ಶೀಘ್ರದಲ್ಲೇ ರೌದ್ರ ರೂಪ ಪಡೆಯಲಿರುವ Biporjoy ಸೈಕ್ಲೋನ್! ಈ ರಾಜ್ಯಗಳಿಗೆ ಅಲರ್ಟ್ ಜಾರಿ
Biporjoy Cyclone:IMD ಪ್ರಕಾರ, ಬಿಪರ್ ಜಾಯ್ ಚಂಡಮಾರುತ ಮುಂದಿನ 36 ಗಂಟೆಗಳಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಗುಜರಾತ್, ಸೌರಾಷ್ಟ್ರ, ಉತ್ತರ ಕೇರಳ, ಕರ್ನಾಟಕ ಮತ್ತು ಗೋವಾದಲ್ಲಿಯೂ ಇದರ ಪರಿಣಾಮ ಕಂಡು ಬರಲಿದೆ.
Biporjoy Cyclone : ಬಿಪರ್ ಜಾಯ್ ಚಂಡಮಾರುತವು ದೇಶದ ಪಶ್ಚಿಮ ಭಾಗದ ಕರಾವಳಿ ರಾಜ್ಯಗಳಲ್ಲಿ ಆತಂಕ ಹೆಚ್ಚಿಸಿದೆ. ಬಿಪರ್ ಜಾಯ್ ಚಂಡಮಾರುತದ ಈ ರಾಜ್ಯಗಳ ಕರಾವಳಿ ಪ್ರದೇಶಗಳತ್ತ ಮುನ್ನುಗ್ಗುತ್ತಿದೆ. IMD ಪ್ರಕಾರ, ಬಿಪರ್ ಜಾಯ್ ಚಂಡಮಾರುತ ಮುಂದಿನ 36 ಗಂಟೆಗಳಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಗುಜರಾತ್, ಸೌರಾಷ್ಟ್ರ, ಉತ್ತರ ಕೇರಳ, ಕರ್ನಾಟಕ ಮತ್ತು ಗೋವಾದಲ್ಲಿಯೂ ಇದರ ಪರಿಣಾಮ ಕಂಡು ಬರಲಿದೆ. ಹವಾಮಾನ ಇಲಾಖೆಯ ಪ್ರಕಾರ, ಬಿಪರ್ ಜಾಯ್ ಚಂಡಮಾರುತ ಉತ್ತರದಿಂದ ವಾಯುವ್ಯದತ್ತ ಚಲಿಸುತ್ತಿದೆ.
ಮೀನುಗಾರರಿಗೆ ಸೂಚನೆ :
ಬಿಪರ್ ಜಾಯ್ ಚಂಡಮಾರುತವು ಅರಬ್ಬೀ ಸಮುದ್ರದಲ್ಲಿ ಉತ್ತರದ ಕಡೆಗೆ ಚಲಿಸುತ್ತಿದೆ ಎನ್ನಲಾಗಿದೆ. ಗುಜರಾತ್‌ನ ಕರಾವಳಿ ಪೋರಬಂದರ್ ಜಿಲ್ಲೆಯ ಸುಮಾರು 870 ಕಿಮೀ ದಕ್ಷಿಣ-ನೈಋತ್ಯದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಆಳ ಸಮುದ್ರದಿಂದ ಸಮುದ್ರ ತೀರಕ್ಕೆ ಮರಳುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಇದಲ್ಲದೇ ಬಂದರುಗಳಿಗೆ ರಿಮೋಟ್ ವಾರ್ನಿಂಗ್ ಸಿಗ್ನಲ್ ಗಳನ್ನು ನೀಡುವಂತೆಯೂ ಸೂಚಿಸಲಾಗಿದೆ.
ಇದನ್ನೂ ಓದಿ : ಕೇದಾರನಾಥ ದೇಗುಲದ ಬಳಿ ಭಾರೀ ಹಿಮಪಾತ..! ವಿಡಿಯೋ ವೈರಲ್
ಹವಾಮಾನ ಇಲಾಖೆ ಎಚ್ಚರಿಕೆ :
ಅರಬ್ಬೀ ಸಮುದ್ರದಲ್ಲಿ ಏಳಲಿರುವ ಈ ವರ್ಷದ ಮೊದಲ ಚಂಡಮಾರುತದ ಕಾರಣ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಿಪರ್ ಜಾಯ್ ಚಂಡಮಾರುತದಿಂದಾಗಿ ಜೂನ್ 10, 11 ಮತ್ತು 12 ರಂದು ಗಂಟೆಗೆ 45 ರಿಂದ 55 ಮೈಲುಗಳ ವೇಗದಲ್ಲಿ ಗಾಳಿ ಬೀಸಬಹುದು ಎಂದು ಅಹಮದಾಬಾದ್‌ನ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ಹೇಳಿದ್ದಾರೆ.
ಬಿಪರ್ ಜಾಯ್ ಚಂಡಮಾರುತವನ್ನು ಎದುರಿಸಲು ಸಿದ್ಧತೆಗಳು :
ಬಿಪರ್ ಜಾಯ್ ಚಂಡಮಾರುತದಿಂದಾಗಿ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಿಮೋಟ್ ಎಚ್ಚರಿಕೆ ಸಂಕೇತಗಳನ್ನು ನೀಡಲು ಎಲ್ಲಾ ಬಂದರುಗಳಿಗೆ ಸೂಚಿಸಲಾಗಿದೆ. ಎನ್‌ಡಿಆರ್‌ಎಫ್‌ನ 15 ತಂಡಗಳು ಮತ್ತು ಎಸ್‌ಡಿಆರ್‌ಎಫ್‌ನ 11 ತಂಡಗಳು ಗುಜರಾತ್‌ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಿದ್ಧವಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : Karnataka ದಲ್ಲಿ ಭಾರಿ ಹಿನ್ನಡೆಯ ಬಳಿಕ ಬಿಜೆಪಿಗೆ ಆರ್ಎಸ್ಎಸ್ ಸಲಹೆ, ಕಾಂಗ್ರೆಸ್ ಗೆಲ್ಲಲು ಇದೇ ಕಾರಣ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.