ವೈಷ್ಣೋದೇವಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹಬ್ಬದ ಸೀಸನ್‌ನಲ್ಲಿ ವೈಷ್ಣೋದೇವಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನೂ ಎರಡು ವಿಶೇಷ ರೈಲುಗಳನ್ನು ಆರಂಭಿಸುವುದಾಗಿ ರೈಲ್ವೆ ಘೋಷಿಸಿದೆ. ಈ ವಿಶೇಷ ರೈಲುಗಳು ನ್ಯೂ ಡೆಲ್ಲಿ ಮತ್ತು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ನಡುವೆ ಸಂಚರಿಸಲಿವೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಮಾಹಿತಿಯ ಪ್ರಕಾರ, ರೈಲು ಸಂಖ್ಯೆ 01633/01634 ನ್ಯೂ ಡೆಲ್ಲಿ -ಶ್ರೀ ಮಾತಾ ವೈಷ್ಣೋದೇವಿ ಕತ್ರಾ ವಿಶೇಷ ರೈಲು ಇಂದಿನಿಂದ ಅಂದರೆ ಆಗಸ್ಟ್ 11 ರಿಂದ ಪ್ರಾರಂಭವಾಗಲಿದೆ.


ರೈಲು ಸಂಖ್ಯೆ. 01633 ನ್ಯೂ ಡೆಲ್ಲಿ  - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ವಿಶೇಷ ರೈಲು ಆಗಸ್ಟ್ 11 ರಂದು ರಾತ್ರಿ 11.30 ಕ್ಕೆ ನವದೆಹಲಿಯಿಂದ ಹೊರಟು ಮರುದಿನ ಮಧ್ಯಾಹ್ನ 12.00 ಕ್ಕೆ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ತಲುಪಲಿದೆ. 


ಅದೇ ಸಮಯದಲ್ಲಿ, ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ. 01634 ಆಗಸ್ಟ್ 14 ರ ಭಾನುವಾರದಂದು ರಾತ್ರಿ 09.10 ಕ್ಕೆ ಶ್ರೀ ಮಾತಾ ವೈಷ್ಣೋದೇವಿ ಕತ್ರಾದಿಂದ ಹೊರಟು ಮರುದಿನ ಬೆಳಿಗ್ಗೆ 10.30 ಕ್ಕೆ ನ್ಯೂ ಡೆಲ್ಲಿಯನ್ನು ತಲುಪಲಿದೆ.


ಇದನ್ನೂ ಓದಿ- ಬೆಂಗಳೂರಿನಿಂದ ಕಾಶಿಗೆ ತೆರಳಬೇಕೇ! ಕರ್ನಾಟಕ ಸರ್ಕಾರದಿಂದ ವಿಶೇಷ ವ್ಯವಸ್ಥೆ


ರೈಲು ಸಂಚರಿಸುವ ಮಾರ್ಗ:
ಹವಾನಿಯಂತ್ರಿತ ಮತ್ತು ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಹೊಂದಿರುವ ಈ ವಿಶೇಷ ರೈಲು ಸೋನಿಪತ್, ಪಾಣಿಪತ್, ಕರ್ನಾಲ್ ಕುರುಕ್ಷೇತ್ರ, ಅಂಬಾಲಾ ಕಂಟೋನ್ಮೆಂಟ್, ಲುಧಿಯಾನ, ಜಲಂಧರ್ ಕಂಟೋನ್ಮೆಂಟ್, ಪಠಾಣ್‌ಕೋಟ್ ಕಂಟೋನ್ಮೆಂಟ್, ಜಮ್ಮು ತಾವಿ ಮತ್ತು ಉಧಮ್‌ಪುರ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ. 


ಅದೇ ಸಮಯದಲ್ಲಿ, ಇದರ ಹೊರತಾಗಿ, 04033/04034 ನ್ಯೂ ಡೆಲ್ಲಿ-ಶ್ರೀ ಮಾತಾ ವೈಷ್ಣೋದೇವಿ ಕತ್ರಾ-ನ್ಯೂ ಡೆಲ್ಲಿ ವಿಶೇಷ ರೈಲು ಕೂಡ ಪ್ರಾರಂಭವಾಗಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.


ಇದನ್ನೂ ಓದಿ- Indian Railways Rule: ಟ್ರೈನ್ ಟಿಕೆಟ್ ಬುಕ್ ಮಾಡುವ ಮುನ್ನ ಬರ್ತ್‌ಗೆ ಸಂಬಂಧಿಸಿದ ಈ ನಿಮಯ ತಿಳಿಯಿರಿ


04033 ನ್ಯೂ ಡೆಲ್ಲಿ  - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ವಿಶೇಷ ರೈಲು ಆಗಸ್ಟ್ 12 ರಂದು 11.30 ಗಂಟೆಗೆ ನವದೆಹಲಿಯಿಂದ ಹೊರಡಲಿದ್ದು, ಮರುದಿನ 12.00 ಗಂಟೆಗೆ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ತಲುಪಲಿದೆ. ರೈಲು ಸಂಖ್ಯೆ 04034 ಆಗಸ್ಟ್ 15 ರಂದು ರಾತ್ರಿ 09.10 ಕ್ಕೆ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾದಿಂದ ಹೊರಡಲಿದೆ ಮತ್ತು ಮರುದಿನ ಬೆಳಿಗ್ಗೆ 10.30 ಕ್ಕೆ ನ್ಯೂ ಡೆಲ್ಲಿ  ತಲುಪಲಿದೆ. ಎಸಿ ಮತ್ತು ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಹೊಂದಿರುವ ಈ ವಿಶೇಷ ರೈಲು ಸೋನಿಪತ್, ಪಾಣಿಪತ್, ಕರ್ನಾಲ್, ಕುರುಕ್ಷೇತ್ರ, ಅಂಬಾಲಾ ಕಂಟೋನ್ಮೆಂಟ್, ಲೂಧಿಯಾನ, ಜಲಂಧರ್ ಕಂಟೋನ್ಮೆಂಟ್, ಪಠಾಣ್‌ಕೋಟ್ ಕಂಟೋನ್ಮೆಂಟ್, ಜಮ್ಮು ತಾವಿ ಮತ್ತು ಉಧಮ್‌ಪುರ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ ಎಂದು ತಿಳಿದುಬಂದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.