲೆಗಳನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದಕ್ಕೆ ಕಾರಣ ಇಲ್ಲಿ ಕಾಣಿಸುತ್ತಿರುವ ಬೆಲೆ.
Viral Railway Ticket: ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀ ದಿನ ಅದೆಷ್ಟೋ ವಿಚಾರಗಳು ಹರಿದಾಡುತ್ತಿರುತ್ತವೆ. ಎಗ್ಗಿಲ್ಲದೆ ಹರಿಯುವ ಈ ಮಹಾಸಮುದ್ರದಲ್ಲಿ ಕೆಲವೊಂದು ಸಾಮಾನ್ಯ ಜ್ಞಾನವನ್ನು ತುಂಬುವ ಕೆಲಸ ಮಾಡುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೇ ಒಂದು ವಿಷಯ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: Republic Day 2023: ಗಣರಾಜ್ಯೋತ್ಸವ ಸಂಭ್ರಮಕ್ಕೆ ಅರ್ಜೆಂಟೀನಾ ವಾಯುಪಡೆ-ಭೂಸೇನಾ ಯೋಧರ ಆಗಮನ: ಮತ್ತಷ್ಟು ಹೆಚ್ಚಲಿದೆ ಮೆರುಗು
ಸಾಮಾನ್ಯವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣ ಬೆಳೆಸಲು ಸಾಮಾನ್ಯ ಜನರು ಬಸ್ ಅಥವಾ ರೈಲ್ವೆ ಮಾರ್ಗವನ್ನು ಬಳಸುತ್ತಾರೆ. ಇಂದು ನಾವು ಪಾಕಿಸ್ತಾನದಿಂದ ಭಾರತಕ್ಕೆ ಸಂಪರ್ಕ ಹೊಂದಿದ್ದ ರೈಲಿನ ಟಿಕೆಟ್ ದರದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಸ್ವಾತಂತ್ರ್ಯದ ಕಾಲದ ರೈಲು ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪಾಕಿಸ್ತಾನದ ರಾವಲ್ಪಿಂಡಿ ಮತ್ತು ಅಮೃತಸರ ನಡುವೆ ಪ್ರಯಾಣಿಸುವ ಟಿಕೆಟ್ ಇದಾಗಿದ್ದು, ಒಂಬತ್ತು ಮಂದಿಗೆ ಈ ಟಿಕೆಟ್ ನ್ನು ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಟಿಕೆಟ್‌ಗಳು ಮತ್ತು ಬೆಲೆಗಳನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದಕ್ಕೆ ಕಾರಣ ಇಲ್ಲಿ ಕಾಣಿಸುತ್ತಿರುವ ಬೆಲೆ.
ಆಗ ಒಂಬತ್ತು ಜನರ ಟಿಕೆಟ್‌ಗೆ ಕೇವಲ 36 ರೂಪಾಯಿ 9 ಅಣೆಗಳನ್ನು ವಿಧಿಸಲಾಗುತ್ತಿತ್ತು. ಜನರು ಇದನ್ನು ಇಂದಿನ ಟಿಕೆಟ್ ದರದೊಂದಿಗೆ ಹೋಲಿಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Lesbian Couple : ಪ್ರೀತಿಗಾಗಿ ʼಲಿಂಗʼ ಬದಲಿಸಿಕೊಂಡ ಯುವತಿ.. ʼಹೆಣ್ಣು ಗಂಡಾದʼ ಮೇಲೂ ಸಿಗಲಿಲ್ಲ ಗೆಳತಿ..!
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ರೈಲ್ ಟಿಕೆಟ್ ಅನ್ನು ಪಾಕಿಸ್ತಾನ್ ರೈಲ್ ಲವರ್ಸ್ ಹೆಸರಿನ ಪೇಜ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಟಿಕೆಟ್‌ನ ಚಿತ್ರವನ್ನು ಹಂಚಿಕೊಂಡ ಪಾಕಿಸ್ತಾನ್ ರೈಲ್ ಲವರ್ಸ್ ಹೀಗೆ ಬರೆದಿದ್ದಾರೆ. “ಸ್ವಾತಂತ್ರ್ಯದ ನಂತರ 17-09-1947 ರಲ್ಲಿ 9 ಜನರಿಗೆ, ರಾವಲ್ಪಿಂಡಿಯಿಂದ ಅಮೃತಸರಕ್ಕೆ ಪ್ರಯಾಣಿಸಲು 36 ರೂಪಾಯಿ ಮತ್ತು 9 ಆಣೆ. ರೈಲ್ವೆ ಟಿಕೆಟ್‌ನ ಚಿತ್ರ ಇಲ್ಲಿದೆ. ಬಹುಶಃ ಒಂದು ಕುಟುಂಬ ಭಾರತಕ್ಕೆ ವಲಸೆ ಹೋಗಿರಬಹುದು” ಎಂದು ಬರೆದುಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.