ನವದೆಹಲಿ: ನಿರ್ಭಯಾ ಪ್ರಕರಣದ ಎಲ್ಲ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆ ನಿಗದಿಯಾಗಿದೆ. ಕಳೆದ ಮಂಗಳವಾರ ಈ ಅಪರಾಧಿಗಳ ವಿರುದ್ಧ ಡೆತ್ ವಾರಂಟ್ ಜಾರಿಗೊಳಿಸಿರುವ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ ಈ ನಾಲ್ವರ ಗಲ್ಲುಶಿಕ್ಷೆಗೆ ಸಮಯ ನಿಗದಿಪಡಿಸಿದೆ. ದೆಹಲಿಯ ತಿಹಾರ್ ಜೈಲಿನ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಒಟ್ಟು ನಾಲ್ವರು ಆರೋಪಿಗಳಿಗೆ ಏಕಕಾಲಕ್ಕೆ ಗಲ್ಲು ಶಿಕ್ಷೆ ನೀಡಲಾಗುತ್ತಿದೆ. ಆರೋಪಿಗಳಾಗಿರುವ ಪವನ್ ಗುಪ್ತಾ, ಮುಖೇಶ್ ಸಿಂಗ್, ವಿನಯ್ ಶರ್ಮಾ ಹಾಗೂ ಅಕ್ಷಯ್ ಠಾಕೂರ್ ಅವರನ್ನು ಜೈಲು ಸಂಖ್ಯೆ 3ರಲ್ಲಿ ನೇಣುಗಂಬಕ್ಕೆ ಏರಿಸಲಾಗುತ್ತಿದೆ. ಕೈದಿಗಳ ಪಾಲಿಗೆ ಜೈಲಿನ ಈ ಬೆರಾಕ್ ಎಷ್ಟೊಂದು ಭಯಾನಕವಾಗಿದೆ ಎಂದರೆ, ಕೈದಿಗಳು ಅದರ ಹತ್ತಿರ ಹೋಗಲು ಗಡಗಡ ನಡುಗುತ್ತಾರೆ. ಈ ಭಯಾನಕ ರಹಸ್ಯದ ಹಿಂದೆ ನೇಣುಗಂಬಕ್ಕೆ ಏರಿಸಲಾದ ಕೈದಿಗಳ ಭೂತ ಪ್ರೇತಗಳ ನೆರಳು ಇದೆ ಎನ್ನಲಾಗುತ್ತದೆ.


COMMERCIAL BREAK
SCROLL TO CONTINUE READING

ಏಷ್ಯಾದ ಅತ್ಯಂತ ದೊಡ್ಡ ಹಾಗೂ ಸುರಕ್ಷಿತ ಕಾರಾಗ್ರಹ ಎಂದೇ ಹೇಳಲಾಗುವ ದೆಹಲಿಯ ತಿಹಾರ್ ಜೈಲಿನ ಆವರಣದಲ್ಲಿ ಒಟ್ಟು ಹತ್ತು ಕಾರಾಗ್ರಹಗಳಿವೆ. ಎಲ್ಲರಿಗಿಂತ ಕುಖ್ಯಾತರಾಗಿರುವ ಕೈದಿಗಳನ್ನು ಇಲ್ಲಿನ ಜೈಲು ಸಂಖ್ಯೆ 3ರಲ್ಲಿ ಇಡಲಾಗುತ್ತದೆ ಹಾಗೂ ಇಲ್ಲಿಯೇ ನೇಣು ಮನೆ ಹಾಗೂ ನೇಣುಗಂಬ ಕೂಡ ನಿರ್ಮಿಸಲಾಗಿದೆ. ಈ ಬೆರಾಕ್ ತುಂಬಾ ಭಯಾನಕ ಹಾಗೂ ಖತರ್ನಾಕ್ ಆಗಿದೆ ಎನ್ನಲಾಗುತ್ತದೆ. ಇಲ್ಲಿ ಯಾವುದೇ ಕೈದಿ ಇರಲು ಬಯಸುವುದಿಲ್ಲವಂತೆ. ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಇಲ್ಲಿಯೇ ಇಡಲಾಗಿದೆ. ಸದ್ಯ ಈ ಬೆರಾಕ್ ನ ಜೈಲು ಸಂಖ್ಯೆ 2 ರಲ್ಲಿ ಮೂವರು ಹಾಗೂ ಜೈಲು ಸಂಖ್ಯೆ 4ರಲ್ಲಿ  ಓರ್ವ ಅಪರಾಧಿಯನ್ನು ಇಡಲಾಗಿದೆ.


