Corona Third Wave: ಕೆಲವೇ ದಿನಗಳಲ್ಲಿ ಭಾರತಕ್ಕೆ ಲಗ್ಗೆ ಇಡಲಿದೆ ಕರೋನಾ ಮೂರನೇ ತರಂಗ!
Coronavirus third wave in India: ಭಾರತವು ಆಗಸ್ಟ್ನಿಂದ ಕರೋನವೈರಸ್ ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ನೋಡಬಹುದು ಮತ್ತು ಇದು ಸೆಪ್ಟೆಂಬರ್‌ನಲ್ಲಿ ಉತ್ತುಂಗಕ್ಕೇರಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವರದಿ ಮಾಡಿದೆ. `ಕೋವಿಡ್ -19: ರೇಸ್ ಟು ಫಿನಿಶಿಂಗ್ ಲೈನ್` ಎಂಬ ವರದಿಯನ್ನು ಎಸ್‌ಬಿಐ ರಿಸರ್ಚ್ ಸಿದ್ಧಪಡಿಸಿದೆ.
ನವದೆಹಲಿ: Coronavirus third wave in India- ಕರೋನವೈರಸ್‌ನ ಮೂರನೇ ತರಂಗ (Corona Third Wave) ಆಗಸ್ಟ್ ಮಧ್ಯಂತರದ ವೇಳೆಗೆ ಭಾರತಕ್ಕೆ ಲಗ್ಗೆ ಇಡುವ ಸಾಧ್ಯತೆ ಇದ್ದು ಸೆಪ್ಟೆಂಬರ್‌ನಲ್ಲಿ ಪ್ರಕರಣಗಳು ಉತ್ತುಂಗಕ್ಕೇರಬಹುದು ಎಂದು ವರದಿಯಾಗಿದೆ. ಎಸ್‌ಬಿಐ ರಿಸರ್ಚ್ ಪ್ರಕಟಿಸಿದ 'ಕೋವಿಡ್ -19: ದಿ ರೇಸ್ ಟು ದಿ ಫಿನಿಶಿಂಗ್ ಲೈನ್' ಎಂಬ ವರದಿಯು ಜಾಗತಿಕ ದತ್ತಾಂಶವು ಮೂರನೇ ತರಂಗ ಪ್ರಕರಣಗಳು ಎರಡನೇ ತರಂಗದ ಸಮಯದಲ್ಲಿ ವರದಿಯಾಗುತ್ತಿದ್ದ ಗರಿಷ್ಠ ಪ್ರಕರಣಗಳ 1.7 ಪಟ್ಟು ಹೆಚ್ಚಾಗಿರುವ ಸಾಧ್ಯತೆ ಇದೇ ಎಂದು ಹೇಳಿದೆ.
ಆಗಸ್ಟ್‌ನಲ್ಲಿ ಪ್ರಕರಣಗಳು ಹೆಚ್ಚಾಗಬಹುದು:
ವರದಿಯ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಮೂಹ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಾ ಕಾಂತಿ ಘೋಷ್, ಭಾರತದಲ್ಲಿ ಮೇ 7 ರಂದು ಕರೋನಾ ಎರಡನೇ ತರಂಗ (Corona Second Wave) ಉತ್ತುಂಗದಲ್ಲಿತ್ತು. ಪ್ರಸ್ತುತ ಮಾಹಿತಿಯ ಪ್ರಕಾರ, ದೇಶದಲ್ಲಿ ಜುಲೈ ಎರಡನೇ ವಾರದಲ್ಲಿ ಸುಮಾರು 10,000 ಪ್ರಕರಣಗಳು ವರದಿಯಾಗುತ್ತಿವೆ. ಆದಾಗ್ಯೂ, ಐತಿಹಾಸಿಕ ಪ್ರವೃತ್ತಿಗಳ ಆಧಾರದ ಮೇಲೆ, ಆಗಸ್ಟ್ 21 ರೊಳಗೆ ಅಂದರೆ ಕನಿಷ್ಠ ಒಂದು ತಿಂಗಳ ನಂತರ ಗರಿಷ್ಠ ಪ್ರಕರಣಗಳೊಂದಿಗೆ ಏರಿಕೆಯಾಗಲು ಪ್ರಾರಂಭಿಸಬಹುದು" ಎಂದು ಅವರು ಹೇಳಿದರು.
