ಎಲ್ಲರೆದುರು ಬಿಕ್ಕಿ ಬಿಕ್ಕಿ ಅತ್ತ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಅಧಿಕಾರ ಸಿಗುವವರೆಗೆ ವಿಧಾನಸಭೆಗೆ ತೆರಳುವುದಿಲ್ಲ ಎಂದು ಶಪಥ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿಜಯವಾಡದಲ್ಲಿ ನಡೆದ ಪತ್ರಿಕಾಗೋಷ್ಠಿಯ ವೇಳೆ ಭಾವುಕರಾಗಿದ್ದಾರೆ.
ಹೈದರಾಬಾದ್ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು (Chandrababu Naidu) ವಿಜಯವಾಡದಲ್ಲಿ ನಡೆದ ಪತ್ರಿಕಾಗೋಷ್ಠಿಯ ವೇಳೆ ಭಾವುಕರಾಗಿದ್ದಾರೆ. ಎಲ್ಲರೆದುರೇ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ನಡೆಸುತ್ತಿರುವ ದಾಳಿಯಿಂದ ತೀವ್ರ ನೊಂದಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ತಾವು ಮತ್ತೆ ಅಧಿಕಾರಕ್ಕೆ ಬರುವವರೆಗೂ ಆಂಧ್ರ ಪ್ರದೇಶ ವಿಧಾನಸಭೆಗೆ (Andrapradesh Assembly)ಕಾಲಿಡುವುದಿಲ್ಲ ಎಂದು ಘೋಷಿಸಿದ್ದಾರೆ.
“ವೈಯಕ್ತಿಕ ದಾಳಿಯಿಂದ ನೋವಾಗಿದೆ”
ಇಂದು ಬೆಳಗ್ಗೆ ವಿಧಾನಸಭೆಯ ಕಲಾಪದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಭಾಗವಹಿಸಿದ್ದರು. ಸದನ ಕಲಾಪದ ವೇಳೆ ವೈಯಕ್ತಿಕ ವಿಚಾರವಾಗಿ ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ ಆಡಳಿತ ಪಕ್ಷದ ವೈಎಸ್‌ಆರ್‌ಸಿಪಿಯ (YSRCP) ಶಾಸಕರು ತಮ್ಮ ಕುಟುಂಬ ಹಾಗೂ ಪತ್ನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದವರು ಹೇಳಿದ್ದಾರೆ. ಈ ಬಗ್ಗೆ ಪ್ರಸ್ತಾಪದ ವೇಲೆ, ತೀವ್ರ ಭಾವುಕರಾದ ಚಂದ್ರಬಾಬು ನಾಯ್ಡು ಅತ್ತಿದ್ದಾರೆ.
ಇದನ್ನೂ ಓದಿ : ಯಾವಾಗ ರೈತರ ಖಾತೆಗೆ ಕ್ರೆಡಿಟ್ ಆಗಲಿದೆ ಪಿಎಂ ಕಿಸಾನ್ 10ನೇ ಕಂತಿಕನ ಹಣ? ಇಲ್ಲಿದೆ ಮಾಹಿತಿ
ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ (YSR Congress) ಸದಸ್ಯರು ತಮ್ಮ ವಿರುದ್ಧ ನಿರಂತರ ನಿಂದನೆ ಮಾಡುತ್ತಿರುವುದು ನೋವು ತಂದಿದೆ. ಕಳೆದ ಎರಡೂವರೆ ವರ್ಷಗಳಿಂದ ನಾನು ಅವಮಾನವನ್ನು ಅನುಭವಿಸುತ್ತಿದ್ದೇನೆ ಆದರೆ ಶಾಂತವಾಗಿದ್ದೇನೆ ಎಂದು ನಾಯ್ಡು ಹೇಳಿದ್ದಾರೆ. ಆದರೆ ಇಂದು ತನ್ನ ಪತ್ನಿಯನ್ನೂ ಟಾರ್ಗೆಟ್ ಮಾಡಿದ್ದಾರೆ ನಾವು ನೋವು ತೋಡಿಕೊಂಡಿದ್ದಾರೆ. ನಾನು ಯಾವಾಗಲೂ ಗೌರವದಿಂದ ಬದುಕಿದ್ದೇನೆ, ಇದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ವೈಯಕ್ತಿಕ ದಾಳಿಯಿಂದ ನೊಂದ ಚಂದ್ರಬಾಬು ನಾಯ್ಡು ಅವರು ವಿಧಾನಸಭೆಯ ಕಲಾಪವನ್ನು (Assembly session) ಮಧ್ಯದಲ್ಲೇ ಬಿಟ್ಟು ನೇರವಾಗಿ ಪಕ್ಷದ ಕೇಂದ್ರ ಕಚೇರಿಗೆ ತೆರಳಿದರು. ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳನ್ನು ಕೇಳಿದಾಗ, ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅವರಿಗೆ ಸಾಧ್ಯವಾಗಲಿಲ್ಲ.
ಇದನ್ನೂ ಓದಿ : Tamil Nadu Rains: ತಮಿಳುನಾಡಿನಲ್ಲಿ ಮಳೆಯ ಹೊಡೆತಕ್ಕೆ ನೆಲಕಚ್ಚಿದ ಮಳೆ, 4 ಮಕ್ಕಳು ಸೇರಿದಂತೆ 9 ಜನರ ದಾರುಣ ಸಾವು
ಪತ್ನಿಯ ವಿರುದ್ಧದ ಹೇಳಿಕೆಯಿಂದ ನೋವಾಗಿದೆ :
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪತ್ನಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನನ್ನ ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ನನ್ನ ಹೆಂಡತಿ ಎಂದಿಗೂ ರಾಜಕೀಯದಲ್ಲಿ ಆಸಕ್ತಿ ವಹಿಸಲಿಲ್ಲ. ನಾನು ರಾಜಕೀಯದಲ್ಲಿ ಮುಂದೆ ಸಾಗಲು ನನಗೆ ಬೆಂಬಲವಾಗಿ ನಿಂತಿದ್ದರು. ಆದರೆ ಇಂದು ಅವರ ಚರಿತ್ರೆಯ ಹರಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ನನ್ನ ಇಡೀ ರಾಜಕೀಯ ಜೀವನದಲ್ಲಿ ಇಂತಹ ಮಾತುಗಳನ್ನು ನಾನು ಎದುರಿಸಿಲ್ಲ ಎಂದು ಮಾಜಿ ಸಿಎಂ ಹೇಳಿದ್ದಾರೆ. ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು ಏರಿಳಿತ ಕಂಡಿದ್ದೇನೆ. ಆದರೆ ಇಂತಹ ಹೇಳಿಕೆಗಳು ಯಾವುದೇ ರೂಪದಲ್ಲಿದ್ದರೂ ಘನತೆಗೆ ವಿರುದ್ಧವಾಗಿದೆ ಎಂದರು. ನಾವೂ ಸಹ ಸರ್ಕಾರ ನಡೆಸಿದ್ದೇವೆ. ಈಗ ವಿರೋಧ ಪಕ್ಷದಲ್ಲಿ ಇದ್ದೇವೆ, ಆದರೆ ಯಾವತ್ತೂ ನಮ್ಮ ನಾಯಕರು ಈ ರೀತಿ ನಡೆದುಕೊಂಡಿಲ್ಲ ಎಂದು ನಾಯ್ಡು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.