ಪರಮಾಣು ಕ್ಷೇತ್ರದಲ್ಲಿ ಭಾರತ ಪರಾಕ್ರಮ ಮೆರೆಯಲು ಕಾರಣೀಭೂತರಾದವರೇ ಡಾ. ವಿಕ್ರಮ್ ಸಾರಾಭಾಯಿ, ಆಗಸ್ಟ್ 12 ಬಂತೆಂದರೆ ಸಾಕು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಅವಿಸ್ಮರಣೀಯ ದಿನ. ಭಾರತ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಯ ಹಿಂದಿನ ಶಕ್ತಿಯಾಗಿರುವ, ಡಾ. ವಿಕ್ರಮ್ ಎ. ಸಾರಾಭಾಯಿ ಅವರ ಜನ್ಮದಿನವೂ ಹೌದು. ಇಸ್ರೋ ಸ್ಥಾಪನೆಯ ಹಿಂದಿನ ಈ ಚಾಲಕ ಶಕ್ತಿಗೆ ಗೂಗಲ್ 'ಡೂಡಲ್' ಗೌರವವನ್ನು ನೀಡಿ ಕೈಮುಗಿದಿದ್ದು ಭಾರತೀಯರು ಸಂತಸ ಪಡುವ ವಿಚಾರ.


COMMERCIAL BREAK
SCROLL TO CONTINUE READING

ಸಾರಾಭಾಯಿ ಬಾಲ್ಯ :

1919 ರ ಆಗಸ್ಟ್ 12 ರಂದು ಅಹಮದಾಬಾದ್‌ ಶ್ರೀಮಂತ ಉದ್ಯಮಿಗಳ ಕುಟುಂಬದಲ್ಲಿ ಜನಿಸಿದ ವಿಕ್ರಮ್ ಸಾರಾಭಾಯಿ ಗುಜರಾತ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಬಳಿಕ ಕೇಂಬ್ರಿಡ್ಜ್ ವಿವಿಯಿಂದ ಡಾಕ್ಟರೇಟ್ ಪಡೆದರು. ಭಾರತಕ್ಕೆ ಮರಳಿದ ಅವರು 1947 ರಲ್ಲಿ ಅಹಮದಾಬಾದ್‌ನಲ್ಲಿ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯ ಸ್ಥಾಪಿಸಿದರು. ಬಳಿಕ ಬಾಹ್ಯಾಕಾಶ ಬಳಕೆ ಕೇಂದ್ರ ಆರಂಭಿಸಿ ಮುಂದೆ ಇಸ್ರೋ ಸ್ಥಾಪನೆಗೆ ಕಾರಣೀಭೂತರಾದರು. ಅವರ ಬದುಕಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ಮೆಲುಕು ಹಾಕುವುದಾದರೆ,

ಇಸ್ರೋಗೆ ಸ್ಪುಟೈಕ್ ಸ್ಫೂರ್ತಿ :

ರಷ್ಯಾ ಸ್ಪುಟ್ನಕ್ ಉಪಗ್ರಹವನ್ನು ಉಡಾಯಿಸಿದಾಗ ಮೊದಲು ಕಿಚ್ಚು ಹೊತ್ತಿದ್ದು ವಿಕ್ರಮ್ ಸಾರಾಭಾಯಿ ಮನಸ್ಸಲ್ಲಿ, "ಭಾರತವೂ ಬಾಹ್ಯಾಕಾಶ ಕೇಂದ್ರ ಹೊಂದಬೇಕು. ನಮ್ಮ ಕನಸು ಚಂದ್ರನಲ್ಲಿಗೆ, ಮಂಗಳನ ಮೇಲೆ ಮನುಷ್ಯರನ್ನು ಕಳುಹಿಸುವುದಲ್ಲ. ತಂತ್ರಜ್ಞಾನದ ಮೂಲಕ ಜನರ ಸಮಸ್ಯೆ ಪರಿಹರಿಸಲು ಸಾಧ್ಯವಾದರೆ ಸಾಕು." ಎನ್ನುವುದು ಅವರ ಕಳಕಳಿಯಾಗಿತ್ತು. ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಮನವೊಲಿಸಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ (ಇಂಕೊಸ್ಪಾರ್) ಸ್ಥಾಪನೆಗೆ ಕಾರಣರಾದರು. ಆದುವೇ ಮುಂದೆ ಇಸ್ರೋ ಆಯಿತು.


