ನವದೆಹಲಿ: Congress Should Think Like BJP - ಕಾಂಗ್ರೆಸ್ (Congress) ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ (Salman Khurshid) ತಮ್ಮದೇ ಪಕ್ಷಕ್ಕೆ ಮನೆ ಉಡುಗೊರೆ ನೀಡಿದ್ದಾರೆ. ತಮ್ಮ ಪಕ್ಷಕ್ಕೆ BJP ರೀತಿ ದೊಡ್ಡದಾಗಿ ಯೋಚಿಸಲು ಸೋಮವಾರ ಸಲಹೆ ನೀಡಿರುವ ಅವರು, ಪಕ್ಷ ತುಂಬಾ ಚಿಕ್ಕದಾಗಿದ್ದು, ದುರ್ಬಲವಾಗಿದೆ ಮತ್ತು ಕಳೆದುಕೊಂಡ ತನ್ನ ಸ್ಥಾನಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬ ನಿರಾಶಾವಾದಿ ದೃಷ್ಟಿಕೋನವನ್ನು ಒಪ್ಪಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು PTI-ಭಾಷಾ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, "ನಾನು ಪಶ್ಚಿಮ ಬಂಗಾಳ (West Bengal Elecion) ಹಾಗೂ ಅಸ್ಸಾಂನಿಂದ (Assam Election) ಒಂದು ಸಂಗತಿಯನ್ನು ಕಲಿತಿದ್ದೇನೆ. ಅದೇನೆಂದರೆ, ನಾವು ತುಂಬಾ ಚಿಕ್ಕಗಾತ್ರಕ್ಕೆ ಕುಸಿದಿದ್ದೇವೆ ಮತ್ತು ದುರ್ಬಲರಾಗಿದ್ದೇವೆ ಹಾಗೂ ಯಾವುದೇ ಒಂದು ಕ್ಷೇತ್ರ ಅಥವಾ ರಾಜ್ಯದಲ್ಲಿ ದೊಡ್ಡ ಸಾಧನೆಯನ್ನು ಮಾಡಲು ಅಸಮರ್ಥರಾಗಿದ್ದೇವೆ  ಎಂಬುದನ್ನು ನಾವು ಎಂದಿಗೂ ಒಪ್ಪಿಕೊಳ್ಳಬಾರದು. BJP ಕೂಡ ತನ್ನ ಅಸ್ತಿತ್ವವೆ ಇಲ್ಲದ ಕ್ಷೇತ್ರಗಳಲ್ಲಿಯೂ ಕೂಡ ಇದೆ ರೀತಿ (ದೊಡ್ಡದಾಗಿ ಯೋಚಿಸುವ ರಣತಂತ್ರ) ಮಾಡಿದೆ. ಇಂದಿಗೂ ಕೂಡ ತಮ್ಮ ಪಕ್ಷದ ಅಸ್ತಿತ್ವ ಇಲ್ಲದೆ ಇರುವ ಕ್ಷೇತ್ರಗಳಲ್ಲಿಯೂ ಕೂಡ ಬಿಜೆಪಿ ಇದೆ ರಣತಂತ್ರ ರೂಪಿಸಲು ಯತ್ನಿಸಿದೆ" ಎಂದು ಹೇಳಿದ್ದಾರೆ.


ಈ ವೇಳೆ ತಮ್ಮದೇ ಆದ ಪಕ್ಷಕ್ಕೆ ಸಲಹೆ ನೀಡಿರುವ ಮಾಜಿ ಕೇಂದ್ರ ಸಚಿವರು " ಕಾಂಗ್ರೆಸ್ ತಾನು ತನ್ನ ಅಸ್ತಿತ್ವವಿರುವ ತುಂಬಾ ಜಾಗಗಳನ್ನು ಕಳೆದುಕೊಂಡಿದೆ ಮತ್ತು ಅವುಗಳನ್ನು ಪುನಃ ಪಡೆಯಲು ಸಾಧ್ಯವಿಲಾಲ್ ಎಂಬ ನಿರಾಶಾವಾದಿ ದೃಷ್ಟಿಕೋನವನ್ನು ಒಪ್ಪಿಕೊಳ್ಳಬಾರದು. ಕೇವಲ ಪ್ರತಿಬದ್ಧತೆ ಹಾಗೂ ವಿಶ್ವಾಸದ ಮೂಲಕ ಮಾತ್ರವೇ ನಾವು ಇದನ್ನು ಮಾಡಬಹುದು ಹಾಗೂ ನಾವು ಮಾಡಲೂ ಬೇಕು" ಎಂದಿದ್ದಾರೆ. ಇನ್ನೊಂದೆಡೆ ಪಶ್ಚಿಮ ಬಂಗಾಳದಲ್ಲಿ ಜನರು ಒಂದು ವಿವೇಚನಾತ್ಮಕ ರಣತಂತ್ರದ ಮೂಲಕ ಮತಚಲಾಯಿಸಿದ್ದಾರೆ ಮತ್ತು ಇದರ ಪರಿಣಾಮವಾಗಿ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಭಾರಿ ಹಿನ್ನಡೆಯಾಗಿದೆ ಎಂಬ ಸಂಗತಿಯನ್ನು ಅವರು ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ- Narada case: ಮಮತಾ ಬ್ಯಾನರ್ಜಿ ಸರ್ಕಾರದ ಮಂತ್ರಿಗಳು, ಶಾಸಕರನ್ನು ಬಂಧಿಸಿದ ಸಿಬಿಐ


