ಕಟಿಹಾರ್: ಕಳೆದ ಕೆಲ ದಿನಗಳಿಂದ  ಬಿಹಾರದ ಕಟಿಹಾರ್‌ನಲ್ಲಿರುವ ಗಿಳಿಯೊಂದು ತನ್ನ ಚಟುವಟಿಕೆಯ ಮೂಲಕ ಎಲ್ಲರ ಚರ್ಚೆಯ ಕೇಂದ್ರಬಿಂದುವಾಗಿದೆ. ಜಿಲ್ಲೆಯ ನಯಾ ಟೋಲಾ ಪ್ರದೇಶದ ನಿವಾಸಿ ರಾಜೇಶ್ ವರ್ಮಾ ಸಾಕಿರುವ ಈ ಸಾಕುಗಿಳಿ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಯೂಟ್ಯೂಬ್ ಅನ್ನು ಚಲಾಯಿಸುವುದಲ್ಲದೆ, ಯುಟ್ಯೂಬ್ ನಲ್ಲಿ ಗಿಳಿಗಳಿಗೆ ಸಂಬಂಧಿಸಿದ ವಿಡಿಯೋ ಕೂಡ ತೆರೆದು, ತುಂಬಾ ಸ್ವಾರಸ್ಯದಿಂದ ಅವುಗಳನ್ನು ವಿಕ್ಷೀಸುತ್ತದೆ.


COMMERCIAL BREAK
SCROLL TO CONTINUE READING

ಸುಮಾರು ಒಂದೂವರೆ ವರ್ಷಗಳ ಹಿಂದೆ ರಾಜೇಶ್ ವರ್ಮಾ ತಮ್ಮ ಸ್ನೇಹಿತರ ಮನೆಯಿಂದ ಈ ಗಿಳಿಯನ್ನು ತಂದಿದ್ದಾರೆ. ಅಂದಿನಿಂದ ಈ ಗಿಳಿ ಅವರ ಮನೆಯಲ್ಲಿ ಕುಟುಂಬ ಸದಸ್ಯರಂತೆಯೇ ವಾಸಿಸ್ತುತ್ತದೆ. ಮನೆಯಲ್ಲಿ ಈ ಗಿಲಿಗಾಗಿ ಯಾವುದೇ ಪಂಜರವನ್ನು ಇರಿಸಲಾಗಿಲ್ಲ. ಮನೆಯ ಸದಸ್ಯರು ಪ್ರೀತಿಯಿಂದ ಈ ಗಿಳಿಗೆ ಡುಗ್ಗು ಎಂದು ಕರೆಯುತ್ತಾರೆ. ಮನೆಯ ಯಾವುದೇ ಭಾಗದಲ್ಲಿ ಓಡಾಟ ನಡೆಸುವ ಡುಗ್ಗು, ರಾತ್ರಿಯ ಹೊತ್ತಿನಲ್ಲಿ ಕುಟುಂಬ ಸದಸ್ಯರ ಜೊತೆಗೆ ಬೆಡ್ ರೂಮ್ ನಲ್ಲಿಯೇ ಮಲಗುತ್ತಾನೆ.


ಗಿಳಿಯ ಕುರಿತು ಮಾಹಿತಿ ನೀಡಿರುವ ರಾಜೇಶ್ ಅವರ ಪುತ್ರಿ ಶೃಷ್ಟಿ, ತಮ್ಮ ತಂದೆಯ ಜೊತೆಗೆ ಮನೆಯಿಂದ ಕೆಲಸಕ್ಕಾಗಿ ಹೊರಗೆ ಹೋಗುವಾಗಲೂ ಕೂಡ ಡುಗ್ಗು ಅವರ ಹೆಗಲ ಮೇಲೆ ಕುಳಿತುಕೊಳ್ಳುತ್ತಾನೆ ಎನ್ನುತ್ತಾಳೆ. ಬೈಕ್ ಸವಾರಿ ನಡೆಸುವುದು ಡುಗ್ಗುಗೆ ಇಷ್ಟದ ಕೆಲಸ. ತನ್ನ ಹಲವು ಆಕರ್ಷಕ ಚಟುವಟಿಕೆಗಳ ಕಾರಣ ಅದರಲ್ಲೂ ವಿಶೇಷವಾಗಿ ಅಂಡ್ರಾಯಿಡ್ ಮೊಬೈಲ್ ಫೋನ್ ನಲ್ಲಿ ಯುಟ್ಯೂಬ್ ಚಲಾಯಿಸಿ ಅದರಲ್ಲಿ ಗಿಳಿಗಳಿಗೆ ಸಂಬಂಧಿಸಿದ ವಿಡಿಯೋ ವಿಕ್ಷೀಸುವುದು ಡುಗ್ಗು ಹಬ್ಯಾಸವಾಗಿದೆ.


ತಮ್ಮ ಗಿಳಿಯ ಬಗ್ಗೆ ಹೆಮ್ಮೆಯಿಂದ ಮಾತನಾಡುವ ರಾಜೇಶ್, ಸಾಮಾನ್ಯವಾಗಿ ಮಕ್ಕಳ ಕಾರಣ ಪೋಷಕರು ಹೆಸರುವಾಸಿಯಾಗುತ್ತಾರೆ. ಆದರೆ, ಡುಗ್ಗು ನನಗೆ ಹೆಸರು ತಂದುಕೊಟ್ಟಿದ್ದಾನೆ ಎನ್ನುತ್ತಾರೆ. ಕಳೆದ ಕೆಲ ದಿನಗಳಿಂದ ರಾಜೇಶ್ ವರ್ಮಾ ತಮ್ಮ ಗಿಳಿಯ ಕಾರಣ ಹೆಡ್ಲೈನ್ ನಲ್ಲಿದ್ದಾರೆ.  ಈ ಗಿಳಿಯ ಸಾಧನೆಗಳನ್ನು ನೋಡಲು ಹಲವರು ರಾಜೇಶ್ ವರ್ಮಾ ಅವರ ಮನೆಗೆ ಭೇಟಿ ನೀಡುತ್ತಾರೆ.