White Snake Viral Video: ಸಾಮಾನ್ಯವಾಗಿ ಹಾವುಗಳ ಬಣ್ಣ ಕಪ್ಪು, ಕಂದು ಅಥವಾ ಬೂದು ಬಣ್ಣಗಳಲ್ಲಿರುತ್ತವೆ. ಆದರೆ ನೀವು ಎಂದಾದರೂ ಬಿಳಿ ನಾಗರ ಹಾವನ್ನು ಕಂಡಿದ್ದೀರಾ? ಈ ಬಣ್ಣದಲ್ಲಿರುವ ಹಾವುಗಳನ್ನು ಶ್ವೇತ ನಾಗರ ಎಂದೂ ಕರೆಯಲಾಗುತ್ತದೆ.
ನಾವಿಂದು ವಿಡಿಯೋವೊಂದನ್ನು ಇಲ್ಲಿ ಶೇರ್ ಮಾಡಿಕೊಂಡಿದ್ದೇವೆ. ಇದರಲ್ಲಿ ಬಿಳಿನಾಗರ ಹಾವನ್ನು ಕಾಣಬಹುದು. ಎಲ್ಲಿಂದಲೋ ರಕ್ಷಣೆ ಮಾಡಿ ತಂದಿರುವ ಹಾವನ್ನು ಕಾಡಿಗೆ ಬಿಡಲಾಗುತ್ತದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಮತ್ತೆ ನಾಯಕತ್ವ! ಸೆಮೀಸ್’ಗೂ ಮುನ್ನ ಹೊಸ ತಂಡ ಪ್ರಕಟಿಸಿದ ಕ್ರಿಕೆಟ್ ಮಂಡಳಿ
ವಿಡಿಯೋ ನೋಡಿ:
கோவையில் அரிதான வெள்ளை நிற நாகப்பாம்பு மீட்பு!#Kovai #Kamadenutamil #WhiteCobra pic.twitter.com/rmxpICwmNZ
— Kamadenu (@KamadenuTamil) May 4, 2023
ಅಂದಹಾಗೆ ಕೆಲ ಹಾವುಗಳು ವಿಷಕಾರಿಯಾಗಿದ್ದರೆ, ಇನ್ನೂ ಕೆಲವು ಹಾವುಗಳು ಅಪಾಯಕಾರಿಯಾಗಿರುತ್ತದೆ. ಆದರೆ ಅವುಗಳ ಬಣ್ಣ ಎಲ್ಲರನ್ನೂ ಆಕರ್ಷಿಸುವುದು ಸುಳ್ಳಲ್ಲ. ಬಿಳಿ ನಾಗರಹಾವಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಇದು ಅಪರೂಪವಾಗಿ ಕಾಣಿಸಿಕೊಳ್ಳುವ ಹಾವು. ತಮಿಳುನಾಡಿನ ಕೊಯಂಬತ್ತೂರಿನ ವಸತಿ ಪ್ರದೇಶದಲ್ಲಿ ಈ ಹಾವು ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.
ಶ್ವೇತ ನಾಗರಹಾವು ಭಾರತದಲ್ಲಿ ಕಂಡುಬರುವ ವಿಶೇಷ ರೀತಿಯ ಹಾವು. ಇದು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ಭಾರತದ ನೈಋತ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದರ ಉದ್ದ ಸುಮಾರು 3 ಅಡಿ ಇರುತ್ತದೆ. ಕೆಂಪು ಅಥವಾ ನೀಲಿ ಕಣ್ಣುಗಳನ್ನು ಹೊಂದಿರುವ ಈ ಹಾವು ರಾತ್ರಿ ವೇಳೆ ಆಹಾರ ಅರಸಿ ಹೊರಬರುತ್ತವೆ, ಇನ್ನು ಇವು ಪ್ರಾಣಿಗಳು, ಇಲಿಗಳು, ಚಿಟ್ಟೆಗಳು ಮತ್ತು ಹಲ್ಲಿಗಳನ್ನು ತಿನ್ನುತ್ತವೆ. ಇದು ಎಷ್ಟರ ಮಟ್ಟಿಗೆ ವಿಷಕಾರಿ ಎಂದರೆ, ಒಂದು ಬಾರಿ ಕಚ್ಚಿದರೆ ಆ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು.
ಇದನ್ನೂ ಓದಿ: ಈ ವಿಷಯದಲ್ಲಿ ಶ್ರೇಷ್ಠ ರೆಕಾರ್ಡ್ ಬರೆದ ಜಡೇಜಾ: ನಂಬರ್ 1 ಪಟ್ಟಕ್ಕೇರಿದ ಜಡ್ಡು
ಶ್ವೇತನಾಗರ ಹಾವಿನ ಈ ವೀಡಿಯೊವನ್ನು @KamadenuTamil ಹೆಸರಿನ ಟ್ವಿಟರ್ ಹ್ಯಾಂಡಲ್’ನಲ್ಲಿ ಹಂಚಿಕೊಳ್ಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