ಪಶ್ಚಿಮ ಬಂಗಾಳದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ 3 ಬಿಜೆಪಿ ಶಾಸಕರು ಪೋಲಿಸ್ ವಶಕ್ಕೆ
ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 3 ಬಿಜೆಪಿ ಶಾಸಕರು ಪೋಲಿಸ್ ರನ್ನು ಭಾನುವಾರ ಇಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 3 ಬಿಜೆಪಿ ಶಾಸಕರಾದ ಶಂಕರ್ ಘೋಷ್, ಆನಂದಮೊಯ್ ಬರ್ಮನ್ ಮತ್ತು ಸಿಖಾ ಚಟ್ಟೋಪಾಧ್ಯಾಯ ಬಂಧಿಸಿ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ-"ರೂಪಾಂತರಿ ಕೊರೊನಾ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ "
ಸಿಲಿಗುರಿಯ ಸಫ್ದರ್ ಹಸ್ಮಿ ಚೌಕ್ ವೃತ್ತದಲ್ಲಿ ಧರಣಿ ನಡೆಸುತ್ತಿದ್ದಾಗ ಬಂಧನಕ್ಕೊಳಗಾದ ಶಾಸಕರು ಪ್ರತಿಭಟನೆಯ ಸಮಯದಲ್ಲಿ ಎಲ್ಲಾ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡರು, ಇನ್ನೊಂದೆಡೆಗೆ ಲಾಕ್‌ಡೌನ್ ಮಧ್ಯೆ ಧರಣಿ ನಡೆಸುವ ಮೂಲಕ ಬಿಜೆಪಿ ಶಾಸಕರು ಈ ಪ್ರದೇಶದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಹಿರಿಯ ಟಿಎಂಸಿ ನಾಯಕ ಗೌತಮ್ ಹೇಳಿದ್ದಾರೆ.
ಇದನ್ನೂ ಓದಿ- ಹಳ್ಳಿ ಮತ್ತು ಅರೆ ನಗರಗಳಲ್ಲಿ ಕೊರೊನಾ ತಡೆಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ
"ಬಿಜೆಪಿ ನಾಯಕರ ನೈಜ ಮುಖವನ್ನು ಜನರು ನೋಡಲಿ, ಅವರು ಮಾರಕ ವೈರಸ್ ಹರಡುವ ಬಗ್ಗೆ ಕನಿಷ್ಠ ತಲೆಕೆಡಿಸಿಕೊಳ್ಳುವುದಿಲ್ಲ. ಬಿಕ್ಕಟ್ಟಿನ ಸಂದರ್ಭಗಳನ್ನು ರಾಜಕೀಯಗೊಳಿಸುವುದರಲ್ಲಿ ಮಾತ್ರ ಅವರು ನಂಬುತ್ತಾರೆ, ”ಎಂದು ಅವರು ಹೇಳಿದರು, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಎಲ್ಲವನ್ನು ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು.
ಕೋವಿಡ್ -19 ಹರಡುವುದನ್ನು ತಡೆಯಲು ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದರಿಂದ, ಬಂಗಾಳದಲ್ಲಿ ಭಾನುವಾರ 15 ದಿನಗಳ ಲಾಕ್‌ಡೌನ್ ಜಾರಿಗೆ ಬಂದಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