ನವದೆಹಲಿ: ನೀವು ಬೈಕ್ ಖರೀದಿಸುವ ಯೋಜನೆ ಹೊಂದಿದ್ದರೆ ಈ ಸುದ್ದಿ ನಿಮಗೆ ಸಂತಸ ನೀಡಲಿದೆ. ಹೌದು, ರಾಷ್ಟ್ರದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್, ಒಂದು ಬೈಕು ವೆಚ್ಚವನ್ನು ಸುಮಾರು 10 ಪ್ರತಿಶತದಷ್ಟು ಕಡಿತಗೊಳಿಸಿದೆ. ಬಜಾಜ್ ಎಂಟ್ರಿ ಲೆವೆಲ್ ಬೈಕ್ ಬಜಾಜ್ ಸಿಟಿ 100 (Bajaj CT 100) ನ ಬೆಲೆಯನ್ನು ಕಡಿಮೆ ಮಾಡಿದೆ. ಇಲ್ಲಿಯವರೆಗೆ ಟಿವಿಎಸ್ ಎಕ್ಸ್ಎಲ್ 100(TVS XL 100) ಅಗ್ಗದ ಬೆಲೆಯ ಬೈಕ್ ಆಗಿತ್ತು. ಇದೀಗ ಬೆಲೆಯು ಕಡಿತಗೊಂಡ ನಂತರ, ಬಜಾಜ್ ಸಿಟಿ 100 ಅತ್ಯಂತ ಅಗ್ಗದ ಬೆಲೆಯ ಬೈಕ್ ಆಗಿದೆ. ದೆಹಲಿಯ ಎಕ್ಸ್ ಶೋರೂಂ ನಲ್ಲಿ ಬಜಾಜ್ CT-100 ಆರಂಭಿಕ ಬೆಲೆ 30,714 ರೂ. 


COMMERCIAL BREAK
SCROLL TO CONTINUE READING

ಇದೇ ಸಮಯದಲ್ಲಿ TVS XL 100 ಬೆಲೆ 50 ರೂಪಾಯಿಗಳಿಗಿಂತ ಹೆಚ್ಚು. ಡ್ರೈವ್ ಸ್ಪಾರ್ಕ್ ಸುದ್ದಿ ಪ್ರಕಾರ ಕಂಪನಿಯು ಕಿಕ್ ಸ್ಟಟ್ ಮತ್ತು ಅಲಾಯ್ ವ್ಹೀಲ್ನೊಂದಿಗೆ ಬಜಾಜ್ CT 100 KS ನಲ್ಲಿ ಕಂಪನಿಯು 6,835 ರೂ. ವರೆಗೆ ಬೆಲೆಯನ್ನು ಕಡಿಮೆ ಮಾಡಿದೆ. ದೆಹಲಿಯಲ್ಲಿ 31,802 ರೂ. ಎಕ್ಸ್ ಶೋ ರೂಂ ಬೆಲೆಯಲ್ಲಿ ಈಗ ಅದನ್ನು ಖರೀದಿಸಬಹುದು. ದೆಹಲಿಯಲ್ಲಿ ಸಿಟಿ 100 ಎಲೆಕ್ಟ್ರಿಕ್ ಸ್ಟಾರ್ಟ್ ಮತ್ತು ಅಲೋಯ್ ವೀಲ್ನ ಎಕ್ಸ್ ಶೋರೂಮ್ ಬೆಲೆ 39,885 ರೂ.


ಬಜಾಜ್ CT100 ವೈಶಿಷ್ಟ್ಯ
ಮೊದಲಿಗೆ ಇದರ ಬೆಲೆ 41,114 ರೂ. ಆಗಿತ್ತು. ಈ ಬೈಕ್ನ ವೈಶಿಷ್ಟ್ಯಗಳನ್ನು ಕುರಿತು ಮಾತನಾಡುವುದಾದರೆ, 99.27cc ಎಂಜಿನ್ನನ್ನು ಬಜಾಜ್ CT100 ನಲ್ಲಿ ನೀಡಲಾಗಿದೆ. ಇದು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಇದರ ಎಂಜಿನ್ 8.8 ಬಿಎಚ್ಪಿ ಪವರ್ 8.05 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಜಾಜ್ ಸಿ.ಟಿ 100 ರ ಮುಂಭಾಗದಲ್ಲಿ, ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಸ್ಪ್ರಿಂಗ್ ಇನ್ ಸ್ಪ್ರಿಂಗ್ ಶೋಕರ್ಸ್ ಗಳನ್ನು ಹಿಂಭಾಗದಲ್ಲಿ ನೀಡಲಾಗಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡುವುದಾದರೆ, 110mm ಡ್ರಮ್ ಬ್ರೇಕ್ ಗಳನ್ನು ಅದರ ಮುಂಭಾಗ ಮತ್ತು ಹಿಂಭಾಗದಲ್ಲಿ ನೀಡಲಾಗಿದೆ.


ಬಜಾಜ್ ನ ಈ ಅಗ್ಗದ ಬೈಕ್ ಲೀಟರ್ಗೆ 90 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಬಜಾಜ್ನ ಈ ಬೈಕ್ ಗ್ರಾಮೀಣ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿದೆ. ಬಜಾಜ್ ತನ್ನ ನೆಚ್ಚಿನ ಬೈಕು ಪಲ್ಸರ್ ಅನ್ನು ಹೊಸ ರೂಪದಲ್ಲಿ ಆರಂಭಿಸಲು ತಯಾರಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಪಲ್ಸರ್ ಹೊಸ ಮಾದರಿಯನ್ನು ಇತ್ತೀಚೆಗೆ ಪರೀಕ್ಷೆಯ ಸಮಯದಲ್ಲಿ ಗುರುತಿಸಲಾಯಿತು.