ಬಿಜೆಪಿ ಸೇರಿದ ನಂತರ ಟಿಡಿಪಿ ಸಂಸದರು ಈಗ ಹಾಲಿನಷ್ಟೇ ಶುದ್ದರಾಗಿದ್ದಾರೆ- ಮಾಯಾವತಿ ವ್ಯಂಗ್ಯ
ನಾಲ್ಕು ತೆಲುಗು ದೇಶಂ ಪಕ್ಷದ ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರಿರುವ ಕ್ರಮವನ್ನು ವ್ಯಂಗ್ಯವಾಡಿರುವ ಬಿಎಸ್ಪಿ ನಾಯಕಿ ಮಾಯಾವತಿ ಭ್ರಷ್ಟರಾಗಿದ್ದ ಸಂಸದರು ಈಗ ಹಾಲಿನಷ್ಟೇ ಶುದ್ಧರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ
ನವದೆಹಲಿ: ನಾಲ್ಕು ತೆಲುಗು ದೇಶಂ ಪಕ್ಷದ ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರಿರುವ ಕ್ರಮವನ್ನು ವ್ಯಂಗ್ಯವಾಡಿರುವ ಬಿಎಸ್ಪಿ ನಾಯಕಿ ಮಾಯಾವತಿ ಭ್ರಷ್ಟರಾಗಿದ್ದ ಸಂಸದರು ಈಗ ಹಾಲಿನಷ್ಟೇ ಶುದ್ಧರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ
ಗುರುವಾರದಂದು ಟಿಡಿಪಿ ಸಂಸದರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನು ಭೇಟಿ ಮಾಡಿ ಟಿಡಿಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ವಿನಂತಿಸಿಕೊಂಡಿದ್ದರು. ಇದರಲ್ಲಿ ವೈ.ಎಸ್. ಚೌದರಿ, ಸಿಎಂ ರಮೇಶ್, ಗರಿಕಪೋತಿ ಮೋಹನ್ ರಾವ್, ಟಿಜಿ ವೆಂಕಟೇಶ್ ಅವರು ಬಿಜೆಪಿಗೆ ಸೇರಿರುವ ಸಂಸದರಾಗಿದ್ದಾರೆ.
ಈಗ ಕ್ರಮಕ್ಕೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ "ರಾಷ್ಟ್ರಪತಿಗಳು ಸರ್ಕಾರದ ಪರವಾಗಿ ದೇಶಕ್ಕೆ ಭರವಸೆ ನೀಡುತ್ತಿರುವಾಗ, ಅದೇ ದಿನ ಬಿಜೆಪಿ ನಾಲ್ಕು ಟಿಡಿಪಿ ಸಂಸದರನ್ನು ಪಕ್ಷಾಂತರಗೊಳಿಸಿತು" ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಮುಂದುವರೆದು ಬಿಜೆಪಿ ಬ್ರಾಂಡ್ ರಾಜಕೀಯದಲ್ಲಿ ಎಲ್ಲವೂ ನ್ಯಾಯಯುತವಾಗಿದೆ ಮತ್ತು ಏನೂ ತಪ್ಪಿಲ್ಲ ಎಂದು ಅವರು ವ್ಯಂಗವಾಡಿದ್ದಾರೆ.ಈ ಹಿಂದೆ ಟಿಡಿಪಿ ಸಂಸದರಲ್ಲಿ ಇಬ್ಬರು ಬಿಜೆಪಿಯನ್ನು ಭ್ರಷ್ಟ ಎಂದು ಕರೆಯಲಾಗುತ್ತಿತ್ತು, ಆದರೆ ಈಗ ಅವರು ಬಿಜೆಪಿಗೆ ಸೇರಿದ ನಂತರ ಅವರು ಹಾಲಿನಷ್ಟೇ ಶುದ್ಧರಾಗಿದ್ದಾರೆ (ದೂಧ್ ಕಾ ಧುಲಾ) ಎಂದು ಮಾಯಾವತಿ ಹೇಳಿದ್ದಾರೆ.
ಟಿಡಿಪಿಯ ಆರು ರಾಜ್ಯಸಭಾ ಸದಸ್ಯರಲ್ಲಿ ನಾಲ್ವರು - ವೈ.ಎಸ್. ಚೌದರಿ, ಸಿಎಂ ರಮೇಶ್, ಗರಿಕಪೋತಿ ಮೋಹನ್ ರಾವ್, ಟಿಜಿ ವೆಂಕಟೇಶ್ - ಗುರುವಾರ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ತಕ್ಷಣದಿಂದ ಟಿಡಿಪಿಯ ಶಾಸಕಾಂಗ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದರು.
ಇತ್ತೀಚಿಗೆ ಮಾಯಾವತಿ ಪ್ರಧಾನಿ ಒಂದು ದೇಶ ಒಂದು ಚುನಾವಣೆ ಬಗ್ಗೆ ಕರೆದಿದ್ದ ಸಭೆಗೆ ಗೈರು ಹಾಜರಾಗಿದ್ದರು. ಇದೇ ವೇಳೆ ಇವಿಎಂ ಬಗ್ಗೆ ಸಭೆ ಕರೆದರೆ ಭಾಗವಹಿಸುವುದಾಗಿ ಹೇಳಿದ್ದರು.