Yogi Adityanath Statement: ಉತ್ತರ ಪ್ರದೇಶದ ಸಹಾರನ್ಪುರ್ ನಲ್ಲಿ ಇಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಈ ಹಿಂದೆ ಇದ್ದ ಸರ್ಕಾರಗಳೂ ಮತ್ತು ಇಂದು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತ ಪಕ್ಷಗಳ ಮೇಲೆ ಭಾರಿ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಇಂದು ಉತ್ತರ ಪ್ರದೇಶ ಉಪದ್ರವಿಗಳು ಮತ್ತು ಮಾಫಿಯಾಗಳ ಉತ್ತರ ಪ್ರದೇಶ ಅಲ್ಲ, ಉತ್ಸವ ಹಾಗೂ ಮಹೋತ್ಸವಗಳ ಪ್ರತೀಕವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ. ಇಂದು ಸಹರಾನ್‌ಪುರದಿಂದ ಪುರಸಭೆ ಚುನಾವಣಾ ಪ್ರಚಾರಕ್ಕೆ ಯೋಗಿ ಆದಿತ್ಯನಾಥ್ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕುತ್ತಾ ‘ರಂಗದಾರಿ ನಾ ಫರೋತಿ, ಅಬ್ ಯುಪಿ ನಹೀ ಕಿಸಿ ಕಿ ಬಾಪೌತಿ’ ಹಾಗೂ ‘ಆಜ್ ಯುಪಿ ಮೇ ನಾ ಕರ್ಫ್ಯೂ ನಾ ದೊಂಬಿ, ಆಜ್ ಯುಪಿ ಮೇ ಸಬ್ ಓರ್ ಚಗಾ’ ಎಂಬ ಘೋಷಣೆಗಳನ್ನು ಮೊಲಗಿಸಿದ್ದಾರೆ. ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಯೋಗಿ, 2017 ರ ಹಿಂದಿನ ಸರ್ಕಾರಗಳಿಗೆ ಗಲಭೆಗಳನ್ನು ಸೃಷ್ಟಿಸಲು ಸಮಯ ಬೇಕಾಗುತ್ತಿರಲಿಲ್ಲ, ಆದರೆ ಇಂದು ಯುಪಿಯಲ್ಲಿ ಕರ್ಫ್ಯೂ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಮುಂದುವರೆದು ಸಿಎಂ ಯೋಗಿ ಹೇಳಿದ್ದೆಂದು ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ಇಂದು ಯುಪಿಯಲ್ಲಿ ಪಾತಕಿಗಳ ಕಿರಿಕಿರಿ ಇಲ್ಲ
ಪ್ರಸ್ತುತ ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಹಿಂದೆ ಯುವಕರ ಮೇಲೆ ಸುಳ್ಳು ಪ್ರಕರಣಗಳು ದಾಖಲಾಗುತ್ತಿದ್ದವು. ಹಿಂದೆ ಮಾಫಿಯಾಗಳ  ಭಯವಿತ್ತು ಮತ್ತು ಹೆಣ್ಣು ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದರು ಮತ್ತು ಇಂದು ಯುಪಿಯಲ್ಲಿ ಭಯಮುಕ್ತ ವಾತಾವರಣವಿತ್ತು. ಡಬಲ್ ಇಂಜಿನ್ ಸರ್ಕಾರದೊಂದಿಗೆ ಮೂರನೇ ಎಂಜಿನ್ ಅನ್ನು ಸಂಪರ್ಕಿಸಲು ಈ ಬಾರಿಯ ಈ ಚುನಾವಣೆಯಾಗಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ಮಹಾನಗರ ಪಾಲಿಕೆಗಳ ಮೇಯರ್‌ಗಳು, ಪುರಸಭೆಗಳು, ನಗರಸಭೆಗಳು, ಪುರಸಭೆಗಳ ಅಧ್ಯಕ್ಷರು ಮತ್ತು ಕೌನ್ಸಿಲರ್‌ಗಳ ಕಮಲದ ಚಿಹ್ನೆಯ ಮೇಲೆ ಮತ ಚಲಾಯಿಸಿ ಚುನಾವಣೆಯಲ್ಲಿ ಗೆಲ್ಲಿಸುವ ಅವಶ್ಯಕತೆ ಇದೆ. ಇದರಿಂದ ಒಂದೊಮ್ಮೆ ಬಹುಮತದ ಮಂಡಳಿ ರಚನೆಯಾದಾಗ ದೆಹಲಿಯಿಂದ ಬರುವ ಹಣ ಸರಿಯಾದ ದಿಕ್ಕಿನಲ್ಲಿ ಬಳಕೆಯಾಗಲಿದೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-WFI: ಕುಸ್ತಿ ಸಂಘದ ಚುನಾವಣೆ ಮೇಲೆ ನಿಷೇಧ, ಕುಸ್ತಿಪಟುಗಳ ಮುಷ್ಕರದ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಂಡ ಕ್ರೀಡಾ ಇಲಾಖೆ


