Camel Viral Video: ತನಗೆ ತೊಂದರೆ ಕೊಡಲು ಬಂದವನಿಗೆ ತಕ್ಕ ಪಾಠ ಕಲಿಸಿದ ಒಂಟೆ ವಿಡಿಯೋ ವೈರಲ್

Camel Viral Video: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದ್ದು, ಇದರಲ್ಲಿ , ವ್ಯಕ್ತಿಯೊಬ್ಬ ಒಂಟೆಗೆ ತೊಂದರೆ ನೀಡಲು ಯತ್ನಿಸುತ್ತಾನೆ. ಈ ವೇಳೆ ಒಂಟೆ  ಹಿಂಸಿಸಲು ಬಂದವನಿಗೆ ತಕ್ಕ ಶಾಸ್ತಿ ಮಾಡಿದೆ.

Written by - Yashaswini V | Last Updated : Jan 21, 2022, 09:58 AM IST
  • ತನ್ನ ಮೇಲೆ ದಾಳಿ ಮಾಡಲು ಯತ್ನಿಸಿದ ವ್ಯಕ್ತಿಯ ಮೇಲೆ ಒಂಟೆ ದಾಳಿ
  • ಒಂಟೆ ದಾಳಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್
  • ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್
Camel Viral Video: ತನಗೆ ತೊಂದರೆ ಕೊಡಲು ಬಂದವನಿಗೆ ತಕ್ಕ ಪಾಠ ಕಲಿಸಿದ ಒಂಟೆ ವಿಡಿಯೋ ವೈರಲ್ title=
Camel Viral Video

Camel Viral Video: ಸಾಮಾನ್ಯವಾಗಿ ಪ್ರಾಣಿಗಳು ನಾವು ಕಿರುಕುಳ ನೀಡದ ಹೊರತು ನಮಗೆ ಯಾವುದೇ ಹಾನಿ ಮಾಡುವುದಿಲ್ಲ. ಆದರೆ, ಪ್ರಾಣಿಗಳನ್ನು ಕೆಣಕಿದರೆ ಆದರೆ ಪರಿಣಾಮ ಮಾತ್ರ ನೆಟ್ಟಗಿರುವುದಿಲ್ಲ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ದೃಶ್ಯ. 

ತನಗೆ ತೊಂದರೆ ಕೊಡಲು ಬಂದವನಿಗೆ ತಕ್ಕ ಪಾಠ ಕಲಿಸಿದ ಒಂಟೆ:
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದ್ದು, ಇದರಲ್ಲಿ , ವ್ಯಕ್ತಿಯೊಬ್ಬ ಒಂಟೆಗೆ ತೊಂದರೆ ನೀಡಲು ಯತ್ನಿಸುತ್ತಾನೆ. ಈ ವೇಳೆ ಒಂಟೆ ಹಿಂಸಿಸಲು ಬಂದವನಿಗೆ ತಕ್ಕ ಶಾಸ್ತಿ ಮಾಡಿದೆ.

ಇದನ್ನೂ ಓದಿ- Viral Video: ವೈನ್ ಶಾಪ್‌ ಒಳಗೆ ನುಗ್ಗಿ, ಬಾಟಲಿ ತೆರೆದು ಮದ್ಯ ಸೇವಿಸಿದ ಕೋತಿ

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು #Karma ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಲಂಕೃತವಾದ ಒಂಟೆಯೊಂದು ದಾರಿಯಲ್ಲಿ ಸಾಗುತ್ತಿದೆ. ದಾರಿಯಲ್ಲಿ ಹಲವು ಜನರು ನಡೆದಾಡುತ್ತಿರುವುದನ್ನು ಕಾಣಬಹುದು. ಈ ಮಧ್ಯೆ, ಒಬ್ಬ ವ್ಯಕ್ತಿ ನೇರವಾಗಿ ಒಂಟೆಯ ಕಡೆಗೆ ಹೋಗುವುದನ್ನು ಕಾಣಬಹುದು.

ಇದನ್ನೂ ಓದಿ- Viral Video: ಹಾವು ಮರಿಗೆ ಜನ್ಮ ನೀಡುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ಅಪರೂಪದ ವೈರಲ್ ವಿಡಿಯೋ

ದಾರಿಯಲ್ಲಿ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಒಂಟೆಯ ಹತ್ತಿರ ಹೋಗಿ ಕೈ ಎತ್ತಿ ಒಂಟೆಯ ಕಾಲಿನ ಬಳಿ ಹೊಡೆಯಲು ಪ್ರಯತ್ನಿಸುತ್ತಾನೆ. ಈ ವೇಳೆ ಒಂಟೆ ತಕ್ಷಣ ಅವನಿಗೆ ಒದೆಯುತ್ತದೆ. ಪಕ್ಕದಲ್ಲಿದ್ದ ಇತರೆ ವ್ಯಕ್ತಿಗಳು ಗಾಬರಿಗೊಂಡು ಓಡಿ ಹೋಗಿದ್ದಾರೆ.  ಸದ್ಯ ಹಿಂಸಿಸಲು ಬಂದವನಿಗೆ ತಕ್ಕ ಶಾಸ್ತಿ ಮಾಡಿದ ಒಂಟೆಯ ಈ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ (Viral Video) ಆಗುತ್ತಿದ್ದು, ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದೆ.

ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿ....
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News