Omicron Variant ನ ಮೂರು ಮುಖ್ಯ ಲಕ್ಷಣಗಳು ಇವು, ಮೊದಲಿಗಿಂತ ಸಂಪೂರ್ಣ ಭಿನ್ನ
ದಕ್ಷಿಣ ಆಫ್ರಿಕಾದ ವೈದ್ಯರು ಓಮಿಕ್ರಾನ್ ರೋಗಲಕ್ಷಣಗಳು ಮತ್ತು ಲಸಿಕೆ ಪರಿಣಾಮದ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನವದೆಹಲಿ : ಭಾರತದಲ್ಲಿ ಕೊರೊನಾವೈರಸ್‌ನ ಹೊಸ ರೂಪಾಂತರವಾದ ಕೊರೊನಾವೈರಸ್ ಒಮಿಕ್ರಾನ್ (Coronavirus Omicron Variant) ಎರಡು ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಇದೀಗ ದೇಶಾದ್ಯಂತ ಆತಂಕ ಮನೆ ಮಾಡಿದೆ. ಕರೋನಾದ ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದೆ ಎನ್ನಲಾಗಿದೆ. ಮೊದಲ ಬಾರಿಗೆ, ದಕ್ಷಿಣ ಆಫ್ರಿಕಾದಲ್ಲಿ (South Africa) ಕಂಡುಬಂದ ಈ ರೂಪಾಂತರ, ಪ್ರಪಂಚದಾದ್ಯಂತದ ಇತರ ದೇಶಗಳಿಗೆ ವೇಗವಾಗಿ ಹರಡಿದೆ. ಈ ಹಿನ್ನೆಲೆಯಲ್ಲಿ ಇದು ಹೆಚ್ಚು ಸಾಂಕ್ರಾಮಿಕವಾಗಿದೆ ಎಂಬುದು ಸ್ಪಷ್ಟವಾಗಿದೆ. ಹೊಸ ರೂಪಾಂತರವು ಎಷ್ಟು ಮಾರಕವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು WHO ತಂಡವು ಸಂಶೋಧನೆಯಲ್ಲಿ ತೊಡಗಿದೆ.
ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾದ ವೈದ್ಯರು :
ದಕ್ಷಿಣ ಆಫ್ರಿಕಾದ ವೈದ್ಯರು ಓಮಿಕ್ರಾನ್ ರೋಗಲಕ್ಷಣಗಳು (Omicron Variant Symptoms) ಮತ್ತು ಲಸಿಕೆ ಪರಿಣಾಮದ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಏಂಜೆಲಿಕ್ ಕೊಯೆಟ್ಜಿ (Angelique Coetzee) ಮಾತನಾಡಿ, ಅನೇಕ ದೇಶಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಾಣುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ : ಈ ಬ್ಯಾಂಕ್‌ಗಳ ಗ್ರಾಹಕರಿಗೆ ಸಿಹಿ ಸುದ್ದಿ : ಉಚಿತವಾಗಿ ಸಿಗಲಿದೆ 5 ಲಕ್ಷ ರೂ. ಲಾಭ
ಇವು ಓಮಿಕ್ರಾನ್ ರೂಪಾಂತರದ 3 ಪ್ರಮುಖ ಗುಣಲಕ್ಷಣಗಳಾಗಿವೆ :
ವರದಿಯ ಪ್ರಕಾರ, ಓಮಿಕ್ರಾನ್ ರೂಪಾಂತರದ ರೋಗಲಕ್ಷಣಗಳು (Omicron Variant Symptoms) ಹಿಂದಿನ ತಳಿಗಳಿಗಿಂತ ಭಿನ್ನವಾಗಿರಬಹುದು ಎಂದು ವೈದ್ಯ ಏಂಜೆಲಿಕ್ ಕೊಯೆಟ್ಜಿ ಅಭಿಪ್ರಾಯಪಟ್ಟಿದ್ದಾರೆ. ಓಮಿಕ್ರಾನ್‌ನ (Omicron) ಮುಖ್ಯ ಲಕ್ಷಣಗಳ ಬಗ್ಗೆ ಮಾತನಾಡಿರುವ ಏಂಜೆಲಿಕ್ ಕೊಯೆಟ್ಜಿ, ರೋಗಿಗಳಲ್ಲಿ ಹೆಚ್ಚು ಆಯಾಸ, ಮೈ ಕೈ ನೋವು ಮತ್ತು ತಲೆನೋವು ಕಂಡುಬರುತ್ತಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಕೆಲವು ರೋಗಿಗಳಲ್ಲಿ ದೌರ್ಬಲ್ಯದ ಲಕ್ಷಣಗಳು ಕೂಡಾ ವರದಿಯಾಗಿವೆ. ಇಲ್ಲಿಯವರೆಗೆ ಯಾವುದೇ ರೋಗಿಗಿಯಲ್ಲಿ ವಾಸನೆಯ ನಷ್ಟ ಅಥವಾ ನಾಲಗೆ ರುಚಿ ನಷ್ಟ ತೀವ್ರ ಜ್ವರದಂತಹ ಸಮಸ್ಯೆ ಕೇಳಿ ಬಂದಿಲ್ಲ.
ಹೊಸ ರೂಪಾಂತರದಲ್ಲಿ ಲಸಿಕೆ ಪರಿಣಾಮಕಾರಿಯಾಗಿರುತ್ತದೆಯೇ?
ಕರೋನಾ ಲಸಿಕೆಯು (Corona vaccine) ಒಮಿಕ್ರಾನ್ ರೂಪಾಂತರದ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರುತ್ತಿದೆ ಎಂದು ವೈದ್ಯ ಏಂಜೆಲಿಕ್ ಕೊಯೆಟ್ಜಿ ಹೇಳಿದ್ದಾರೆ. ಏಕೆಂದರೆ ಲಸಿಕೆ ಹಾಕಿದ ಜನರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಓಮಿಕ್ರಾನ್ ರೂಪಾಂತರವು ಪ್ರಾಥಮಿಕ ಆರೋಗ್ಯ ರಕ್ಷಣೆಯ ಹಂತದಲ್ಲಿ ಡೆಲ್ಟಾ ರೂಪಾಂತರಕ್ಕಿಂತ (Delta variant) ಕಡಿಮೆಯಾಗಿದೆ. ಆದರೆ ಆಸ್ಪತ್ರೆಯ ಮಟ್ಟದಲ್ಲಿ ಈ ಚಿತ್ರಣ ಬದಲಾಗುವ ಸಾಧ್ಯತೆ ಇದೆ. ಯಾಕೆಂದರೆ ಇದು ಹೊಸ ರೂಪಾಂತರದ ಆರಂಭಿಕ ದಿನಗಳಾಗಿವೆ ಮತ್ತು ಹೆಚ್ಚಿನ ಜನರು ಆಸ್ಪತ್ರೆಗಳಿಗೆ ದಾಖಲಾಗಿಲ್ಲ.
ಇದನ್ನೂ ಓದಿ : ಈ ಬ್ಯಾಂಕ್ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ 20 ಲಕ್ಷಗಳ ಪ್ರಯೋಜನ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.