ನವದೆಹಲಿ : ರಾಜಸ್ಥಾನದ ರಾಷ್ಟ್ರೀಯ ಉದ್ಯಾನವನದಲ್ಲಿ (Rajastan National Park) ಹುಲಿಯೊಂದು ಕಾಡುಹಂದಿಯನ್ನು ಅಟ್ಟಿಸಿಕೊಂಡು ಹೋಗುವ ವಿಡಿಯೋವಿದು. ಈ ವಿಡಿಯೋದಲ್ಲಿ (Video) ಹುಲಿ ತನ್ನ ಆಹಾರಕ್ಕಾಗಿ ಬೇಟೆಯಾಡಿದರೆ,  ಕಾಡು ಹಂದಿ ಹುಲಿಯ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳಲು ಹೋರಾಡುತ್ತಿದೆ. ಈ ವಿಡಿಯೋವನ್ನು  ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆ ಹಿಡಿಯಲಾಗಿದೆ. ಸುಮಾರು 20 ಸೆಕೆಂಡುಗಳ ಅವಧಿಯ ಈ ವಿಡಿಯೋದಲ್ಲಿ(Viral video), ಹುಲಿ ಮತ್ತು ಕಾಡು ಹಂದಿಯ ನಡುವಿನ ಕಾದಾಟವನ್ನು ನೋಡಬಹುದು.  


COMMERCIAL BREAK
SCROLL TO CONTINUE READING

ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ (Social media) ವೈರಲ್ ಆಗುತ್ತಿದೆ.  ಈ ವೀಡಿಯೊದಲ್ಲಿ (Video), ಹುಲಿ ಹಂದಿಯ ಕುತ್ತಿಗೆಯನ್ನು ಹಿಡಿದುಕೊಂಡು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತಿದೆ. ಮತ್ತೊಂದೆಡೆ ಹಂದಿ ಕೂಡಾ, ಹುಲಿಯ ದಾಳಿಯಿಂದ ಹೊರ ಬರಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. 


ಇದನ್ನೂ ಓದಿ : Viral Video: ತನ್ನ ಮರಿಯ ಪ್ರಾಣ ರಕ್ಷಣೆಗಾಗಿ ಹಾವಿನ ಜೊತೆ ಸೆಣೆಸಾಡಿ ಗೆದ್ದ ಇಲಿ


ಈ ಕಾಳಗದಲ್ಲಿ ಕೊನೆಗೆ ಹುಲಿ ಕಾಡು ಹಂದಿಯನ್ನು (Animal video) ಬೇಟೆಯಾಯಿತು ಎನ್ನಲಾಗಿದೆ.  ಕಾಡು ಹಂದಿಯ ಮೇಲೆ ದಾಳಿ ಮಾಡಿದ ಹುಲಿಗೆ ನೂರ್ ಎಂದು ಹೆಸರಿಡಲಾಗಿದೆ. 2012 ರಿಂದ 2016 ರವರೆಗೆ  ನೂರ್, ಹಲವಾರು ಮರಿಗಳನ್ನು ಹಾಕಿದೆ ಎನ್ನಲಾಗಿದೆ. 


David Warner: ‘ಪುಷ್ಪ’ ಸಿನಿಮಾದಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.