ಕರೋನಾ ಮಧ್ಯೆಯೇ ರೈಲ್ವೆ ಇಲಾಖೆಯ ಅಚ್ಚರಿಯ ಅತಿದೊಡ್ಡ ನಿರ್ಧಾರ..! ಏನದು ?

ಬುಧವಾರ ಜಾರಿಗೊಳಿಸಲಾದ ಆದೇಶದ ಪ್ರಕಾರ, ರೈಲ್ವೆ ಇಲಾಖೆ  9,622 ವಿಶೇಷ ರೈಲುಗಳಿಗೆ ಅನುಮತಿ ನೀಡಿದೆ. ಅಂದರೆ ಪ್ರತಿದಿನ ದೇಶಾದ್ಯಂತ 7 ಸಾವಿರಕ್ಕೂ ಅಧಿಕ ರೈಲುಗಳು ಸಂಚರಿಸಲಿವೆ. 

Written by - Ranjitha R K | Last Updated : Apr 16, 2021, 09:05 AM IST
  • ಕರೋನಾ ಎರಡನೇ ಅಲೆ ಪ್ರಳಯಸ್ವರೂಪಿಯಾಗಿದೆ.
  • ಇದರ ನಡುವೆಯೇ ರೈಲ್ವೆ ಇಲಾಖೆಯು ಬಹುದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
  • ಕರೋನಾ ಕಾಲದಲ್ಲಿ ಶೇ. 70 ರಷ್ಟು ಪ್ರಮಾಣದಲ್ಲಿ ರೈಲ್ವೆ ಸಂಚಾರ ಮುಂದುವರಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಕರೋನಾ ಮಧ್ಯೆಯೇ ರೈಲ್ವೆ ಇಲಾಖೆಯ ಅಚ್ಚರಿಯ ಅತಿದೊಡ್ಡ ನಿರ್ಧಾರ..! ಏನದು ?

ನವದೆಹಲಿ : ಕರೋನಾ (Coronavisrus)ಎರಡನೇ ಅಲೆ ಪ್ರಳಯ ಸ್ವರೂಪಿಯಾಗಿದೆ.  ಇದರ ನಡುವೆಯೇ ರೈಲ್ವೆ ಇಲಾಖೆಯು (Indian Railway)ಬಹುದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ.  ಕರೋನಾ ಕಾಲದಲ್ಲಿ ಶೇ. 70 ರಷ್ಟು ಪ್ರಮಾಣದಲ್ಲಿ ರೈಲ್ವೆ ಸಂಚಾರ ಮುಂದುವರಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.  ಈ ನಿರ್ಧಾರದಂತೆ ರೈಲ್ವೆ ಇಲಾಖೆಯು ಮುಂದಿನ ದಿನಗಳಲ್ಲಿ 133 ರೈಲುಗಳನ್ನು (Train)ಓಡಿಸಲು ನಿರ್ಧರಿಸಿದೆ. ಅದರಲ್ಲಿ 88 ರೈಲುಗಳು ಬೇಸಿಗೆ ಸ್ಪೆಷಲ್  ಹಾಗೂ 45 ರೈಲುಗಳು ಹಬ್ಬದ ಸ್ಪೆಷಲ್ ರೂಪದಲ್ಲಿ ಸವಾರಿ ನಡೆಸಲಿವೆ. 

9,622 ವಿಶೇಷ ರೈಲುಗಳಿಗೆ ಅನುಮತಿ :
ಬುಧವಾರ ಜಾರಿಗೊಳಿಸಲಾದ ಆದೇಶದ ಪ್ರಕಾರ, ರೈಲ್ವೆ ಇಲಾಖೆ (Indian Railway) 9,622 ವಿಶೇಷ ರೈಲುಗಳಿಗೆ (Special Train) ಅನುಮತಿ ನೀಡಿದೆ. ಅಂದರೆ ಪ್ರತಿದಿನ ದೇಶಾದ್ಯಂತ 7 ಸಾವಿರಕ್ಕೂ ಅಧಿಕ ರೈಲುಗಳು ಸಂಚರಿಸಲಿವೆ. ಕರೋನಾ (Coronavirus) ತಾಂಡವಕ್ಕಿಂತ ಮೊದಲು ದೇಶದಲ್ಲಿ ಪ್ರತಿದಿನ 11283ರೈಲುಗಳು ಓಡುತ್ತಿದ್ದವು. ಸದ್ಯ ಈಗ ದೇಶದಲ್ಲಿ 5387 ಸಬ್ ಅರ್ಬನ್ ರೈಲುಗಳು ಓಡುತ್ತಿವೆ.  ಮಧ್ಯರೈಲ್ವೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈಲುಗಳು ಓಡುತ್ತಿವೆ. ಹೆಚ್ಚಿಗೆ ರೈಲು ಓಡುತ್ತಿರುವುದು ಮುಂಬೈ, ಪುಣೆ ವಿಭಾಗದಲ್ಲಿ.

ಇದನ್ನೂ ಓದಿ : Coronavirus: ಕರೋನಾವೈರಸ್‌ನಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿವೆ- ನಿತಿನ್ ಗಡ್ಕರಿ ಎಚ್ಚರಿಕೆ

ಮಧ್ಯ ರೈಲ್ವೆಯಲ್ಲಿ ಇದೀಗ ಶೇ. 82 ರಷ್ಟು ಮೇಲ್ ಎಕ್ಸ್ ಪ್ರೆಸ್ ಮತ್ತು ಶೇ. 25 ರಷ್ಟು ಲೋಕಲ್ ರೈಲುಗಳು (Local Train) ಸಂಚರಿಸುತ್ತಿವೆ.  ಕರೋನಾ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿವೆ ಜೊತೆಗೆ ಪ್ರವಾಸಿ ಕಾರ್ಮಿಕರು ತಮ್ಮ ರಾಜ್ಯಗಳಿಗೆ ವಲಸೆ ಹೋಗುತ್ತಿರುವ  ಈ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈಲುಗಳನ್ನು ಓಡಿಸುವ ರೈಲ್ವೆ ಇಲಾಖೆಯ ನಿರ್ಧಾರ ಅಚ್ಚರಿ ಹುಟ್ಟಿಸಿದೆ. 

ಇದನ್ನೂ ಓದಿ : 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 60 ಸಾವಿರ ಕೊರೊನಾ ಪ್ರಕರಣ ಹಾಗೂ 349 ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News