ಇದನ್ನೂ ಓದಿ- ವಿರಾಟ್ ಕೊಹ್ಲಿ ಬದುಕಲ್ಲಿ ಬಿರುಗಾಳಿ... ಅನುಷ್ಕಾ ಶರ್ಮಾ ಜೊತೆಗಿನ...!? ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್‌ನ ಅಸಲಿಯತ್ತೇನು?

ಮೊದಲ ಉಡಾವಣಾ ಕೇಂದ್ರ :

ಸರ್ಕಾರ ಬಾಹ್ಯಾಕಾಶ ಯೋಜನೆಗೆ ಒಪ್ಪಿದಾಗ ಡಾ. ಸಾರಾಭಾಯಿ ಅವರಿಗೆ ಬೆಂಬಲ ನೀಡಿದ್ದು ಖ್ಯಾತ ಪರಮಾಣು ವಿಜ್ಞಾನಿ ಡಾ. ಹೋಮಿ ಜಹಂಗೀರ್ ಭಾಭಾ. ಕೇರಳದ ತಿರುವನಂತಪುರದ ಸೈಂಟ್ ಮ್ಯಾಗ್ನಲೀನ್ ಚರ್ಚ್ ಸಮೀಪ 1963 ರಲ್ಲಿ ದೇಶದ ಮೊದಲ ಉಡಾವಣಾ ಕೇಂದ್ರ ಸ್ಥಾಪಿಸಲಾಯಿತು. ಇದನ್ನು ಇವತ್ತಿಗೂ ಭಾರತೀಯ ರಾಕೆಟ್ ತಂತ್ರಜ್ಞಾನ ಮೆಕ್ಕಾ ಅಂತಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಆರ್ಯಭಟ'ನಿಗೂ ಪಿತಾಮಹ :

1976 ರ ಜುಲೈನಲ್ಲಿ ಭಾರತ ಗಗನಕ್ಕೇರಿಸಿದ ಮೊದಲ ಕೃತಕ ಉಪಗ್ರಹ 'ಆರ್ಯಭಟ'ದ ಕನಸುಗಾರ ಸಾರಾಭಾಯಿ, ಆದರೆ, ಅವರ ಮರಣದ 4 ವರ್ಷಗಳ ನಂತರ ಇದನ್ನು ರಷ್ಯನ್ ರಾಕೆಟ್ ಮೂಲಕ ಉಡಾಯಿಸಲಾಯಿತು.

ಮಾರ್ಕೆಟ್ ಟ್ರೆಂಡ್ ಸಂಶೋಧಕ ! :

ಸಾರಾಭಾಯಿ ಕೇವಲ ಒಬ್ಬ ವಿಜ್ಞಾನಿಯಲ್ಲ. ಇವತ್ತು ಜನಪ್ರಿಯವಾಗಿ ಮಾರ್ಕೆಟ್ ಟ್ರೆಂಡ್ ಅನಾಲಿಸಿಸ್‌ನ್ನು 50 ವರ್ಷದ ಹಿಂದೆಯೇ ನಡೆಸಿದ್ದರು ಅವರು. ಉದ್ಯಮಕ್ಕೆ ದತ್ತಾಂಶ ವಿಶ್ಲೇಷಣೆಯ ಮೆರುಗು ಕೊಟ್ಟ ಟ್ರೆಂಡ್ ಸೆಟ್ಟರ್ ಆದರು.

ಐಐಎಂ ಅಹಮದಾಬಾದ್ ಸ್ಥಾಪಕ ! :

ಭಾರತದ ಸಮೃದ್ಧಿಯಲ್ಲಿ ಉದ್ಯಮದ ಪಾತ್ರವನ್ನು ಚೆನ್ನಾಗಿ ಅರಿತಿದ್ದ ಸಾರಾಭಾಯಿ ಉದ್ಯಮ ನಿರ್ವಹಣೆಯನ್ನು ಪಾಠವಾಗಿ ಕಲಿಸಲು ಕಟ್ಟಿದ್ದೇ ಐಐಎಂ ಅಹಮದಾಬಾದ್, ಇದು ದೇಶದ 2ನೇ ಐಐಎಂ.

ಡ್ಯಾನ್ಸ್ ಅಕಾಡೆಮಿಯ ಸಹಸ್ಥಾಪಕ ! :

1942 ರಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಮೃಣಾಲಿನಿ ಅವರನ್ನು ಮದುವೆಯಾದ ಸಾರಾಭಾಯಿ ದರ್ಪಣ ಆಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಸ್ಥಾಪಿಸಿದರು. ಅವರ ಕುಟುಂಬಸ್ಥರು ಡ್ಯಾನ್ಸ್ ಆಕಾಡೆಮಿ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ.

