ನವದೆಹಲಿ: ಕೊರೊನಾ ಪ್ರಕೋಪದ ಹಿನ್ನೆಲೆ ಹಲವು ಕಂಪನಿಗಳು ತಮ್ಮ ನೌಕರರನ್ನು ಕೆಲಸದಿಂದ ವಜಾಗೊಳಿಸಿವೆ. ಕೆಲ ಕಂಪನಿಗಳು ವೇತನದಲ್ಲಿ ಕಡಿತಗೊಳಿಸಿದ್ದರೆ, ಇನ್ನೂ ಕೆಲವು ಕಂಪನಿಗಳು ತಮ್ಮ ನೌಕರರನ್ನು ಯಾವುದೇ ವೇತನ ನೀಡದೆ ರೆಜೆಯ ಮೇಲೆ ಕಳುಹಿಸಿವೆ. ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ಕೆಲ ಕಂಪನಿಗಳು ತಮ್ಮ ನೌಕರರ ಮೇಲೆ ಸಂಕಷ್ಟದ ಕಾರ್ಮೋಡ ಬೀಳದಂತೆ ನೋಡಿಕೊಂಡಿವೆ. ಇವುಗಳಲ್ಲಿ ಹಿಂದುಸ್ತಾನ್ ಯುನಿಲೀವರ್, ಏಶಿಯನ್ ಪೇಂಟ್ಸ್, ಜಾನ್ಸನ್ ಅಂಡ್ ಜಾನ್ಸನ್, HCCB, ಫ್ಲಿಪ್ ಕಾರ್ಟ್, ಮಿಂತ್ರಾ, CSS ಕಾರ್ಪ್, ಭಾರತ್ ಪೇ, BSH ಹೋಂ ಅಪ್ಲೈನ್ಸ್ ಹಾಗೂ ಇನ್ಫ್ಲೇಕ್ಷನ್ ಪಾಯಿಂಟ್ ವೆಂಚರ್ಸ್ ಶಾಮೀಲಾಗಿವೆ. ಈ ಕಂಪನಿಗಳು ತನ್ನ ನೌಕರರ ಸಂಬಳವನ್ನು ಹೆಚ್ಚಿಸಿ ಅವರಿಗೆ ವೇರಿಯೇಬಲ್ ಪೇ ಕೂಡ ನೀಡಿವೆ. ಜೊತೆಗೆ ಕೆಲ ನೌಕರರಿಗೆ ಬಡ್ತಿ ಕೂಡ ನೀಡಿವೆ.


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ ತಜ್ಞರು, ಕಂಪನಿಗಳು ಕೊರೊನಾ ವೈರಸ್ ತಮ್ಮ ತಮ್ಮ ವ್ಯಾಪಾರಗಳ ಮೇಲೆ ಬೀರಿರುವ ಪ್ರಭಾವವನ್ನು ಆಧರಿಸಿ ಕಂಪನಿಗಳು ನಿರ್ಣಯ ಕೈಗೊಳ್ಳುತ್ತಿವೆ ಎಂದಿದ್ದಾರೆ. ಆದರೆ, ಸಂಕಷ್ಟದ ಈ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳಿಂದ ಅವರ ನೌಕರರ ಮೇಲೆ ಹೆಚ್ಚಿನ ಪ್ರಭಾವ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ CSS ಕಾರ್ಪ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮನೀಶ್ ಟಂಡನ್, "ಈ ಸಂಕಷ್ಟದ ಪರಿಸ್ಥಿತಿ ಕಂಪನಿಗಳಿಗೆ ತನ್ನ ನೌಕರರ ಕಾಳಜಿ ವಹಿಸುವ ದೊಡ್ಡ ಅವಕಾಶ ಕಲ್ಪಿಸಿದೆ. ವೇತನ ಹೆಚ್ಚಿಸುವುದರಿಂದ ಇಂತಹ ಕಠಿಣ ಪರಿಸ್ಥಿತಿಯಲ್ಲಿ ನೌಕರರಿಗೆ ನಿಶ್ಚಿತ ನೆಮ್ಮದಿ ಸಿಗಲಿದೆ ಎಂಬುದು ನಮ್ಮ ಅನಿಸಿಕೆಯಾಗಿದೆ" ಎಂದಿದ್ದಾರೆ.


