ನವದೆಹಲಿ: ದೆಹಲಿ ಹಿಂಸಾಚಾರದ (Delhi Violence) ನಂತರ ಸಾಮಾಜಿಕ ಮಾಧ್ಯಮಗಳ ಮೇಲೆ  ಗುಪ್ತಚರ ಇಲಾಖೆ ಹದ್ದಿನ ಕಣ್ಣಿಟ್ಟಿದೆ.  ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕುವವರ ಮೇಲೆ ಪೊಲೀಸ್ ಇಲಾಖೆ ಈಗಾಗಲೇ ಕ್ರಮಕೈಗೊಳ್ಳುತ್ತಿದೆ.ಈ ಮಧ್ಯೆ ಟ್ವಿಟರ್ (Twitter) ಕೂಡಾ,  ಅಂತಹ ಜನರನ್ನು ಗುರುತಿಸಲು ಪ್ರಾರಂಭಿಸಿದೆ. ಪ್ರಚೋದನಾತ್ಮಕ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದ  300 ಖಾತೆಗಳನ್ನು ಟ್ವಿಟರ್ ಸಸ್ಪೆಂಡ್  ಮಾಡಿದೆ. 


COMMERCIAL BREAK
SCROLL TO CONTINUE READING

ಪ್ರಚೋದನಕಾರಿ  ಹ್ಯಾಶ್ ಟ್ಯಾಗ್ ಗಳಮೇಲೂ ಕಣ್ಣು :
 ಹಿಂಸಾಚಾರ, ನಿಂದನೆ ಮತ್ತು ಬೆದರಿಸುವಿಕೆ ಮತ್ತು ಶಾಂತಿ ಕದಡುವವರ  ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದಾಗಿ ಟ್ವಿಟರ್(Twitter) ಹೇಳಿದೆ.  ಪ್ರಚೋದನಾತ್ಮಕ ಪೋಸ್ಟ್‌ಗಳು ವಾತಾವರಣವನ್ನು ಹಾಳುಮಾಡುತ್ತವೆ ಮತ್ತು ಶಾಂತಿ ಕದಡಲು ಕಾರಣವಾಗುತ್ತದೆ.  ಅಂತಹ 300 ಜನರ ಟ್ವಿಟ್ಟರ್ ಖಾತೆಗಳನ್ನು ಅಮಾನತುಗೊಳಿಸಲಾಗಿದೆ.   ಹಿಂಸಾಚಾರವನ್ನು ಪ್ರಚೋದಿಸುವ ಯಾವುದೇ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ವಿಭಾಗದಲ್ಲಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಟ್ವಿಟರ್ ಸ್ಪಷ್ಟಪಡಿಸಿದೆ.


ಇದನ್ನೂ ಓದಿ : Farmer's Tractor Rally : ಪೊಲೀಸರೊಂದಿಗೆ ಘರ್ಷಣೆ ; ಕೆಂಪು ಕೋಟೆಗೆ ರೈತರ ಮುತ್ತಿಗೆ


ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪೆರೇಡ್ (Tractor Parade) ಸಮಯದಲ್ಲಿ, ನಡೆದ  ಪ್ರತಿಭಟನೆ ಹಿಂಸಾ ರೂಪ ಪಡೆದುಕೊಂಡಿತ್ತು.  ಇದಾದ ನಂತರ, ಹೆಚ್ಚಿನ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ, ದೆಹಲಿಯ (Delhi) ಅನೇಕ ಸ್ಥಳಗಳಲ್ಲಿ ಇಂಟರ್ನೆಟ್ (internet) ಅನ್ನು ಸ್ವಲ್ಪ ಸಮಯದವರೆಗೆ ಸ್ಥಗೊತಗೊಳಿಸಲಾಗಿತ್ತು. ಹರಿಯಾಣದ ಮೂರು ಜಿಲ್ಲೆಗಳಲ್ಲಿ ಇನ್ನೂ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹಿಂಸಾಚಾರದ ನಂತರ, ಸಾಮಾಜಿಕ ಮಾಧ್ಯಮಗಳ (Social Media) ಮೇಲೂ ನಿಗಾ  ಇಡಲಾಗಿತ್ತು. 


ಇದನ್ನೂ ಓದಿ :ಟ್ರ್ಯಾಕ್ಟರ್ ರ್ಯಾಲಿಯಿಂದಾಗಿ ರೈಲುಗಳನ್ನು ತಪ್ಪಿಸಿಕೊಂಡವರಿಗೆ ಹಣ ಹಿಂತಿರುಗಿಸಲು ಮುಂದಾದ ರೈಲ್ವೆ ಇಲಾಖೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.