Viral video : ಮದುವೆ ಮುಗಿದಿದ್ದೇ ತಡ, ವಧು ವರನನ್ನು ಎತ್ತಿ ನೆಲಕ್ಕುರುಳಿಸಿದ ವ್ಯಕ್ತಿ, ಮುಂದೆ....?
ಮದುವೆಯಲ್ಲಿನ ಈ ವಿಚಿತ್ರ ಸಂಪ್ರದಾಯ ಎಂಥವರನ್ನೂ ಆಶ್ಚರ್ಯಗೊಳಿಸದೇ ಇರದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನೊಮ್ಮೆ ನೋಡಿ.
ನವದೆಹಲಿ : ದೇಶಾದ್ಯಂತ ವಿವಾಹದ ಸಮಯದಲ್ಲಿ ವಿವಿಧ ಆಚರಣೆಗಳ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಕೆಲವೊಂದು ಆಚರಣೆಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದೇ ಇಲ್ಲ. ವಧು ಮತ್ತು ವರರ ಹೊರತಾಗಿ ಅವರ ಸಂಬಂಧಿಕರು ಅನುಸರಿಸುವ ಪದ್ಧತಿಗಳು ಸಹ ಕೆಲವೊಮ್ಮೆ ಚರ್ಚೆಗೆ ಗ್ರಾಸವಾಗುತ್ತವೆ. ಅಷ್ಟೇ ಅಲ್ಲ, ಇಂಥಹ ಅನೇಕ ವಿಡಿಯೊ ವೈರಲ್ (Varal video) ಕೂಡಾ ಆಗುತ್ತವೆ. ಇಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಕೂಡಾ, ಒಬ್ಬ ವ್ಯಕ್ತಿ ವಧುವರರನ್ನು ಎಲ್ಲಾ ಅತಿಥಿಗಳ ಮುಂದೆ ಎತ್ತಿಕೊಂಡು ನೆಲದ ಮೇಲೆ ಎಸೆದು ಬಿಡುವುದನ್ನು ಕಾಣಬಹುದು.
ಅತಿಥಿಗಳ ಮುಂದೆ ವಧು ಮತ್ತು ವರನ ಜೊತೆ ಹೀಗಾಯಿತು :
ಮದುವೆಯಲ್ಲಿನ ಈ ವಿಚಿತ್ರ ಸಂಪ್ರದಾಯ ಎಂಥವರನ್ನೂ ಆಶ್ಚರ್ಯಗೊಳಿಸದೇ ಇರದು. ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿರುವ ಈ ವಿಡಿಯೋವನ್ನೊಮ್ಮೆ ನೋಡಿ. ಇಲ್ಲಿ ಮದುವೆಯ (Marriage) ನಂತರ ವಧು -ವರರು ಅತಿಥಿಗಳ ಮುಂದೆ ನಿಂತಿದ್ದಾರೆ . ಈ ವೇಳೆ, ಸಂಬಂಧಿಕರೊಬ್ಬರು ಹಿಂದಿನಿಂದ ಬಂದು ವಧುವರರನ್ನು ಹಿಡಿದುಕೊಳ್ಳುತ್ತಾರೆ. ಆ ವ್ಯಕ್ತಿ ವಧುವರರನ್ನು ಎತ್ತಿಕೊಂಡು ನಂತರ ಅಲ್ಲೇ ಬಿಸಾಡಿ ಬಿಡುತ್ತಾನೆ. ಇದರ ನಂತರ ವಧುವರರಿಬ್ಬರೂ ನೆಲದ ಮೇಲೆ ಬೀಳುತ್ತಾರೆ.
ಇದನ್ನೂ ಓದಿ : VIRAL VIDEO : ಮದುವೆ ದಿನವೇ ಎಲ್ಲರ ಮೇಲೆ ಮುನಿಸಿಕೊಂಡು ಛಾವಣಿ ಏರಿ ಕುಳಿತ ವಧು, ಓಲೈಸಿ ಸುಸ್ತಾದ ವರ ಮತ್ತು ಕುಟುಂಬ
ಈ ವಿಚಿತ್ರ ಆಚರಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ :
ಗಮನಿಸಬೇಕಾದ ಸಂಗತಿಯೆಂದರೆ, ವಧುವನ್ನು (Bride) ಮೇಲಕೆತ್ತಿದ ಕೂಡಲೇ, ಅವಳು ತನ್ನ ಕೈಯಲ್ಲಿದ್ದ ಅಕ್ಕಿಯನ್ನು ಹಿಂದಕ್ಕೆ ಎಸೆಯುತ್ತಾಳೆ. ಅಂದರೆ ಇದು ಮದುವೆಯ ಸಂಪ್ರದಾಯಗಳಲ್ಲಿ ಒಂದಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ವಿಡಿಯೋ (Video) ನೋಡಿದಾಗ, ವಧುವರರನ್ನು ಎತ್ತಿಕೊಂಡು ನೆಲಕ್ಕೆ ಎಸೆದಿರುವಂತೆ ಭಾಸವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ವೀಡಿಯೋವನ್ನು ನಿರಂಜನ್ ಮೊಹಾಪಾತ್ರ ಎಂಬ ಖಾತೆಯಿಂದ ಇನ್ ಸ್ಟಾಗ್ರಮ್ನಲ್ಲಿ (Instagram) ಅಪ್‌ಲೋಡ್ ಮಾಡಲಾಗಿದೆ. ಅನೇಕ ಜನರು, ಈ ವೀಡಿಯೊ ಕುರಿತು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ವರ ತಾಳಿ ಕಟ್ಟುತ್ತಿದ್ದ ವೇಳೆ ವಧು ಏಕೆ ಹೀಗೆ ಮಾಡಿದಳು..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