ಇಂದು ಯುವಕರ ಕೈಯಲ್ಲಿ ಪಿಸ್ತೂಲ್ ಇಲ್ಲ ಎಂದ ಯೋಗಿ
2017ಕ್ಕಿಂತ ಮೊದಲು ಇದ್ದ ಜಾತಿವಾದಿ ಸರಕಾರ ಬೇಕೋ ಅಥವಾ ಬಡವರ ಕಲ್ಯಾಣಕ್ಕೆ ಮೀಸಲಾಗಿರುವ ಸರ್ಕಾರ ಬೇಕೋ ಎಂಬುದನ್ನು ಎಂಬುದನ್ನೂ ನಾವು ನಿರ್ಧರಿಸಬೇಕಿದೆ ಎಂದು ಯೋಗಿ ಹೇಳಿದ್ದಾರೆ. ಯುವಕರ ಕೈಯಲ್ಲಿ ಗನ್ ಇರಬೇಕೆ ಅಥವಾ ಯುವಕರ ಕೈಯಲ್ಲಿ ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಇರಬೇಕೆ ಎಂಬುದನ್ನೂ ನಾವು ನಿರ್ಧರಿಸಬೇಕಿದೆ ಎಂದರು. ಬೀದಿ ಬೀದಿಗಳಲ್ಲಿ ಪಾತಕಿಗಳ ಗುಂಡುಗಳ ಸದ್ದು ಇರಬೇಕೋ ಅಥವಾ ಭಜನೆ, ಗಂಗೆಯ ಪ್ರವಾಹದ ಕಲರವ ಕೇಳಿ ಜನಜೀವನದಲ್ಲಿ ಬದಲಾವಣೆ ತರಬೇಕೋ ಎಂಬುದನ್ನು ನಾವು ನಿರ್ಧರಿಸಬೇಕಿದೆ ಎಂದು ಯೋಗಿ ಹೇಳಿದ್ದಾರೆ.


ಇದನ್ನೂ ಓದಿ- Wrestling Federation News: ಕುಸ್ತಿ ಸಂಘದ ಅಧ್ಯಕ್ಷರ ವಿರುದ್ಧ ಮತ್ತೆ ತೊಡೆತಟ್ಟಿದ ಕುಸ್ತಿಪಟುಗಳು, ಲೈಂಗಿಕ ಕಿರುಕುಳದ ಆರೋಪ


ಎಲ್ಲರ ಬೆಂಬಲ, ಎಲ್ಲರ ಅಭಿವೃದ್ಧಿಗೆ ಶ್ರಮಿಸಿದರು
ತಾಯಿ ಶಾಕಂಭರಿಯ ಆಶೀರ್ವಾದ ಎಲ್ಲರಿಗೂ ಸಿಗಬೇಕು  ಹೀಗಾಗಿ  ಇಲ್ಲಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ನಾವು ಜಾತಿ, ಧರ್ಮ ಅಥವಾ ಯಾರ ಮುಖವನ್ನೂ ನೋಡದೆ ಎಲ್ಲರಿಗೂ ಯೋಜನೆಗಳ ಲಾಭವನ್ನು ವಿಸ್ತರಿಸಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಹಾರನ್‌ಪುರವು ಅಭಿವೃದ್ಧಿಯ ಹೊಸ ಬದಲಾವಣೆಗಳೊಂದಿಗೆ ದೇಶ ಮತ್ತು ವಿಶ್ವದ ಮುಂದೆ ಉದಾಹರಣೆಯಾಗಿ ನಿಂತಿದೆ ಎಂದು ಆವರೂ ಹೇಳಿದ್ದಾರೆ.  ಈ ಸಂದರ್ಭದಲ್ಲಿ ಸಹಾರನ್‌ಪುರದ ಅಭಿವೃದ್ಧಿ ಯೋಜನೆಗಳನ್ನು ಅವರು ವಿಸ್ತೃತವಾಗಿ ಜನರಿಗೆ ತಿಳಿಯಪಡಿಸಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.