ನವದೆಹಲಿ:  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನದ ಅವಕಾಶ ನೀಡುತ್ತಿದ್ದ 370ನೇ ಕಲಂ ಅನ್ನು ರದ್ದು ಪಡಿಸಿ ಈಗ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿರುವ ನಿರ್ಧಾರವನ್ನು ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಜಮ್ಮು ಕಾಶ್ಮೀರದ ಕೊನೆಯ ಸದರ್-ಎ-ರಿಯಾಸತ್ ಕರಣ್ ಸಿಂಗ್ ಶ್ಲಾಘಿಸಿದ್ದಾರೆ. 


COMMERCIAL BREAK
SCROLL TO CONTINUE READING

ವಿಶೇಷವಾಗಿ ಲಡಾಖ್ ನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿರುವುದಕ್ಕೆ ಕರಣ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. 'ಹಲವಾರು ಸಕಾರಾತ್ಮಕ ಅಂಶಗಳಿವೆ. ಅದರಲ್ಲೂ ಕೇಂದ್ರ ಪ್ರದೇಶವಾಗಿ ಲಡಾಖ್ ನ್ನು ಘೋಷಿಸಿರುವುದಕ್ಕೆ ಸ್ವಾಗತಿಸಬೇಕಾಗಿದೆ' ಎಂದು 88 ವರ್ಷದ ಕರಣ್ ಸಿಂಗ್ ತಿಳಿಸಿದ್ದಾರೆ. 



ಈ ನೂತನ ವಿಭಜನೆಯಿಂದಾಗಿ ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಅಧಿಕಾರವು ನ್ಯಾಯಯುತವಾಗಿರಲಿದೆ. ತಾವು 1965 ರಲ್ಲಿ ಸಾದರ್-ಎ-ರಿಯಾಸತ್ ಆಗಿದ್ದಾಗ ಲಡಾಖ್‌ಗೆ ಸೂತ್ರವನ್ನು ಸೂಚಿಸಿದ್ದಾಗಿ ಕರಣ್ ಸಿಂಗ್ ಹೇಳಿದರು. ಇದೇ ವೇಳೆ ಜಮ್ಮು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಹೇಳಿದ ಅವರು ಇದರಿಂದ ಕಾಶ್ಮೀರ ಕೂಡ ದೇಶದಲ್ಲಿನ ಉಳಿದ ರಾಜ್ಯಗಳಂತೆ ರಾಜಕೀಯ ಹಕ್ಕುಗಳನ್ನು ಹೊಂದಬಹುದು ಎಂದು ಹೇಳಿದರು.


"ಜಮ್ಮು ಮತ್ತು ಕಾಶ್ಮೀರವು ಆದಷ್ಟು ಬೇಗ ಪೂರ್ಣ ರಾಜ್ಯತ್ವವನ್ನು ಪಡೆಯಬೇಕು, ಇದರಿಂದಾಗಿ ದೇಶದ ಜನರು ದೇಶದ ಉಳಿದ ಭಾಗಗಳಿಗೆ ಲಭ್ಯವಿರುವ ರಾಜಕೀಯ ಹಕ್ಕುಗಳನ್ನು ಪಡೆಯಬಹುದು 
ಎಂದು ಸಿಂಗ್ ಹೇಳಿದರು. ಅಲ್ಲದೆ ಈಗ ಬಂಧಿಸಿರುವ ರಾಜಕೀಯ ನಾಯಕರನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಿ ನಾಗರಿಕ ಸಮಾಜದೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿದರು.