Auto Driver Viral Video: ಆಟೋ ಚಾಲಕನೊಬ್ಬ ಪ್ರಯಾಣಿಕರೊಂದಿಗೆ ಹಿಂದಿಯ ಬದಲು ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ಹೇಳುತ್ತಿರುವ ಮತ್ತು ಈ ಸಂಬಂಧ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮಾತಿನ ಚಕಮಕಿಯ ವೈರಲ್ ವೀಡಿಯೋ ಕರ್ನಾಟಕದ್ದು ಎಂದು ಹೇಳಲಾಗುತ್ತಿದೆಯಾದರೂ, ನಿಖರವಾದ ಸ್ಥಳ ಯಾವುದೆಂದು ತಿಳಿದುಬಂದಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 1 ಐಪಿಎಲ್, 16 ಪಂದ್ಯ, 973 ರನ್: ಯಾರಿಂದಲೂ ಟಚ್ ಮಾಡೋಕಾಗ್ತಿಲ್ಲ ವಿರಾಟ್ ಸೃಷ್ಟಿಸಿದ ಈ ದಾಖಲೆಗಳನ್ನು!


ಇನ್ನು ವಿಡಿಯೋದಲ್ಲಿ ಕೇಳಿಬರುತ್ತಿರುವ ಆಡಿಯೋ ಒಂದು ರೀತಿಯಿದ್ದರೆ, ಸೋಶಿಯಲ್ ಮೀಡಿಯಾ ಟ್ವಿಟರ್’ನಲ್ಲಿ ಬೇರೆಯೇ ರೂಪ ಪಡೆದುಕೊಂಡಿದೆ.


ಟ್ವಿಟರ್’ನಲ್ಲಿ ಏನಿದೆ?


ವೈರಲ್ ಆದ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, "ಉತ್ತರ ಭಾರತೀಯರು-ಭಿಕ್ಷುಕರು, ನಮ್ಮ ಭೂಮಿ. ಇದು ಈ ಆಟೋ ಚಾಲಕ ಬಳಸುವ ಪದಗಳು. ಇದು ಕೇವಲ ಈ ಚಾಲಕನ ಮನಸ್ಥಿತಿ ಮಾತ್ರವಲ್ಲ, ಈ ಎಲ್ಲಾ ಜನರ ಮನಸ್ಥಿತಿಯಾಗಿದೆ. ಕರ್ನಾಟಕದವರು ಎಂದು ಹೆಮ್ಮೆ ಪಡುವುದು ಮತ್ತು ಅದರ ಹೆಮ್ಮೆ ಇತರರನ್ನು ಕನ್ನಡ ಮಾತನಾಡಲು ಒತ್ತಾಯಿಸುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ” ಎಂದು ಪೋಸ್ಟ್’ನಲ್ಲಿ ಬರೆಯಲಾಗಿದೆ.


ಜೊತೆಗೆ ಬಳಕೆದಾರರು ಟ್ವೀಟ್‌’ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.


ಏನಿದು ಘಟನೆ?


ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಆಟೋ ಚಾಲಕ, ಮಹಿಳಾ ಪ್ರಯಾಣಿಕರಿಗೆ ಕನ್ನಡದಲ್ಲಿ ಮಾತನಾಡುವಂತೆ ಹೇಳುತ್ತಿರುವುದನ್ನು ಕಾಣಬಹುದು.


19 ಎಸೆತ, 18 ಬೌಂಡರಿ, 96 ರನ್...ಪುರುಷರಿಂದಲೂ ಸಾಧ್ಯವಾಗದ ದಾಖಲೆ ಬರೆದ ಈ ಮಹಿಳಾ ಆಟಗಾರ್ತಿ!


ಭಾರತದಲ್ಲಿ ದಶಕಗಳಿಂದ ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿಯ ಸ್ವೀಕಾರದ ಕುರಿತಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಸದ್ಯ ಈ ವಿಡಿಯೋದಲ್ಲಿ ಕಾಣಿಸುತ್ತಿರುವ ವಾಗ್ವಾದಕ್ಕೂ ಏನು ನಡೆದಿದೆ ಎಂದು ತಿಳಿದುಬಂದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.