TTD fake website : ತಿರಪತಿ ತಿಮ್ಮಪ್ಪನ ಭಕ್ತಾಧಿಗಳಿಗೆ ಇಲ್ಲಿ ಗಮನಿಸಿ, ಈ ನಕಲಿ ವೆಬ್‌ಸೈಟ್‌ನ್ನು ಬಳಸಿ ವಂಚನೆಗೆ ಒಳಗಾಗದಿರಿ. ಟಿಟಿಡಿಯ ಐಟಿ ಇಲಾಖೆ ನಕಲಿ ವೆಬ್‌ಸೈಟ್ ಗುರುತಿಸಿದ್ದು, ತಿರುಮಲ ಒನ್‌ಟೌನ್ ಪೊಲೀಸರಿಗೆ ದೂರು ನೀಡಿದೆ. ಇಂತಹ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಟಿಟಿಡಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಅಲ್ಲದೆ, https://tirupatibalaji.ap.gov.in/ ಅಧಿಕೃತ ವೆಬ್‌ಸೈಟ್.. https://tirupatibalaji-ap-gov.org/ ಎಂಬುದು ನಕಲಿ ವೆಬ್‌ಸೈಟ್ ಎಂದು ಸ್ಪಷ್ಟ ಪಡಿಸಿದ್ದಾರೆ.. ಅಧಿಕೃತ ವೆಬ್‌ಸೈಟ್‌ನಂತೆಯೇ ಕೆಲವು ಬದಲಾವಣೆಗಳನ್ನು ಮಾಡಿ ನಕಲಿ ವೆಬ್‌ಸೈಟ್ ರಚಿಸಲಾಗಿದೆ. ಸದ್ಯ ಟಿಟಿಡಿ ಅಧಿಕಾರಿಗಳ ದೂರಿನ ಮೇರೆಗೆ ಎಪಿ ಫೊರೆನ್ಸಿಕ್ ಸೈಬರ್ ಸೆಲ್ ನಕಲಿ ವೆಬ್‌ಸೈಟ್ ಕುರಿತು ತನಿಖೆ ನಡೆಸಿದೆ. ಇಲ್ಲಿಯವರೆಗೆ ಒಟ್ಟು 40 ನಕಲಿ ವೆಬ್‌ಸೈಟ್‌ಗಳನ್ನು ನೋಂದಾಯಿಸಲಾಗಿದೆ. 


ಇದನ್ನೂ ಓದಿ: ದುರ್ಗಾ ದೇಗುಲದಲ್ಲಿ ʼಮೂತ್ರ ವಿಸರ್ಜನೆʼ ಮಾಡಿದ ವ್ಯಕ್ತಿ : ಭಕ್ತರಿಂದ ಥಳಿತ, ಆರೋಪಿಯ ಬಂಧನ


ಇದೀಗ 41ನೇ ನಕಲಿ ವೆಬ್‌ಸೈಟ್ ಗುರುತಿಸಲಾಗಿದೆ. ಕಿಡಿಗೇಡಿಗಳು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಂತೆಯೇ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ನಕಲಿ ವೆಬ್‌ಸೈಟ್ ರಚಿಸಿದ್ದಾರೆ ಎನ್ನಲಾಗಿದೆ. ಇಂತಹ ನಕಲಿ ವೆಬ್ ಸೈಟ್ ಗಳಿಗೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು. ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು ಸರಿಯಾದ ವೆಬ್‌ಸೈಟ್ ಯಾವುದು ಎಂದು ಖಚಿತ ಪಡಿಸಿಕೊಳ್ಳಿ. ಅಲ್ಲದೆ, ಟಿಟಿಡಿಯ ಅಧಿಕೃತ ಮೊಬೈಲ್ ಆಪ್ ಮೂಲಕವೂ ಟಿಕೆಟ್ ಬುಕ್ ಮಾಡಬಹುದು.   


ಹೊಸ ಅನ್ನಪ್ರಸಾದ ಕೌಂಟರ್‌ : ಬೇಸಿಗೆ ರಜೆ ಇರುವ ಕಾರಣ ತಿರುಪತಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಪಿಎಸಿ 1ರ ಬಳಿ ಭಾನುವಾರ ಮತ್ತೊಂದು ಅನ್ನಪ್ರಸಾದ ಕೌಂಟರ್ ತೆರೆಯಲಾಗಿದೆ. ಪ್ರತಿದಿನ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ.. ಮತ್ತೆ ಸಂಜೆ 6:30 ರಿಂದ ರಾತ್ರಿ 9:30 ರವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಈ ಹೊಸ ಕೌಂಟರ್‌ನೊಂದಿಗೆ, ತಿರುಮಲದ ಎಂಟಿವಿಎಸಿ, ಪಿಎಸಿ 4, ಪಿಎಸಿ 2, ಸಿಆರ್‌ಒ ಮತ್ತು ಓಲ್ಡ್ ಅನ್ನಂ ಕಾಂಪ್ಲೆಕ್ಸ್‌ನಲ್ಲಿರುವ ರಾಮ್‌ಭಾಗಿಚಾ ಆಹಾರ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಮಾನ್ಯ ಭಕ್ತರಿಗೆ ಅನ್ನಪ್ರಸಾದವನ್ನು ನೀಡಲಾಗುತ್ತಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