ಪಶ್ಚಿಮ ಬಂಗಾಳದಲ್ಲಿ ಇಂಡಿಯನ್ ಸೆಕ್ಯೂಲರ್ ಫ್ರಂಟ್ ಹಾಗೂ ಅಸ್ಸಾಂನಲ್ಲಿ AIUDF ಜೊತೆಗಿನ ಮೈತ್ರಿಯಿಂದ ಪಕ್ಷಕ್ಕೆ ಹಾನಿಯಾಗಿದೆ ಎಂಬ ಹಲವು ಕಾಂಗ್ರೆಸ್ ಮುಖಂಡರ ವಾದದ ಕುರಿತು ಏನು ಯೋಚಿಸುತ್ತಾರೆ ಎಂದು ಪ್ರಶ್ನಿಸಲಾಗಿ, ಪ್ರತಿಕ್ರಿಯೆ ನೀಡಿರುವ ಸಲ್ಮಾನ್ ಖುರ್ಷಿದ್, "ಯಶಸ್ಸು ಲಭಿಸಲಿಲ್ಲ ಎಂದ ಸಂದರ್ಭದಲ್ಲಿ ಈ ರೀತಿಯ ಸ್ಪಷ್ಟೀಕರಣಗಳನ್ನು ನೀಡಲಾಗುತದೆ ಮತ್ತು ಯಶಸ್ವಿಯಾದ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಸ್ಪಷ್ಟೀಕರಣ ನೀಡಲಾಗುತ್ತದೆ" ಎಂದಿದ್ದಾರೆ.


ಇದನ್ನೂ ಓದಿ- ಸರ್ಕಾರವನ್ನು ಟೀಕಿಸಿದ ಬಳಿಕ ಕೊರೊನಾ ಸಮಿತಿಗೆ ರಾಜೀನಾಮೆ ನೀಡಿದ ಡಾ.ಶಾಹಿದ್ ಜಮೀಲ್


ಇದೆ ವೇಳೆ " ಚುನಾವಣೆಗಳು ಪೂರ್ಣಗೊಂಡ ಬಳಿಕ ನಮ್ಮ ನಿರ್ಣಯ ತೆಗೆದುಕೊಳ್ಳುವ ಪ್ರಕ್ರಿಯೆ ಹಾಗೂ ನಿರ್ಧಾರದ ಯೋಗ್ಯತೆಗಳನ್ನು ವಿಶ್ಲೇಷಿಸಲು ನಮಗೆ ಸಹಾಯ ಮಾಡದ ಹೊರತು ಚುನಾವಣಾ ನಂತರದ ಸ್ಪಸ್ಥೀಕರಣಗಳಿಗೆ ಯಾವುದೇ ಅರ್ಥ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಎರಡು ಕಡೆಗಳಿಂದ ಸಾಕಷ್ಟು ಸಂಗತಿಗಳನ್ನು ಹೇಳಬಹುದು" ಎಂದು ಖುರ್ಷಿದ್ ಹೇಳಿದ್ದಾರೆ. ಜೊತೆಗೆ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಘೋಷಣಾಪತ್ರ ಜನರ ಮಧ್ಯೆ ಇರುವ ಭಾವನೆಯನ್ನು ವ್ಯಕ್ತಪಡಿಸಲಿದೆ ಎಂದು ಖುರ್ಷಿದ್ ಹೇಳಿದ್ದಾರೆ.


ಇದನ್ನೂ ಓದಿ-  Rahul Gandhi : ಅರೆಸ್ಟ್  ಮೀ ; ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸವಾಲು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.