19 ಎಸೆತ, 18 ಬೌಂಡರಿ, 96 ರನ್...ಪುರುಷರಿಂದಲೂ ಸಾಧ್ಯವಾಗದ ದಾಖಲೆ ಬರೆದ ಈ ಮಹಿಳಾ ಆಟಗಾರ್ತಿ!

Women's Premier League 2023: ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ಮುಖಾಮುಖಿಯಾಗಿತ್ತು.

1 /6

ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ಮುಖಾಮುಖಿಯಾಗಿತ್ತು.

2 /6

ಈ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಹತ್ತು ವಿಕೆಟ್‌ಗಳಿಂದ ಸೋಲಿಸಿದ ಯುಪಿ ವಾರಿಯರ್ಜ್ ಅದ್ಭುತ ಆಟವನ್ನಾಡಿದೆ.

3 /6

ಇನ್ನು ಯುಪಿ ತಂಡದ ಅಲಿಸ್ಸಾ ಹೀಲಿ 47 ಎಸೆತಗಳಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 96 ರನ್ ಗಳಿಸಿದ್ದಾರೆ. ಇದು ಒಟ್ಟಾರೆ ಪಂದ್ಯಾವಳಿಯಲ್ಲಿ ಕಲೆ ಹಾಕಿರುವ ಗರಿಷ್ಠ ಸ್ಕೋರ್ ಆಗಿದೆ. ಈ ದಾಖಲೆ ಅದ್ಭುತವಾಗಿದ್ದು ಪುರುಷರಿಂದಲೂ ಕಷ್ಟಸಾಧ್ಯವಾಗುವ ಪಂದ್ಯ ಆಡಿದ್ದಾರೆ ಅಲಿಸ್ಸಾ.

4 /6

ಆರಂಭಿಕ ಜೊತೆಗಾರ್ತಿ ದೇವಿಕಾ ವೈದ್ಯ 31 ಎಸೆತಗಳಲ್ಲಿ ಐದು ಬೌಂಡರಿ ಸೇರಿದಂತೆ 36 ರನ್‌ಗಳನ್ನು ನೀಡಿದರು, ವಾರಿಯರ್ಜ್ ಕೇವಲ 13 ಓವರ್‌’ಗಳಲ್ಲಿ 139 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿದೆ.

5 /6

ಇನ್ನು ಬೆಂಗಳೂರು ತಂಡಕ್ಕೆ ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಸೋಲಾಗಿದೆ.

6 /6

ಇನ್ನೊಂದೆಡೆ ಆಸ್ಟ್ರೇಲಿಯಾದ ವಿಕೆಟ್‌ಕೀಪರ್-ಬ್ಯಾಟರ್ ಅಲಿಸ್ಸಾ ಅವರು ವಾರಿಯರ್ಜ್ ಬೌಲಿಂಗ್ ದಾಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ದೀಪ್ತಿ ಶರ್ಮಾ ಮತ್ತು ಸೋಫಿ ಎಕ್ಲೆಸ್ಟೋನ್ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬೆಂಗಳೂರನ್ನು 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್ ಮಾಡಿದ್ದಾರೆ.