ನವದೆಹಲಿ : ತುರ್ತುಪರಿಸ್ಥಿತಿಯ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದ ಜನತಾ ಪಕ್ಷ ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನಮಂತ್ರಿಯಾಗಿ ಆಯೆ ಮಾಡಿತು. ಈ ಹಿಂದೆ ಜವಾಹರಲಾಲ್ ನೆಹರು ಅವರು ಪ್ರಧಾನಿಯಾಗಿದ್ದ ಸರ್ಕಾರದಲ್ಲಿ ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರು ಬರೋಬ್ಬರಿ 10 ಬಜೆಟ್ಗಳನ್ನು ಮಂಡಿಸಿದ್ದರು. ಇದರಲ್ಲಿ ಸಾಮಾನ್ಯ ಬಜೆಟ್ ಮತ್ತು ಮಧ್ಯಂತರ ಬಜೆಟ್ ಗಳೂ ಒಳಗೊಂಡಿದ್ದವು. 


COMMERCIAL BREAK
SCROLL TO CONTINUE READING

ಇಲ್ಲಿ ಗಮನಿಸಬೇಕಾದ ಹಾಗು ಬಹಳ ಅಚ್ಚರಿಯ ವಿಷಯವೆಂದರೆ, ದೇಸಾಯಿ ತಮ್ಮ ಹುಟ್ಟುಹಬ್ಬದಂದು ಎರಡು ಬಾರಿ ಬಜೆಟ್ ಮಂಡಿಸಿದ್ದರು. ನಾಲ್ಕು ವರ್ಷಗಳಿಗೊಮ್ಮೆ ಬರುವ ಅವರ ಹುಟ್ಟುಹಬ್ಬ(ಫೆಬ್ರುವರಿ 29) ದಂದು 1964 ಮತ್ತು 1968 ರಲ್ಲಿ ದೇಶದ ವಾರ್ಷಿಕ ಬಜೆಟ್ ಮಂಡಿಸಿದ್ದರು. 1959-60 ರಿಂದ 1963-64ರ ನಡುವೆ 5 ಬಾರಿ, 1967-68 ರಿಂದ 1969-70 ನಡುವೆ 3 ಬಾರಿ ಮತ್ತು 1962-63 ಮತ್ತು 1967-68 ರಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದರು. 


ಗುಜರಾತ್ನಲ್ಲಿ ದೇಸಾಯಿ ಜನನ 
ದೇಸಾಯಿ ಅವರು ಗುಜರಾತ್ನ ವಲ್ಸಾದ್ನಲ್ಲಿ 1896 ರ ಫೆಬ್ರುವರಿ 29 ರಂದು ಜನಿಸಿದರು. ರಾಜಕೀಯಕ್ಕೆ ಬರುವುದಕ್ಕೆ ಮುಂಚಿತವಾಗಿ, ಸುಮಾರು 12 ವರ್ಷಗಳ ಕಾಲ ಉಪ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ 1931 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾದರು. 1937 ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ, 1937 ರಲ್ಲಿ ಮುಂಬೈನಲ್ಲಿ ಬಿಜಿ ಖೇರ್ ನೇತೃತ್ವದಲ್ಲಿ ರಚನೆಯಾದ ಕಾಂಗ್ರೆಸ್ ಪ್ರಾಂತೀಯ ಸರ್ಕಾರದಲ್ಲಿ ದೇಸಾಯಿ ಆದಾಯ, ಕೃಷಿ, ಅರಣ್ಯ ಸಚಿವರಾದರು. 


