ನಿಮ್ಮ ಮಕ್ಕಳು ಓದಿದ್ದು ಯಾವ ಮೀಡಿಯಂ?: ಚಂದ್ರಬಾಬು ನಾಯ್ಡು ಗೆ ಸಿಎಂ ಜಗನ್ ಪ್ರಶ್ನೆ

ಸರ್ಕಾರಿ ಶಾಲೆಗಳೆಲ್ಲವನ್ನೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಮಾಡುವ ಕ್ರಮವನ್ನು ವಿರೋಧಿಸಿದ್ದ  ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿರುದ್ಧ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

Updated: Nov 12, 2019 , 05:09 PM IST
 ನಿಮ್ಮ ಮಕ್ಕಳು ಓದಿದ್ದು ಯಾವ ಮೀಡಿಯಂ?: ಚಂದ್ರಬಾಬು ನಾಯ್ಡು ಗೆ ಸಿಎಂ ಜಗನ್ ಪ್ರಶ್ನೆ
file photo

ನವದೆಹಲಿ: ಸರ್ಕಾರಿ ಶಾಲೆಗಳೆಲ್ಲವನ್ನೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಮಾಡುವ ಕ್ರಮವನ್ನು ವಿರೋಧಿಸಿದ್ದ  ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿರುದ್ಧ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

 ತಮ್ಮ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡು ಮಾತನಾಡಿದ ವೈ.ಎಸ್.ಜಗನ್ ಮೋಹನ್ ರೆಡ್ಡಿ  'ಸರ್, ಚಂದ್ರಬಾಬು ಗಾರು, ನಿಮ್ಮ ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಾನೆ? ನಾಳೆ ನಿಮ್ಮ ಮೊಮ್ಮಗ ಯಾವ ಮಾಧ್ಯಮದಲ್ಲಿ ಕಲಿಯುತ್ತಿದ್ದಾನೆ? ಸರ್, ವೆಂಕಯ್ಯ ನಾಯ್ಡುಗಾರು, ನಿಮ್ಮ ಮಗ ಮತ್ತು ಮೊಮ್ಮಕ್ಕಳು ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ" ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ ಪವನ್ ಕಲ್ಯಾಣ್ ಅವರನ್ನೂ ಗುರಿಯಾಗಿಸಿಕೊಂಡು. 'ಸರ್, ನಟ ಪವನ್ ಕಲ್ಯಾಣ್ ಗಾರು. ನಿಮಗೆ ಮೂವರು ಹೆಂಡತಿಯರು, ನಾಲ್ಕು-ಐದು ಮಕ್ಕಳು. ಅವರು ಓದುತ್ತಿರುವ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಯಾವುದು ?ಎಂದು ವ್ಯಂಗ್ಯವಾಡಿದ್ದಾರೆ.

'ನೀವು ಇಂದು ಜಗತ್ತಿನಲ್ಲಿ ಸ್ಪರ್ಧಿಸಬೇಕೆಂದರೆ , ಇಂಗ್ಲಿಷ್ ಅತ್ಯಗತ್ಯ. ಅದಕ್ಕಾಗಿಯೇ ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದ ಮೂಲಕ ಅಧ್ಯಯನ ಮಾಡುವುದನ್ನು ಖಚಿತಪಡಿಸಿಕೊಳ್ಳಲು ನಾನು ಈ ಕ್ರಮವನ್ನು ತೆಗೆದುಕೊಂಡಿದ್ದೇನೆ. ಎಂದು ಸಿಎಂ ಜಗನ್ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.