ದೀಪಾವಳಿಯ ಬಳಿಕ ವಿಶ್ವದ ಟಾಪ್ 10 ಅತ್ಯಂತ ಕಲುಷಿತ ನಗರಗಳಿವು: ಅಗ್ರ ಸ್ಥಾನದಲ್ಲಿದೆ ಭಾರತದ ಈ ನಗರ
Worlds Most Polluted Cities: ಬದಲಾದ ಜೀವನ ಶೈಲಿಯಲ್ಲಿ ವಾಯುಮಾಲಿನ್ಯ ಎಲ್ಲೆಡೆ ತುಂಬಾ ಹೆಚ್ಚಾಗಿದೆ. ಅದರಲ್ಲೂ ದೀಪಾವಳಿಯ ಬಳಿಕ ಕೆಲವು ಸಿಟಿಗಳಂತೂ ಗ್ಯಾಸ್ ಚೇಂಬರ್ ಗಳಂತಾಗಿವೆ. ಇಂತಹ ವಿಶ್ವದ ಟಾಪ್ 10 ನಗರಗಳಲ್ಲಿ ಭಾರತದ ಮೂರು ನಗರಗಳು ಕೂಡ ಸೇರಿವೆ.
Top 10 Most Polluted Cities In The World: ಹಿಂದೂಗಳ ಪವಿತ್ರ ಹಬ್ಬ ದೀಪಾವಳಿ. ಇದು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ಎಂಬ ನಂಬಿಕೆ ಇದೆ. ದೀಪಾವಳಿಯಲ್ಲಿ ಸಂಜೆ ಪೂಜೆಯ ಬಳಿಕ ಮನೆಯ ಮುಂದೆ ಮಣ್ಣಿನ ದೀಪಗಳನ್ನು ಹಚ್ಚುವ ಪ್ರತೀತಿ ಇದೆ. ಇದು ಜಗತ್ತಿಗೆ ಬೆಳಕಿನ ಮಹತ್ವವನ್ನು ತಿಳಿಸುತ್ತದೆ. ಬದಲಾದ ಜೀವನ ಶೈಲಿಯಲ್ಲಿ ಪಟಾಕಿಗಳು ದೀಪಾವಳಿಯ ಮಹತ್ವದ ಭಾಗವೆಂದೆನಿಸಿಕೊಂಡಿದೆ.
ದೀಪಾವಳಿಗಾಗಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಪಟಾಕಿಗಳು ಲಭ್ಯವಿದೆ. ಪಟಾಕಿ ಸಿಡಿಸಿ ದೀಪಾವಳಿ ಆಚರಿಸುವುದು ಕೆಲವರಿಗೆ ಸಂಭ್ರಮ ಸಡಗರವನ್ನು ನೀಡುತ್ತದೆ. ಆದರೂ, ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯು ಮಾಲಿನ್ಯವು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಈ ಬಾರಿಯ ದೀಪಾವಳಿ ಬಳಿಕ ವಿಶ್ವದ ಟಾಪ್ 10 ನಗರಗಳಲ್ಲಿ ಭಾರತದ ಮೂರು ನಗರಗಳು ಕೂಡ ಸೇರಿವೆ. ಅವುಗಳೆಂದರೆ...
ಮೊದಲ ಸ್ಥಾನದಲ್ಲಿ ನವದೆಹಲಿ:
ದೀಪಾವಳಿ ನಂತರ ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದ ರಾಜಧಾನಿ ನವದೆಹಲಿ ಅಗ್ರ ಸ್ಥಾನದಲ್ಲಿದೆ. ಸ್ವಿಸ್ ಗ್ರೂಪ್ IQAir ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 407 ಆಗಿದ್ದು, ಇದು ಅಪಾಯಕಾರಿ ವರ್ಗ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ನವೆಂಬರ್ 15ರಂದು PM PVTG ಅಭಿವೃದ್ಧಿ ಮಿಷನ್‍ಗೆ ಪ್ರಧಾನಿ ಮೋದಿ ಚಾಲನೆ
ಟಾಪ್ 10 ಕಲುಷಿತ ನಗರಗಳಲ್ಲಿ ವಾಣಿಜ್ಯ ನಗರಿ:
ಭಾರತದ ವಾಣಿಜ್ಯ ನಗರಿ ಎಂತಲೇ ಪ್ರಸಿದ್ಧವಾಗಿರುವ ಮುಂಬೈನಲ್ಲಿ AQI 157ರಷ್ಟಿದ್ದು ಕಲುಷಿತ ನಗರಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಪೂರ್ವ ಕೋಲ್ಕತ್ತಾ:
ಭಾರತದ ಮತ್ತೊಂದು ನಗರ ಕೋಲ್ಕತ್ತಾದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 154ರಷ್ಟಿದ್ದು ಟಾಪ್ 10 ಕಲುಷಿತ ನಗರಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಇದನ್ನೂ ಓದಿ- Viral Video: ಶ್ವೇತ ನಾಗರ ಎಂದಾದರೂ ಕಂಡಿದ್ದೀರಾ? ಕೋಟಿ ಕೋಟಿ ಬೆಲೆಬಾಳುವ ಬಿಳಿ ಹಾವಿನ ಅಪರೂಪದ ವಿಡಿಯೋ
ವಾಯು ಗುಣಮಟ್ಟ ಸೂಚ್ಯಂಕ (AQI) ಮಟ್ಟವು 400-500ರಷ್ಟಿದ್ದರೆ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಈಗಾಗಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಲಿದೆ.
ವಾಯು ಗುಣಮಟ್ಟ ಸೂಚ್ಯಂಕ (AQI) ಮಟ್ಟವು 150-200 ರಷ್ಟಿದ್ದರೆ ಇದು ಜನರಲ್ಲಿ ಆಸ್ತಮಾ, ಶ್ವಾಸಕೋಶ ಮತ್ತು ಹೃದಯ ಸಮಸ್ಯೆಗಳಿರುವವರಲ್ಲಿ ಸಮಸ್ಯೆಗಳನ್ನು ಉಲ್ಬಣಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.