/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ : Indian Railways : ಮುಂದಿನ ತಿಂಗಳು ಅಂದರೆ ಆಗಸ್ಟ್ ರೈಲಿನಲ್ಲಿ ಪ್ರಯಾಣಿಸುವವರಿಗೆ ವಿಶೇಷವಾಗಿರುತ್ತದೆ. ದೇಶದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್‌ನ ನವೀಕರಿಸಿದ ಆವೃತ್ತಿಯನ್ನು ಆಗಸ್ಟ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.  2019 ರಲ್ಲಿ ವಂದೇ ಭಾರತ್ ರೈಲುಗಳನ್ನು ಆರಂಭಿಸಲಾಗಿತ್ತು.   

ಓಡಾಟ ನಡೆಸಲಿವೆ 75 ಹೈಸ್ಪೀಡ್ ವಂದೇ ಭಾರತ್ ರೈಲು : 
ದೂರವನ್ನು ಕ್ರಮಿಸಿಲು ಕಡಿಮೆ ಸಮಯ ತೆಗೆದುಕೊಳ್ಳುವುದು ಮಾತ್ರವಲ್ಲದೆ ಈ ರೈಲಿನಲ್ಲಿ ಸಿಗುವ ಸೌಲಭ್ಯಗಳ ಕಾರಣದಿಂದಾಗಿ, ವಂದೇ ಭಾರತ್ ರೈಲು ಪ್ರಯಾಣಿಕರ ಮೆಚ್ಚುಗೆ ಗಳಿಸಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಹಲವು ವಂದೇ ಭಾರತ್ ರೈಲುಗಳನ್ನು ಓಡಿಸಲು ರೈಲ್ವೆ ನಿರ್ಧರಿಸಿದೆ. ಭಾರತೀಯ ರೈಲ್ವೇ ಆಗಸ್ಟ್ 15, 2023 ರೊಳಗೆ 75 ಹೈಸ್ಪೀಡ್ ವಂದೇ ಭಾರತ್ ರೈಲುಗಳನ್ನು ಹಳಿಗಿಳಿಸಲು ತೀರ್ಮಾನಿಸಿದೆ. 

ಇದನ್ನೂ ಓದಿ : 07-07-2022 Today Vegetable Price: ಇಂದು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ

ಗಾಂಧಿನಗರದಲ್ಲಿರುವ ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡು ನವೀಕರಿಸಿದ ಆವೃತ್ತಿಗಳು ಬರಲಿವೆ ಎಂದು ತಿಳಿಸಿದ್ದಾರೆ. ಎರಡನೇ ನವೀಕರಿಸಿದ ಆವೃತ್ತಿಯು ಮುಂದಿನ ತಿಂಗಳು ಅಂದರೆ ಆಗಸ್ಟ್ 2022 ರ ವೇಳೆಗೆ ಮತ್ತೆ ಹಳಿಗೆ ಬರಲಿವೆ. ಆದರೆ ಮೂರನೇ ನವೀಕರಿಸಿದ ಆವೃತ್ತಿ ಹಳಿಗಿಳಿಯಲು ಇನ್ನೂ ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಳ್ಳಲಿದೆ. 

ವಂದೇ ಭಾರತ್‌ನ ನವೀಕರಿಸಿದ ಆವೃತ್ತಿಯು ಪ್ರಸ್ತುತ ರೈಲಿಗಿಂತ  ಅಡ್ವಾನ್ಸ್ ಆಗಿರಲಿದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಪ್ರಸ್ತುತ ಹಳಿಗಳ ಮೇಲೆ ಓಡುತ್ತಿರುವ ವಂದೇ ಭಾರತ್‌ನ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ. ಅದರ ಎರಡನೇ ನವೀಕರಿಸಿದ ಆವೃತ್ತಿಯ ಗರಿಷ್ಠ ವೇಗವು 180 kmph ಆಗಿರುತ್ತದೆ ಮತ್ತು ಮೂರನೇ ನವೀಕರಿಸಿದ ಆವೃತ್ತಿಯು 220 kmph ವೇಗದಲ್ಲಿ ಚಲಿಸಲಿದೆ. 

ಇದನ್ನೂ ಓದಿ : ಕೇವಲ ಮಿಸ್ ಕಾಲ್ ಮೂಲಕ ತಿಳಿದುಕೊಳ್ಳಿ ಜನ್ ಧನ್ ಖಾತೆಯಲ್ಲಿ ಇರುವ ಬ್ಯಾಲೆನ್ಸ್

ಆಗಸ್ಟ್ 15, 2023 ರೊಳಗೆ 75 ವಂದೇ ಭಾರತ್ ರೈಲುಗಳನ್ನು ಹೊರತರಲು  ಸರ್ಕಾರ ಯೋಜಿಸಿದ್ದು, ಪ್ರತಿ ತಿಂಗಳು 5 ರಿಂದ 6 ವಂದೇ ಭಾರತ್ ರೈಲುಗಳು  ಹಳಿಗೆ ಇಳಿಯಲಿವೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಪ್ರಕಾರ ಆಗಸ್ಟ್ 2022 ರಿಂದ, ಪ್ರತಿ ತಿಂಗಳು 5 ರಿಂದ 6 ವಂದೇ ಭಾರತ್ ರೈಲುಗಳು ಓಡಾಟ ನಡೆಸಲಿವೆ. 

ಮುಂಬರುವ ಸಮಯದಲ್ಲಿ, ಇಂಟರ್‌ಸಿಟಿ, ಶತಾಬ್ದಿ ಮತ್ತು ಜನಶತಾಬ್ದಿ ರೈಲುಗಳನ್ನು ಬದಲಿಸುವ ಮೂಲಕ ವಂದೇ ಭಾರತವನ್ನು ಆಯಾ ಮಾರ್ಗದಲ್ಲಿ ಪ್ರಾರಂಭಿಸಲಾಗುವುದು. ಹೊಸ ವಂದೇ ಭಾರತ್ ಅನ್ನು ಅನೇಕ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗುವುದು ಎಂದು ರೈಲ್ವೆ ಸಚಿವರು ಹೇಳಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
75 Vande Bharat Trains to come by 2023
News Source: 
Home Title: 

ರೈಲು ಯಾತ್ರಿಗಳಿಗೆ ಮಹತ್ವದ ಘೋಷಣೆ ಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ರೈಲು ಯಾತ್ರಿಗಳಿಗೆ ಮಹತ್ವದ ಘೋಷಣೆ ಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
Caption: 
Ashwini Vaishnaw (file photo)
Yes
Is Blog?: 
No
Tags: 
Facebook Instant Article: 
Yes
Highlights: 

ಓಡಾಟ ನಡೆಸಲಿವೆ 75 ಹೈಸ್ಪೀಡ್ ವಂದೇ ಭಾರತ್ ರೈಲು

ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ಸಚಿವ 

ಆಗಸ್ಟ್ 15, 2023 ರೊಳಗೆ 75 ವಂದೇ ಭಾರತ್ ರೈಲು ಹಳಿಗೆ

Mobile Title: 
ರೈಲು ಯಾತ್ರಿಗಳಿಗೆ ಮಹತ್ವದ ಘೋಷಣೆ ಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
Ranjitha R K
Publish Later: 
No
Publish At: 
Thursday, July 7, 2022 - 10:21
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No