WFI: ಕುಸ್ತಿ ಸಂಘದ ಚುನಾವಣೆ ಮೇಲೆ ನಿಷೇಧ, ಕುಸ್ತಿಪಟುಗಳ ಮುಷ್ಕರದ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಂಡ ಕ್ರೀಡಾ ಇಲಾಖೆ

Wrestling Federation Elections: ಕುಸ್ತಿ ಸಂಘದ ಚುನಾವಣೆ ಮೇಲೆ ಕ್ರೀಡಾ ಸಚಿವಾಲಯ ನಿಷೇಧ ವಿಧಿಸಿದೆ. ಕುಸ್ತಿ ಮಹಾಸಂಘದ ಅಧ್ಯಕ್ಷರ ವಿರುದ್ಧ ಕುಸ್ತಿ ಪಟುಗಳು ನಡೆಸುತ್ತಿರುವ ಧರಣೀಯ ಹಿನ್ನೆಲೆ ಸಚಿವಾಲಯದ ಈ ನಿಷೇಧ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.    

Written by - Nitin Tabib | Last Updated : Apr 24, 2023, 03:21 PM IST
  • ಏತನ್ಮಧ್ಯೆ, ಮೇಲುಸ್ತುವಾರಿ ಸಮಿತಿಯ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕ್ರೀಡಾ ಸಚಿವಾಲಯದಿಂದ ಸ್ಥಿತಿ ವರದಿಯನ್ನು ಕೇಳಿದ್ದಾರೆ.
  • ಈ ವರ್ಷದ ಜನವರಿಯಲ್ಲಿ, ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧದ ಆರೋಪಗಳ ತನಿಖೆಗಾಗಿ ಕುಸ್ತಿಪಟುಗಳೊಂದಿಗೆ ಚರ್ಚಿಸಿದ ನಂತರ ಕ್ರೀಡಾ ಸಚಿವಾಲಯವು 6 ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಿತ್ತು.
  • ಮೇರಿ ಕೋಮ್ ಅವರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
WFI: ಕುಸ್ತಿ ಸಂಘದ ಚುನಾವಣೆ ಮೇಲೆ ನಿಷೇಧ, ಕುಸ್ತಿಪಟುಗಳ ಮುಷ್ಕರದ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಂಡ ಕ್ರೀಡಾ ಇಲಾಖೆ title=

Wrestling Federation Elections: ಭಾರತೀಯ ಕುಸ್ತಿ ಒಕ್ಕೂಟದ ಚುಯನವನೆಗಳ ಮೇಲೆ ಕೇಂದ್ರ ಕ್ರೀಡಾ ಸಚಿವಾಲಯ ನಿಷೇಧವಿಧಿಸಿದೆ. ಮುಂದಿನ ತಿಂಗಳು ಈ ಚುನಾವಣೆಗಳು ನಡೆಯಬೇಕಿವೆ. ರೇಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಹಿರಿಯ ಕುಸ್ತಿಪಟುಗಳು ಇದೀಗ ಮತ್ತೊಮ್ಮೆ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಸತ್ಯಾಗ್ರಹ ಆರಂಭಿಸಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. 

ಈ ಕುರಿತು ಮಾಹಿತಿ ನೀಡಿರುವ ಕ್ರೀಡಾ ಸಚಿವಾಲಯ, ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಡ್ಹಾಕ್ ಸಮಿತಿಯನ್ನು ರಚಿಸಲಿದೆ ಮತ್ತು ಈ ಸಮಿತಿಯು ಮುಂದಿನ 45 ದಿನಗಳಲ್ಲಿ ಕುಸ್ತಿ ಒಕ್ಕೂಟವನ್ನು ಆಯ್ಕೆ ಮಾಡಲಿದೆ. IOA ಸಮಿತಿಯು ಆಟಗಾರರ ಆಯ್ಕೆಯನ್ನು ಸಹ ನೋಡಿಕೊಳ್ಳಲಿದೆ ಹಾಗೂ ಫೆಡರೇಶನ್‌ನ ದೈನಂದಿನ ಕಾರ್ಯನಿರ್ವಹಣೆಯನ್ನು ಸಹ ನೋಡಿಕೊಳ್ಳಲಿದೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ-Wrestling Federation News: ಕುಸ್ತಿ ಸಂಘದ ಅಧ್ಯಕ್ಷರ ವಿರುದ್ಧ ಮತ್ತೆ ತೊಡೆತಟ್ಟಿದ ಕುಸ್ತಿಪಟುಗಳು, ಲೈಂಗಿಕ ಕಿರುಕುಳದ ಆರೋಪ

ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದ ಕುಸ್ತಿಪಟುಗಳು
ಈಗಾಗಲೇ ಧರಣಿ ಆರಂಭಿಸಿರುವ ಮಹಿಳಾ ಕುಸ್ತಿಪಟುಗಳು ಸೋಮವಾರ (ಏಪ್ರಿಲ್ 24) ಧರಣಿ  ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದಾರೆ. ತಮ್ಮ ಅರ್ಜಿಯಲ್ಲಿ, ವಿನೇಶ್ ಫೋಗಟ್ ಸೇರಿದಂತೆ 7 ಕುಸ್ತಿಪಟುಗಳು ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್‌ಗೆ ಆದೇಶಿಸುವಂತೆ ಸುಪ್ರೀಂ ಕೋರ್ಟ್‌ಗೆ ಅವರು ಒತ್ತಾಯಿಸಿದ್ದಾರೆ. ಮಂಗಳವಾರ, ಕುಸ್ತಿಪಟುಗಳ ಪರ ವಕೀಲರು ಮುಖ್ಯ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಒತ್ತಾಯಿಸುತ್ತಾರೆ.

ಇದನ್ನೂ ಓದಿ-Chardham Yatra 2023: ನಾಲ್ಕು ಧಾಮಗಳ ಯಾತ್ರೆಗೆ 17 ಲಕ್ಷ ಭಕ್ತಾದಿಗಳ ಹೆಸರು ನೋಂದಣಿ, ಸಿದ್ಧತೆ ಹೇಗಿದೆ ಇಲ್ಲಿ ತಿಳಿದುಕೊಳ್ಳಿ

ಸ್ಥಿತಿ ವರದಿ ಕೇಳಿದ ದೆಹಲಿ ಪೊಲೀಸರು
ಏತನ್ಮಧ್ಯೆ, ಮೇಲುಸ್ತುವಾರಿ ಸಮಿತಿಯ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕ್ರೀಡಾ ಸಚಿವಾಲಯದಿಂದ ಸ್ಥಿತಿ ವರದಿಯನ್ನು ಕೇಳಿದ್ದಾರೆ. ಈ ವರ್ಷದ ಜನವರಿಯಲ್ಲಿ, ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧದ ಆರೋಪಗಳ ತನಿಖೆಗಾಗಿ ಕುಸ್ತಿಪಟುಗಳೊಂದಿಗೆ ಚರ್ಚಿಸಿದ ನಂತರ ಕ್ರೀಡಾ ಸಚಿವಾಲಯವು 6 ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಿತ್ತು. ಮೇರಿ ಕೋಮ್ ಅವರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ಸಮಿತಿಯು ಭಾರತದ ಕುಸ್ತಿ ಒಕ್ಕೂಟದ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News