ಲಕ್ನೌ: ಉನ್ನಾವೋ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಪ್ರಾರಂಭಿಸಿದೆ. ಸಂತ್ರಸ್ತೆ ವಿಚಾರಣೆ ನಡೆಸಲು ಸಿಬಿಐ ತಂಡ ಉನ್ನಾವೋ ತಲುಪಿದೆ, ಇನ್ನೊಂದೆಡೆ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸಿಂಗರ್ ವಿಚಾರಣೆ ನಡೆಸಲಾಗುತ್ತಿದೆ. ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ಮುರಿದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 'ಸರ್ಕಾರ ಮತ್ತು ಆಡಳಿತ ಅಪರಾಧ ಮತ್ತು ಅಪರಾಧಿಗಳೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅಪರಾಧಿ ಎಷ್ಟು ದೊಡ್ಡವರಾದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

"ಪ್ರಕರಣದ ಮಾಹಿತಿ ದೊರೆತ ತಕ್ಷಣ, ಸರ್ಕಾರವು ತನಿಖೆಗಾಗಿ ಎಸ್ಐಟಿ ಅನ್ನು ರಚಿಸಿದೆ. ಅಪರಾಧ ಮತ್ತು ಭ್ರಷ್ಟಾಚಾರ ವಿಚಾರದಲ್ಲಿ ಯುಪಿಎ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಅಪರಾಧಿಗಳು ಯಾವುದೇ ಸ್ಥಿತಿಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಯೋಗಿ ವಿವರಿಸಿದರು.


ಶುಕ್ರವಾರ ಬೆಳಿಗ್ಗೆ ಆರೋಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಅವರನ್ನು ಸಿಬಿಐ ತಂಡ ಬಂಧಿಸಿದೆ. ಬೆಳಿಗ್ಗೆ 5 ಗಂಟೆಯಿಂದಲೂ ಏಳು ಜನರ ಸಿಬಿಐ ತಂಡ ಕುಲ್ದೀಪ್ ಅವರನ್ನು ಪ್ರಶ್ನಿಸುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಅಪರಾಧ ಸಂಭವಿಸಿದ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಆರೋಪಿ ಶಾಸಕನಿಂದ ಮಾಹಿತಿ ಕಲೆಹಾಕಲು ಸಿಬಿಐ ತಂಡ ಪ್ರಯತ್ನಿಸುತ್ತಿದೆ. ವಿಚಾರಣೆಯ ಪೂರ್ಣಗೊಂಡ ಬಳಿಕ ಸಿಬಿಐ ತಂಡ ನ್ಯಾಯಾಲಯದಲ್ಲಿ ಆರೋಪಿ ಶಾಸಕನನ್ನು ಹಾಜರುಪಡಿಸಲಿದೆ.