ಚಂದ್ರನ ಕುಳಿಗೆ ಹೆಸರು :

1974 ರಲ್ಲಿ ಅಂತಾರಾಷ್ಟ್ರೀಯ ಗಗನಯಾತ್ರಿಗಳ ಒಕ್ಕೂಟ ಚಂದ್ರನ 8 ಕಿ.ಮೀ ವ್ಯಾಸದ ಕಪ್ಪು ಕುಳಿ, 2/3 ಆವಿಷ್ಕರಿಸಿದಾಗ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಹೆಸರಿಟ್ಟದ್ದು ವಿಶೇಷ.

ಚಂದ್ರಯಾನದ ಲ್ಯಾಂಡರ್ ವಿಕ್ರಮ್ :

ಜುಲೈ 22 ರಂದು ಇಸ್ರೋ ಉಡಾಯಿಸಿರುವ ಚಂದ್ರಯಾನ ವೋಮ ನೌಕೆಯಲ್ಲಿರುವ ಲ್ಯಾಂಡರ್‌ಗೆ ವಿಕ್ರಮ್ ಸಾರಾಭಾಯಿ ಹೆಸರಿಡಲಾಗಿತ್ತು ಚಂದ್ರನನ್ನು ಸುತ್ತುವ ಅರ್ಬಿಟರ್ ಮತ್ತು ಚಂದ್ರನ ದಕ್ಷಿಣ ಗೋಲದ ಅಧ್ಯಯನ ನಡೆಸುವ ರೋವ‌ರ್ ನಡುವಿನ ಸಂಪರ್ಕ ಕೊಂಡಿಯಾಗಿತ್ತು. ಆದರೆ ಚಂದ್ರಯಾನದ ಕೊನೆ ಕ್ಷಣದಲ್ಲಿ ಲ್ಯಾಂಡರ್ ವಿಕ್ರಮ್ ಚಂದ್ರನ ಅಂಗಳಕ್ಕೆ ರಭಸವಾಗಿ ಅಪ್ಪಳಿಸಿ ಸಂಪರ್ಕಕಳೆದುಕೊಂಡಿದ್ದು ಇಡೀ ವಿಶ್ವವೇ ಕುತೂಹಲದ ಕಡಲಲ್ಲಿ ತೇಲಾಡುವಂತೆ ಮಾಡಿದ್ದ ನೆನಪು ಇಂದಿಗೂ ಖಗೋಳ ಪ್ರಿಯರ ಮನದಲ್ಲಿದೆ.


ಇದನ್ನೂ ಓದಿ- ಬಿಗ್‌ಬಾಸ್‌ ಬಿಗ್‌ ಅನೌನ್ಸ್‌ಮೆಂಟ್..‌ ವೈಲ್ಡ್‌ ಕಾರ್ಡ್‌ ಎಂಟ್ರಿ ಬೆನ್ನಲ್ಲೇ ಹೊರಬಿತ್ತು ಫೈನಲಿಸ್ಟ್‌ಗಳ ಲಿಸ್ಟ್‌! ಊಹೆಗೂ ಮೀರಿದ ಸ್ಪರ್ಧಿಗಳ ಹೆಸರು ರಿವೀಲ್!!‌

ಬಾಹ್ಯ ಲೋಕಕ್ಕೆ ಮರಳಿದರು :

ಭಾರತದಲ್ಲಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಥಾಪಿಸಬೇಕೆಂಬ ಆಸೆಯಿಂದಲೇ 1971 ರ ಡಿಸೆಂಬರ್ 30 ರಂದು ರಷ್ಯನ್ ರಾಕೆಟ್ ಲಾಂಜ್‌ಗೆ ಸಾಕ್ಷಿ ನುಡಿದು. ತುಂಬಾ ರೈಲ್ವೇ ಸ್ಟೇಷನ್‌ಗೆ ಅಡಿಗಲ್ಲು ಹಾಕಿ ಕೇರಳದ ಹೋಟೆಲ್ ರೂಮಿನಲ್ಲಿ ಮಲಗಿದ್ದವರು ಅಲ್ಲಿಯೇ ಚಿರನಿದ್ರೆಗೆ ಜಾರಿದರು.

ಭಾರತದ ಬಾಹ್ಯಕಾಶ ಲೋಕ ಬೆಳಗಲು ಬಂದಿದ್ದ ವಿಕ್ರಮ ಆಗಸದಲ್ಲಿ ಮರೆಯಾದರು.


-ಡಾ. ಡಿ.ಸಿ. ರಾಮಚಂದ್ರ


ಶ್ರೀ ಕ್ಷೇತ್ರ ಆದಿಚುಂಚನಗಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