CSS ಕಾರ್ಪ್ ತನ್ನ ಒಟ್ಟು 7 ನೌಕರರ ಸಂಬಳ ಹೆಚ್ಚಿಸಿದೆ. ಅವರಿಗೆ ಕಂಪನಿ ವೇರಿಯೇಬಲ್ ಪೇ ಕೂಡ ನೀಡಿದೆ. ಕಂಪನಿ ಆರಂಭದ ಹಂತದಲ್ಲಿ ತನ್ನ ನೌಕರರಿಗೆ ಶೇ.100ರಷ್ಟು ವೇರಿಯೇಬಲ್ ಪೇ ನೀಡಿದೆ. ಕಂಪನಿಯ ಒಟ್ಟು ಕೆಲಸಗಾರರ ಸಂಖ್ಯೆಯ ಇದು ಶೇ.70ರಷ್ಟಾಗಿದೆ. CSS ಕಾರ್ಪ್ IT ಸೇವೆಯನ್ನೂ ಸಹ ಒದಗಿಸುತ್ತದೆ.


ಈ ಕುರಿತು ಹೇಳಿಕೆ ನೀಡಿರುವ BSH ಹೋಮ್ ಅಪ್ಲೈನ್ಸ್ ಸಿಇಓ ನೀರಜ್ ಬಹಲ್, "ಈ ಅನಿಶ್ಚಿತತೆಯ ಕಾಲದಲ್ಲಿ ನೌಕರರ ಆತ್ಮವಿಶ್ವಾಸವನ್ನು ಕಾಯುವುದು ನಮ್ಮ ಜವಾಬ್ದಾರಿಯಾಗಿದೆ." ಎಂದಿದ್ದಾರೆ. ತನ್ನ ನೌಕರರ ವೇತನವನ್ನು ಹೆಚ್ಚಿಸಿರುವ ಈ ಕಂಪನಿ, ತನ್ನ ಮಾರ್ಕೆಟಿಂಗ್ ಹಾಗೂ ಟ್ರಾವೆಲ್ ಖರ್ಚನ್ನು ತಗ್ಗಿಸಿ, ಹೊಸ ಭರ್ತಿಗಳನ್ನು ನಿಲ್ಲಿಸಿದೆ.


ಇನ್ಫ್ಲೆಕ್ಶನ್ ಪಾಯಿಂಟ್ ವೆಂಚರ್ಸ್ ಸಿಇಓ ವಿನಯ್ ಬನ್ಸಲ್ ಹೇಳುವ ಪ್ರಕಾರ, "ನಾವು ನೌಕರರನ್ನು ಕೆಲಸದಿಂದ ವಜಾಗೊಳಿಸುವದಾಗಲಿ ಅಥವಾ ಅವರ ವೇತನ ಕಡಿತಗೊಳಿಸುವುದಾಗಲಿ ಮಾಡಿಲ್ಲ. ಮೊದಲು ನಾವು ನಮ್ಮ ನೌಕರರ ಬಗ್ಗೆ ಕಾಳಜಿ ವಹಿಸುತ್ತೇವೆ, ನೌಕರರೆ ನಮ್ಮ ಕಂಪನಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾರೆ ಎಂಬುದ ನಮ್ಮ ಅನಿಸಿದೆ" ಎಂದು ಹೇಳಿದ್ದಾರೆ. TCS, WIPRO, PWC ಇಂಡಿಯಾ ಹಾಗೂ ಇನ್ಫೋಸಿಸ್ ಕಂಪನಿಗಳು ವೇತನ ವೃದ್ಧಿಯನ್ನು ನಿಲ್ಲಿಸಿವೆ. RIL, OYO ರೂಮ್ಸ್ ಹಾಗೂ TVS ಮೋಟರ್ಸ್ ಕಂಪನಿಗಳು ವೇತನ ಕಡಿತ ಮಾಡಿದ್ದರೆ, ಓಲಾ, ಊಬರ್, ಝೋಮ್ಯಾಟೋ  ಹಾಗೂ IBM ಕಂಪನಿಗಳು ತಮ್ಮ ನೌಕರರನ್ನು ವಜಾಗೊಳಿಸಿವೆ.