ನವದೆಹಲಿ: ತೆಲಂಗಾಣದಲ್ಲಿ ಕೆಸಿಆರ್ ನೇತೃತ್ವದ ಟಿಆರೆಸ್ಸ್ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಸದೆ ಹಾಗೂ ಕೆಸಿಆರ್ ಮಗಳು ಕವಿತಾ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪರಿಶ್ರಮಕ್ಕೆ ಫಲ ದೊರೆತಿದೆ ಎಂದರು.ಜನರ ಪ್ರತಿಕ್ರಿಯೆಯನ್ನು ನಾವು ನೋಡುತ್ತಿದ್ದೇವೆ. ನಾಲ್ಕೂವರೆ ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಫಲಸಿಕ್ಕಿದೆ. ತೆಲಂಗಾಣವನ್ನು ಕೆಸಿಆರ್ ಅರ್ಥೈಸಿಕೊಂಡಷ್ಟು ಯಾರು ತಿಳಿದುಕೊಂಡಿಲ್ಲ ಎಂದು ಸಂಸದೆ ಕವಿತಾ ಹೇಳಿದರು. 


ಈ ಬಾರಿ ಕೆಸಿಆರ್ ನೇತೃತ್ವದ ಸರ್ಕಾರವನ್ನು ಸೋಲಿಸುವ ಕಾರಣದಿಂದ ಕಾಂಗ್ರೆಸ್ ಮತ್ತು ತೆಲುಗುದೇಶಂ ಪಕ್ಷಗಳು ಒಂದಾಗಿದ್ದವು.ಆದರೆ ಇದರೆಲ್ಲದರ ನಡುವೆಯೂ ಕೂಡ ಕೆಸಿಆರ್ ನೇತೃತ್ವದ ಟಿಆರೆಸ್ಸ್ ಭರ್ಜರಿ ಗೆಲುವು ಸಾಧಿಸಿದೆ.


ಇದೆ ವೇಳೆ ರಾಷ್ಟ್ರ ರಾಜಕಾರಣದ ಕುರಿತಾಗಿ ಮಾತನಾಡಿದ ಅವರು "ನಾವು ಇನ್ನು ಮುಂದೆ ಹೋಗುತ್ತೇವೆ,ರಾಷ್ಟ್ರರಾಜಕಾರಣಕ್ಕೆ ಎಂಟ್ರಿ ನೀಡುತ್ತೇವೆ.ನಾಳೆ ನಮ್ಮ ರಾಷ್ಟ್ರರಾಜಕಾರಣದ ಅಜೆಂಡಾವನ್ನು ತಿಳಿಸುತ್ತೇವೆ, ರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ಶಕ್ತಿಯ ಅವಶ್ಯಕತೆ ಇದೆ ಎಂದು ತಿಳಿಸಿದರು. ಇನ್ನು ಮುಂದುವರೆದು ಕೆಸಿಆರ್ ಮುಖ್ಯಮಂತ್ರಿ ಪದವಿಯಲ್ಲಿದ್ದೆ ರಾಷ್ಟ್ರಮಟ್ಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂದು ತಿಳಿಸಿದರು.