ಅಫ್ಜಲ್ ಗುರು ಆತ್ಮ ಕೂಡ ಇಲ್ಲಿ ತಿರುಗುತ್ತದೆಯಂತೆ!
ಮಾಧ್ಯಮಗಳ ವರದಿ ಪ್ರಕಾರ, ಈ ಬೆರಾಕ್ ನಲ್ಲಿ ಅಫ್ಜಲ್ ಗುರು ಆತ್ಮ ಸುತ್ತುತ್ತಿದೆ ಎಂದು ಇಲ್ಲಿನ ಕೈದಿಗಳ ಅನಿಸಿಕೆಯಾಗಿದೆ ಎನ್ನಲಾಗಿದೆ. ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಿದ ಈ ದೋಷಿಯನ್ನು ಫೆಬ್ರವರಿ 9,2013ರಲ್ಲಿ ಇದೆ ಬೆರಾಕ್ ನಲ್ಲಿ ಗಲ್ಲಿಗೆ ಏರಿಸಲಾಗಿತ್ತು ಹಾಗೂ ಜೈಲಿನಲ್ಲಿಯೇ ಆತನ ಶವ ಹುಗಿಯಲಾಗಿದೆ ಎನ್ನಲಾಗಿದೆ.


ಕೈದಿಗಳು ಇಲ್ಲಿ ಪೂಜಾ-ಪಾಠ ಮಾಡುತ್ತಾರಂತೆ!
ಜೈಲು ಸಂಖ್ಯೆ 3ರಲ್ಲಿ ಸುತ್ತಾಡುತ್ತವೆ ಎನ್ನಲಾಗಿರುವ ಆತ್ಮ ಹಾಗೂ ಭೂತ-ಪ್ರೇತಗಳಿಂದ ಬಚಾವಾಗಲು ಇಲ್ಲಿನ ಕೈದಿಗಳು ಹನುಮಾನ್ ಚಾಲಿಸಾ ಪಠಿಸುತ್ತಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಕೆಲ ಕೈದಿಗಳು ಜೈಲು ಸಂಖ್ಯೆ 3ರಲ್ಲಿ ಭೂತ-ಪ್ರೇತಗಳ ಆತ್ಮಗಳನ್ನು ತಾವು ಕಂಡಿರುವುದಾಗಿ ಜೈಲಿನ ಆಡಳಿತಕ್ಕೆ ಮೌಖಿಕ ತಕರಾರು ನೊಂದಾಯಿಸಿದ್ದಾರಂತೆ. 


ಭೀಕರ ಸದ್ದುಗಳು ಕೇಳಿಸುತ್ತವೆಯಂತೆ!
ಬೆರಾಕ್ ಸಂಖ್ಯೆ ಮೂರರಲ್ಲಿ ರಾತ್ರಿಯ ಹೊತ್ತು ಕೈದಿಗಳಿಗೆ ಮೃತ ವ್ಯಕ್ತಿಗಳ ಆತ್ಮಗಳ ಕಿರುಚಾಟದ ಸದ್ದು ಕೇಳಿಬರುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲ ಇಲ್ಲಿನ ಭೂತಗಳು ಓರ್ವ ಕೈದಿಯನ್ನೂ ಸಹ ಭೀಕರವಾಗಿ ಹತ್ಯೆಗೈದಿದ್ದವು ಎಂದೂ ಸಹ ಹೇಳಲಾಗುತ್ತದೆ. ಆದರೆ, ಅಂಧವಿಶ್ವಾಸದ ಹಿನ್ನೆಲೆ ಜೈಲಿನ ಆಡಳಿತ ಮಂಡಳಿ ಈ ಕಟ್ಟುಕಥೆಗಳ ಮೇಲೆ ವಿಶ್ವಾಸ ಇಡುವುದಿಲ್ಲ ಹಾಗೂ ಇಂತಹ ಸುದ್ದಿಗಳನ್ನು ಹೊರಬರಲು ಬಿಡುವುದಿಲ್ಲ. ತಿಹಾರ್ ಜೈಲಿನ ಜೈಲು ಸಂಖ್ಯೆ 3 ರಲ್ಲಿ ಬಂದ್ ಆಗಿರುವ ಕೈದಿಗಳಿಗೆ ಕೇವಲ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಗಳ ಆತ್ಮ ಮಾತ್ರ ಪೀಡಿಸುವುದಿಲ್ಲವಂತೆ. ಅಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳ ಆತ್ಮಗಳೂ ಕೂಡ ಇವೆ ಎಂದು ಹೇಳಲಾಗುತ್ತದೆ. 


ಎರಡು ಬಾವಿ ಹಾಗೂ ಎರಡು ನೇಣುಗಂಬಗಳು
ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ತಿಹಾರ್ ಜೈಲಿನಲ್ಲಿ ಎರಡು ಬಾವಿ ಹಾಗೂ ಎರಡು ನೇಣುಗಂಬಗಳನ್ನು ನಿರ್ಮಿಸಲಾಗಿದೆ. ಜೈಲಿನ ನೇಣುಮನೆಯಲ್ಲಿ ಈಗಾಗಲೇ ಒಂದು ಬಾವಿ ಹಾಗೂ ಒಂದು ನೇಣುಗಂಬವಿದ್ದು, ಸದ್ಯ ಇನ್ನೊಂದು ಬಾವಿ ಹಾಗೂ ನೇಣುಗಂಬವನ್ನು ರಾತ್ರೋರಾತ್ರಿ ನಿರ್ಮಿಸಲಾಗಿದೆ.