1939 ರಲ್ಲಿ ದೇಸಾಯಿ ಎರಡನೇ ಮಹಾಯುದ್ಧದವನ್ನು ಭಾರತ ಕಾಂಗ್ರೆಸ್ನ ಇತರ ನಾಯಕರೊಂದಿಗೆ ವಿರೋಧಿಸಿದರು, ನಂತರ ಬ್ರಿಟಿಷ್ ಸರ್ಕಾರ ಅವನನ್ನು ಬಂಧಿಸಿ  ಜೈಲಿನಲ್ಲಿ ಇರಿಸಿತು. ಅಕ್ಟೋಬರ್ 1941 ರಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಯಿತಾದರೂ, 1942 ರ ಆಗಸ್ಟ್ನಲ್ಲಿ ಅವರು ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಮತ್ತೆ ಜೈಲಿಗೆ ಹೋಗಿ 1945 ರಲ್ಲಿ ಬಿಡುಗಡೆಯಾದರು. 1949ರಲ್ಲಿ ನಡೆದ ಪ್ರಾಂತೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ, ದೇಸಾಯಿ ಗೃಹ ಮತ್ತು ಆದಾಯದ ಸಚಿವರಾದರು. ಸ್ವಾತಂತ್ರ್ಯಾನಂತರ, ದೇಸಾಯಿ 1952 ರಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಕಂದಾಯ ಸಚಿವರಾದರು.


ಕ್ಯಾಬಿನೆಟ್ ಸ್ಥಾನಕ್ಕೆ ರಾಜಿನಾಮೆ
ಮೊರಾರ್ಜಿ 1963 ರಲ್ಲಿ ಕಾಮರಾಜ್ ಯೋಜನೆ ಸಂಬಂಧ ಕೇಂದ್ರ ಸಂಪುಟದಿಂದ ರಾಜೀನಾಮೆ ನೀಡಿದರು. ಆಗಿನ ತಮಿಳುನಾಡಿನ ಮುಖ್ಯಮಂತ್ರಿ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಸರ್ಕಾರದ ಕೆಲಸವನ್ನು ತೊರೆದು ಸಂಘಟನೆಗೆ ಕೆಲಸ ಮಾಡಬೇಕೆಂದು ಕಾಮರಾಜ್ ಪ್ರಸ್ತಾಪಿಸಿದರು. ಈ ಪ್ರಸ್ತಾಪದ ನಂತರ, ಮೊರಾರ್ಜಿ ಸೇರಿದಂತೆ ಆರು ಕೇಂದ್ರ ಸಚಿವರು ಮತ್ತು ಆರು ಕಾಂಗ್ರೆಸ್ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ್ದರು. ನಂತರ 1967 ರಲ್ಲಿ ಇಂದಿರಾ ಗಾಂಧಿ ಕ್ಯಾಬಿನೆಟ್ಗೆ ಉಪ ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವರಾಗಿ ದೇಸಾಯಿ ಆಯ್ಕೆಗೊಂಡರು. 


ತುರ್ತು ಪರಿಸ್ಥಿತಿಯ ನಂತರ ಪ್ರಧಾನಿ
ಜುಲೈ 1969 ರಲ್ಲಿ ಇಂದಿರಾಗಾಂಧಿ ಅವರು ದೇಸಾಯಿ ಅವರನ್ನು ಹಣಕಾಸು ಮಂತ್ರಿ ಸ್ಥಾನದಿಂದ ಕೈ ಬಿಡಲಾದ ನಂತರ ದೇಸಾಯಿ ಪಕ್ಷದ ತ್ಯಜಿಸಿದರು. 1969 ರಲ್ಲಿ ಅವರು, ಇಂದಿರಾ ಗಾಂಧಿ ವಿರೋಧಿ ಕಾಂಗ್ರೆಸ್ (O) ವಿಭಜನೆ ನಾಯಕರಾಗಿದ್ದರು 1971 ದೇಸಾಯಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಸಂಸದರೂ ಆದರು. 


ನಂತರ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದ್ದರಿಂದ 1977 ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭಾವಿಸಿತು. ನಂತರ ದೇಸಾಯಿ ಪ್ರಧಾನಿಯಾದರು. ಸೂರತ್ ಎಂಪಿ ಆಗಿ ಆಯ್ಕೆಯಾದ  ಅವರು, ಮಾರ್ಚ್ 24, 1977 ರಂದು ರಾಷ್ಟ್ರದ ನಾಲ್ಕನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜುಲೈ 1979 ರವರೆಗೂ ಅವರು ಈ ಹುದ್ದೆಯಲ್ಲಿದ್ದರು. ಜನತಾ ಪಾರ್ಟಿಯ ಆಂತರಿಕ ಪಕ್ಷಪಾತದ ಕಾರಣ, ಅವರು ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.