ನವದೆಹಲಿ : ದೇಶಾದ್ಯಂತ ಕರೋನವೈರಸ್ (Coronavirus) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕರೋನ ವೈರಸ್ ಎರಡನೇ ಅಲೆಯಲ್ಲಿ ಮಕ್ಕಳು  ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂಬುದು ಆತಂಕದ ವಿಷಯ. ಈ ಬಗ್ಗೆ ವೈದ್ಯರು ಕೂಡ ಆತಂಕ ವ್ಯಕ್ತಪಡಿಸುತ್ತಾರೆ. "ಈ ಎರಡನೇಅಲೆಯಲ್ಲಿ , ಮಕ್ಕಳಲ್ಲಿ ಕೋವಿಡ್ -19 (COVID-19) ಸೋಂಕಿನ ಹೊಸ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಮಕ್ಕಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಮೊದಲಿಗೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಮಕ್ಕಳಲ್ಲಿ ಕೋವಿಡ್ 19 ರ ಲಕ್ಷಣಗಳು :
ವೈದ್ಯರ ಪ್ರಕಾರ, ಕೋವಿಡ್ -19 (COVID-19) ನಿಂದ ಬಳಲುತ್ತಿರುವ ಹೆಚ್ಚಿನ ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ ಮತ್ತು ಹೊಟ್ಟೆಗೆ ಸಂಬಮಧಿಸಿದ ಸಮಸ್ಯೆಗಳು ಕಂಡು ಬರುತ್ತವೆ. ಕೆಲವರಲ್ಲಿ ಮೈಕೈ ನೋವು, ತಲೆನೋವು, ಅತಿಸಾರ ಮತ್ತು ವಾಂತಿ ಯಂತಹ (Vomiting) ಲಕ್ಷಣಗಳು ಕೂಡಾ ಕಂಡು ಬರುತ್ತಿವೆ.  ಈ ಎರಡನೇ ಅಲೆಯಲ್ಲಿ  ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೂ ಕೋವಿಡ್ ಲಕ್ಷಣಗಳು ಕಾಣುತ್ತಿರುವ ಬಗ್ಗೆ ವರದಿಯಾಗಿದೆ.  


ಇದನ್ನೂ ಓದಿ : Covid 19 Most Risky Places: ಕರೋನ ಎರಡನೇ ಅಲೆಯಿಂದ ರಕ್ಷಣೆ ಬೇಕೇ? ಈ ಸ್ಥಳಗಳಿಂದ ದೂರವಿರಿ


ಸೋಂಕಿಗೆ ಒಳಪಟ್ಟ ಮಕ್ಕಳು 103-104 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಜ್ವರದಿಂದ (Fever) ಬಳಲುತ್ತಿರುವುದು ಕಂಡುಬಂದಿದೆ. ಈ ಜ್ವರ  5-6 ದಿನಗಳವರೆಗೆ ಇರುತ್ತದೆ ನ್ನುತ್ತಾರೆ ಮಕ್ಕಳ ತಜ್ಞರು. ಅಲ್ಲದೆ ಕೆಲ ಮಕ್ಕಳಲ್ಲಿ ನ್ಯುಮೋನಿಯಾ ಲಕ್ಷಣಗಳು ಕೂಡಾ ಕಾಣಿಸಿಕೊಂಡಿವೆ. 


ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:
ಮಕ್ಕಳಲ್ಲಿ ಅತಿಸಾರ, ಉಸಿರಾಟದ ತೊಂದರೆ ಕಂಡುಬಂದಲ್ಲಿ ನಿರ್ಲಕ್ಷಿಸಬೇಡಿ. ಜ್ವರ ಇದ್ದು, ಅತಿಯಾದ ಸುಸ್ತು ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಜ್ವರದಿಂದ ಮಕ್ಕಳು ಬಳಲುತ್ತಿದ್ದರೆ ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ವಹಿಸದಂತೆ ಸೂಚಿಸಲಾಗಿದೆ. 
5-6 ದಿನಗಳವರೆಗೆ ಮಕ್ಕಳಲ್ಲಿ ಜ್ವರ ಇದ್ದರೆ, ಪೋಷಕರು ತಮ್ಮ ಮಕ್ಕಳ ರಕ್ತ ಪರೀಕ್ಷೆಗೆ (Blood test) ಒಳಪಡಿಸಬೇಕು. 


ಇದನ್ನೂ ಓದಿ : ಕರೋನಾ ಮಧ್ಯೆಯೇ ರೈಲ್ವೆ ಇಲಾಖೆಯ ಅಚ್ಚರಿಯ ಅತಿದೊಡ್ಡ ನಿರ್ಧಾರ..! ಏನದು ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.