"ರೂಪಾಂತರಿ ಕೊರೊನಾ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ "

ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆ ಭಾರತ ಮತ್ತು ಇಂಗ್ಲೆಂಡ್ ನಲ್ಲಿ ಮೊದಲು ಗುರುತಿಸಲ್ಪಟ್ಟ ಬಿ .1.617 ಮತ್ತು ಬಿ.1.1.7 ಸೇರಿದಂತೆ ಪರೀಕ್ಷಿಸಲ್ಪಟ್ಟ ಎಲ್ಲಾ ಪ್ರಮುಖ ಉದಯೋನ್ಮುಖ ರೂಪಾಂತರಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಮಾಹಿತಿ ನೀಡಿದೆ.

Last Updated : May 16, 2021, 03:25 PM IST
  • ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆ ಭಾರತ ಮತ್ತು ಇಂಗ್ಲೆಂಡ್ ನಲ್ಲಿ ಮೊದಲು ಗುರುತಿಸಲ್ಪಟ್ಟ ಬಿ .1.617 ಮತ್ತು ಬಿ.1.1.7 ಸೇರಿದಂತೆ ಪರೀಕ್ಷಿಸಲ್ಪಟ್ಟ ಎಲ್ಲಾ ಪ್ರಮುಖ ಉದಯೋನ್ಮುಖ ರೂಪಾಂತರಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಮಾಹಿತಿ ನೀಡಿದೆ.
"ರೂಪಾಂತರಿ ಕೊರೊನಾ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ "

ನವದೆಹಲಿ: ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆ ಭಾರತ ಮತ್ತು ಇಂಗ್ಲೆಂಡ್ ನಲ್ಲಿ ಮೊದಲು ಗುರುತಿಸಲ್ಪಟ್ಟ ಬಿ .1.617 ಮತ್ತು ಬಿ.1.1.7 ಸೇರಿದಂತೆ ಪರೀಕ್ಷಿಸಲ್ಪಟ್ಟ ಎಲ್ಲಾ ಪ್ರಮುಖ ಉದಯೋನ್ಮುಖ ರೂಪಾಂತರಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಇದನ್ನೂ ಓದಿ : Ganga River- ಇಲ್ಲಿಯವರೆಗೆ 73 ಶವಗಳು ಪತ್ತೆ, ಜೆಸಿಬಿಯಿಂದ ಮುಂದುವರೆದ ಸಮಾಧಿ ಕಾರ್ಯ

ಇನ್ಫೋಗ್ರಾಫಿಕ್ ಪ್ರಕಾರ, ಲಸಿಕೆ ರೂಪಾಂತರಕ್ಕೆ (ಡಿ 614 ಜಿ) ಹೋಲಿಸಿದರೆ ಬಿ .1.617 ರೂಪಾಂತರದ ವಿರುದ್ಧ 1.95 ಅಂಶದಿಂದ ತಟಸ್ಥೀಕರಣದಲ್ಲಿ ಸಾಧಾರಣ ಇಳಿಕೆ ಕಂಡುಬಂದಿದೆ.

ಇದನ್ನೂ ಓದಿ :ಯುವಕರಿಗೆ ಕೊರೊನಾ ಬರುವ ಸಾಧ್ಯತೆ ಜಾಸ್ತಿ..! ಕಾರಣವೇನು ಗೊತ್ತೇ

"ಬಿ .1.1.7 (ಯುಕೆಯಲ್ಲಿ ಮೊದಲು ಕಂಡುಬಂದಿದೆ) ಮತ್ತು ಲಸಿಕೆ ತಳಿ (ಡಿ 614 ಜಿ) ನಡುವಿನ ತಟಸ್ಥೀಕರಣದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ" ಎಂದು ಭಾರತ್ ಬಯೋಟೆಕ್ ಹೇಳಿದೆ.ಈ ಸಂಶೋಧನೆಗಳು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ - ಇಂಡಿಯಾ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದೊಂದಿಗೆ ನಡೆಸಿದ ಅಧ್ಯಯನದಿಂದ ಬಂದವು.

ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಮೂರು COVID-19 ಲಸಿಕೆಗಳಲ್ಲಿ ಕೋವಾಕ್ಸಿನ್ ಕೂಡ ಒಂದಾಗಿದೆ.ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶಾದ್ಯಂತ ಈವರೆಗೆ ಒಟ್ಟು 18,22,20,164 ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News