ನವದೆಹಲಿ : PNB MySalary Account : PNB ತನ್ನ ಗ್ರಾಹಕರಿಗೆ 20 ಲಕ್ಷ ರೂಪಾಯಿಗಳ ಸಂಪೂರ್ಣ ಲಾಭವನ್ನು ಉಚಿತವಾಗಿ ನೀಡುತ್ತಿದೆ. ನೀವು ಉದ್ಯೋಗದಲ್ಲಿದ್ದರೆ ಮತ್ತು ಖಾತೆಯನ್ನು ತೆರೆಯಲು ಯೋಚಿಸುತ್ತಿದ್ದರೆ, PNBಯಲ್ಲಿ ಖಾತೆ ತೆರೆಯುವ ಮೂಲಕ ಈ ವಿಶೇಷ ಕೊಡುಗೆಯ ಲಾಭವನ್ನು ಪಡೆಯಬಹುದು. ಇದಕ್ಕಾಗಿ ನೀವು ಬ್ಯಾಂಕಿನಲ್ಲಿ PNB MySalary ಖಾತೆಯನ್ನು ತೆರೆಯಬೇಕು.
ಈ ಸೌಲಭ್ಯಗಳು PNB ನಲ್ಲಿ ಲಭ್ಯ :
PNB ನೀಡಿರುವ ಮಾಹಿತಿಯ ಪ್ರಕಾರ, ನಿಮ್ಮ ಸಂಬಳವನ್ನು ಉತ್ತಮವಾಗಿ ನಿರ್ವಹಿಸಲು ಬಯಸುವುದಾದರೆ 'PNB MySalary Account' ತೆರೆಯಿರಿ. ಯಾರಿಗಾದರೂ ಅಪಘಾತ ಸಂಭವಿಸಿದಲ್ಲಿ, ಇದರ ಅಡಿಯಲ್ಲಿ, ವಿಮೆಯೊಂದಿಗೆ ಓವರ್‌ಡ್ರಾಫ್ಟ್ ಮತ್ತು ಸ್ವೀಪ್ ಸೌಲಭ್ಯವೂ ಸಹ ಲಭ್ಯವಿರುತ್ತದೆ.
ಇದನ್ನೂ ಓದಿ : ಗ್ರಾಹಕರ ಗಮನಕ್ಕೆ: ಹೊಸ ವರ್ಷದಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು
ಈ ರೀತಿ ಸಿಗಲಿದೆ 20 ಲಕ್ಷ ರೂ.ಗಳ ಲಾಭ :
PNBಯಲ್ಲಿ ಸ್ಯಾಲರಿ ಅಕೌಂಟ್ ಇದ್ದವರಿಗೆ ವಿಮಾ ರಕ್ಷಣೆ ಸೇರಿದಂತೆ ಹಲವು ಇತರ ಪ್ರಯೋಜನಗಳನ್ನು ನೀಡುತ್ತಿದೆ. ಶೂನ್ಯ ಬ್ಯಾಲೆನ್ಸ್ ಮತ್ತು ಶೂನ್ಯ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ ಸೌಲಭ್ಯದೊಂದಿಗೆ PNB MySalary Account ತೆರೆದರೆ, 20 ಲಕ್ಷ ರೂಪಾಯಿಗಳ ವೈಯಕ್ತಿಕ ಅಪಘಾತ ರಕ್ಷಣೆಯನ್ನು ನೀಡಲಾಗುತ್ತಿದೆ.
ಈ ಖಾತೆಯು 4 ವರ್ಗಗಳನ್ನು ಹೊಂದಿದೆ :
1. 'ಸಿಲ್ವರ್ ಕೆಟಗರಿ - ಇದರಲ್ಲಿ 10 ಸಾವಿರದಿಂದ 25 ಸಾವಿರದವರೆಗಿನ ಮಾಸಿಕ ವೇತನ ಇರುವವರನ್ನು ಇರಿಸಲಾಗಿದೆ.
2. ಗೋಲ್ಡ್ ಕೆಟಗರಿ - ಈ ವರ್ಗದಲ್ಲಿ, 25001 ರಿಂದ 75000 ರವರೆಗಿನ ಮಾಸಿಕ ವೇತನ ಹೊಂದಿರುವವರನ್ನು ಇರಿಸಲಾಗಿದೆ.
3. 'ಪ್ರೀಮಿಯಂ' ಕೆಟಗರಿ - ಇದರಲ್ಲಿ 75001 ರೂ.ನಿಂದ 150000 ರೂ.ವರೆಗಿನ ಮಾಸಿಕ ವೇತನ ಹೊಂದಿರುವವರನ್ನು ಇರಿಸಲಾಗಿದೆ.
4. 'ಪ್ಲಾಟಿನಂ' ಕೆಟಗರಿ - ಈ ವರ್ಗದಲ್ಲಿ, 150001 ರೂ.ಗಿಂತ ಹೆಚ್ಚು ಮಾಸಿಕ ವೇತನ ಹೊಂದಿರುವವರನ್ನು ಇರಿಸಲಾಗಿದೆ.
ಇದನ್ನೂ ಓದಿ: PF ಖಾತೆದಾರರಿಗೆ ಬಿಗ್ ಶಾಕ್ : ಈ ಕೆಲಸ ಮಾಡದಿದ್ದರೆ ತಪ್ಪಿದ್ದಲ್ಲ ಸಮಸ್ಯೆ!
ಯಾರಿಗೆ ಎಷ್ಟು ಲಾಭ ?
-ಬ್ಯಾಂಕ್‌ನಿಂದ (Bank) ಗ್ರಾಹಕರಿಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡಲಾಗುತ್ತದೆ.
-'ಸಿಲ್ವರ್ ಕೆಟಗರಿಯಲ್ಲಿರುವವರು 50,000 ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ.
- ಗೋಲ್ಡ್ ಕೆಟಗರಿಯಲ್ಲಿರುವವರು 150000 ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ.
- ಪ್ರೀಮಿಯಂ ಕೆಟಗರಿಯಲ್ಲಿರುವವರು 225000 ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ.
- ಪ್ಲಾಟಿನಂ ಕೆಟಗರಿಯಲ್ಲಿರುವವರು 300000 ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ.
ನೀವು https://www.pnbindia.in/salary saving products.html ಈ ಲಿಂಕ್‌ಗೆ ಭೇಟಿ ನೀದುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.