ಮುಂದಿನ 24 ಗಂಟೆಗಳ ಕಾಲ ಪದೇ ಪದೇ ಬದಲಾಗಲಿದೆ ಹವಾಮಾನ
ಮುಂದಿನ 24 ಗಂಟೆಗಳಲ್ಲಿ ಹವಾಮಾನದಲ್ಲಿ ಪದೇ ಪದೇ ಬದಲಾಗಲಿದ್ದು ಶುಕ್ರವಾರ ತಾಪಮಾನವು 40 ° C ದಾಟುವ ಸಾಧ್ಯತೆಯಿದೆ. ದೇಶದ ಕೆಲವು ಭಾಗಗಳಲ್ಲಿ ಹಗುರವಾದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದೆ.
ನವದೆಹಲಿ: ಕೊರೋನಾವೈರಸ್ ಕಾಳಗದ ನಡುವೆ ಉತ್ತರ ಭಾರತದಲ್ಲಿ ಬೇಸಿಗೆ ಪ್ರಾರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗರಿಷ್ಠ ತಾಪಮಾನ ವೇಗವಾಗಿ ಏರುತ್ತಿದೆ. ಏತನ್ಮಧ್ಯೆ ಮುಂದಿನ 24 ಗಂಟೆಗಳಲ್ಲಿ ಹವಾಮಾನದಲ್ಲಿ ಪದೇ ಪದೇ ಬದಲಾಗಲಿದ್ದು ಶುಕ್ರವಾರ ತಾಪಮಾನವು 40 ° C ದಾಟುವ ಸಾಧ್ಯತೆಯಿದೆ. ದೇಶದ ಕೆಲವು ಭಾಗಗಳಲ್ಲಿ ಹಗುರವಾದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಕೆಲವು ಭಾಗಗಳಲ್ಲಿ ಧೂಳಿನ ಚಂಡಮಾರುತದೊಂದಿಗೆ ಲಘು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದೆ.
ಗುಡುಗು ಸಹಿತ ಮಳೆ:
ಪಾಕಿಸ್ತಾನದ ಸುತ್ತಮುತ್ತಲಿನ ಪಾಶ್ಚಾತ್ಯ ಅಡಚಣೆಯಿಂದಾಗಿ ಭಾರತದ ಉತ್ತರ ರಾಜ್ಯಗಳಲ್ಲಿ ಮತ್ತು ಉತ್ತರ ಪ್ರದೇಶದ ಹವಾಮಾನ ಮಾದರಿಗಳು ಬದಲಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಊಹಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಲವಾದ ಧೂಳಿನ ಚಂಡಮಾರುತ ಉಂಟಾಗಬಹುದು. ಗುಡುಗು ಮತ್ತು ಮಿಂಚಿನೊಂದಿಗೆ ಲಘು ಮಳೆಯಾಗುವ ಸಾಧ್ಯತೆಯೂ ಇದೆ. ಮುಂದಿನ 24 ಗಂಟೆಗಳಲ್ಲಿ ತೆಲಂಗಾಣ ಮತ್ತು ಕರ್ನಾಟಕದ ಗರಿಷ್ಠ ತಾಪಮಾನವು 40 ರಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಬಹುದು ಎಂದು ಐಎಂಡಿ ತಿಳಿಸಿದೆ.
ರೈತರಿಗೆ ಅನಾನುಕೂಲ:
ಹವಾಮಾನ ಇಲಾಖೆಯ ಪ್ರಕಾರ ಮುಂದಿನ ನಾಲ್ಕು ದಿನಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವುದರಿಂದ ರೈತರಿಗೆ ಹಾನಿಯನ್ನುಂಟುಮಾಡಬಹುದು. ಪೂರ್ವ ಉತ್ತರ ಪ್ರದೇಶದ ಹವಾಮಾನವೂ ಹದಗೆಡುವ ಸಾಧ್ಯತೆಯಿದೆ. ಕೆಲವು ಸ್ಥಳಗಳಲ್ಲಿ, ಆಲಿಕಲ್ಲು ಸಹಿತ ಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನದಲ್ಲಿನ ಬದಲಾವಣೆಗಳಿಂದ ಗೋಧಿ ಕೊಯ್ಲಿನ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಎಲ್ಲೆಲ್ಲಿ ಬದಲಾಗಲಿದೆ ಹವಾಮಾನ?
ಮುಂದಿನ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಬಹುದು. ಅದೇ ಸಮಯದಲ್ಲಿ, ದೆಹಲಿ-ಎನ್‌ಸಿಆರ್, ಹರಿಯಾಣ ಮತ್ತು ಈಶಾನ್ಯ ಭಾರತದ ಅನೇಕ ಸ್ಥಳಗಳಲ್ಲಿ ಮಿಂಚಿನ ಸಹಿತ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ರಾಜಸ್ಥಾನದಲ್ಲಿ ಧೂಳಿನೊಂದಿಗೆ ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆಯಿದೆ. ಜಾರ್ಖಂಡ್‌ನ ಹಲವು ಭಾಗಗಳಲ್ಲಿ ಮುಂದಿನ 3-4 ದಿನಗಳವರೆಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.