ಇದನ್ನೂ ಓದಿ- Arindam Pramanik: ಕೆಲಸ ಸಿಗದೆ ಮೀನು ಮಾರಾಟ ಮಾಡುತ್ತಿರುವ ನಟ
ಡೆಲ್ಟಾ ಪ್ಲಸ್ ರೂಪಾಂತರದ ಜೊತೆಗೆ ಹೆಚ್ಚುತ್ತಿರುವ ಕಾಳಜಿ:
ಪ್ರಸ್ತುತ ಪ್ರಕರಣಗಳು ಕಳೆದ ವಾರದಿಂದ ಸುಮಾರು 45,000 ರಷ್ಟಿದೆ, ಇದು ದೇಶದಲ್ಲಿ ವಿನಾಶಕಾರಿ ಎರಡನೇ ತರಂಗ ಇನ್ನೂ ಮುಗಿದಿಲ್ಲ ಎಂಬುದನ್ನು ಸೂಚಿಸುತ್ತದೆ. ಇದಲ್ಲದೆ, ಡೆಲ್ಟಾ ಪ್ಲಸ್ ರೂಪಾಂತರದ (Corona Delta Plus Variant) 51 ಪ್ರಕರಣಗಳು ಈವರೆಗೆ 12 ರಾಜ್ಯಗಳಿಂದ ಪತ್ತೆಯಾಗಿವೆ. ಹೆಚ್ಚಾಗಿ ನಗರದಲ್ಲಿರುವ ಟಾಪ್ 15 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಜೂನ್‌ನಲ್ಲಿ ಮತ್ತೆ ಹೆಚ್ಚಾದವು. ಆದರೆ ಕರೋನಾ ಸೋಂಕಿನಿಂದಾಗಿ ಸಾವನ್ನಪ್ಪುತ್ತಿರುವವರ ಪ್ರಮಾಣ ಮೂರು ತಿಂಗಳಿಂದ ಸ್ಥಿರವಾಗಿರುವುದು ಸಮಾಧಾನಕರ ಸಂಗತಿ ಎಂದಿದ್ದಾರೆ.
ಇದನ್ನೂ ಓದಿ- Corona Delta Plus Variant: ಈ 8 ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿದೆ ಡೆಲ್ಟಾ ಪ್ಲಸ್ ರೂಪಾಂತರ
ವ್ಯಾಕ್ಸಿನೇಷನ್ ನಿಂದ ರಕ್ಷಣೆ :
ಮತ್ತೊಂದೆಡೆ, ಹೊಸ ಪ್ರಕರಣಗಳಲ್ಲಿ ಗ್ರಾಮೀಣ ಜಿಲ್ಲೆಗಳ ಪಾಲು ಜುಲೈ 2020 ರಿಂದ ಗಮನಾರ್ಹವಾಗಿ ಹೆಚ್ಚಾಗುತ್ತಿದೆ, ಅದು 45 ಪ್ರತಿಶತವನ್ನು ಮೀರಿದೆ ಮತ್ತು ಅಂದಿನಿಂದ ಏರಿಳಿತವಾಗಿದೆ. "ವ್ಯಾಕ್ಸಿನೇಷನ್ ಮಾತ್ರ ಈ ವೈರಸ್ ನಿಂದ ನಮ್ಮನ್ನು ರಕ್ಷಿಸಲು ಸಾಧ್ಯ" ಎಂದು ಘೋಷ್ ಹೇಳಿದರು. ಏತನ್ಮಧ್ಯೆ, ಭಾರತವು ದಿನಕ್ಕೆ 40 ಲಕ್ಷಕ್ಕೂ ಹೆಚ್ಚು ಕರೋನಾ ಲಸಿಕೆ (Corona Vaccine) ಪ್ರಮಾಣವನ್ನು ನೀಡಲು ಪ್ರಾರಂಭಿಸಿದೆ. ರಾಜಸ್ಥಾನ, ದೆಹಲಿ, ಹಿಮಾಚಲ ಪ್ರದೇಶ, ಕೇರಳ ಮತ್ತು ಉತ್ತರಾಖಂಡದಂತಹ ರಾಜ್ಯಗಳು ಈಗಾಗಲೇ 60 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಹೆಚ್ಚಿನ ಶೇಕಡಾವಾರು ಜನರಿಗೆ ಎರಡೂ ಲಸಿಕೆಗಳನ್ನು ನೀಡಿವೆ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು ಲಸಿಕೆ ಕಡಿಮೆ ಇದೆ ಎಂದು ವರದಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.