Odisha Train Accident : ಹಲವು ರೈಲುಗಳು ರದ್ದು, ಮಾರ್ಗ ಬದಲಾವಣೆ.!. ಸಂಪೂರ್ಣ ಮಾಹಿತಿ ಇಲ್ಲಿದೆ
Train Accident : ಭಾರತೀಯ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಭಾರತೀಯ ರೈಲ್ವೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ರೈಲಿನ ಸ್ಥಿತಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.
Odisha train accident : ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಟ್ರಿಪಲ್ ರೈಲು ಅಪಘಾತದಲ್ಲಿ ಕನಿಷ್ಠ 233 ಸಾವುಗಳು ಮತ್ತು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಡಿಕ್ಕಿಯಾಗಿದೆ.
ದುರಂತದ ಪರಿಣಾಮವಾಗಿ, ಕೆಲ ರೈಲುಗಳನ್ನು ರದ್ದುಗೊಳಿಸಲಾಗಿದೆ ಅಲ್ಲದೆ, ಇನ್ನು ಕೆಲವುಗಳನ್ನು ಟಾಟಾನಗರ ನಿಲ್ದಾಣದ ಮೂಲಕ ತಿರುಗಿಸಲಾಯಿತು. ಭಾರತೀಯ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಭಾರತೀಯ ರೈಲ್ವೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಪ್ರಯಾಣಿಸುವ ಮೊದಲು ತಮ್ಮ ರೈಲಿನ ಸ್ಥಿತಿಯನ್ನು ಪರಿಶೀಲಿಸಲು ಅಧಿಕಾರಿಗಳು ಪ್ರಯಾಣಿಕರನ್ನು ಒತ್ತಾಯಿಸಿದ್ದಾರೆ.
ರದ್ದುಗೊಂಡಿರುವ ರೈಲುಗಳ
12837 ಹೌರಾ-ಪುರಿ ಎಕ್ಸ್‌ಪ್ರೆಸ್ ರೈಲು
12863 ಹೌರಾ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್‌ಪ್ರೆಸ್ ರೈಲು
12839 ಹೌರಾ-ಚೆನ್ನೈ ಮೇಲ್ ರೈಲು
12895 ಶಾಲಿಮಾರ್-ಪುರಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು
20831 ಶಾಲಿಮಾರ್-ಸಂಬಲ್ಪುರ್ ಎಕ್ಸ್‌ಪ್ರೆಸ್ ರೈಲು
02837 ಸಂತ್ರಗಚಿ-ಪುರಿ ವಿಶೇಷ ರೈಲು
22201 ಸೀಲ್ದಾ-ಪುರಿ ಡುರೊಂಟೊ ಎಕ್ಸ್‌ಪ್ರೆಸ್ ರೈಲು
08411 ಬಾಲಸೋರ್-ಭುವನೇಶ್ವರ ವಿಶೇಷ ರೈಲು
08415 ಜಲೇಶ್ವರ-ಪುರಿ ವಿಶೇಷ ರೈಲು
12891 ಬ್ಯಾಂಗ್ರಿಪೋಸಿ-ಪುರಿ, ಎಕ್ಸ್‌ಪ್ರೆಸ್ ರೈಲು
18021 ಖರಗ್‌ಪುರ-ಖುರ್ದಾ ರೋಡ್ ಎಕ್ಸ್‌ಪ್ರೆಸ್ ರೈಲು
08063 ಖರಗ್‌ಪುರ -ಭದ್ರಕ್ ವಿಶೇಷ ರೈಲು
22895 ಹೌರಾ-ಪುರಿ ಎಕ್ಸ್‌ಪ್ರೆಸ್ ರೈಲು
12703 ಹೌರಾ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲು
12821 ಶಾಲಿಮಾರ್-ಪುರಿ ಎಕ್ಸ್‌ಪ್ರೆಸ್ ರೈಲು
12245 ಹೌರಾ-ಸರ್ ಎಂ ವಿಶ್ವೇಶ್ವರೈವ ಟರ್ಮಿನಲ್ ಎಕ್ಸ್‌ಪ್ರೆಸ್ ರೈಲು
08031 ಬಾಲಸೋರ್-ಭದ್ರಕ್ ವಿಶೇಷ ರೈಲು
18045 ಶಾಲಿಮಾರ್-ಹೈದರಾಬಾದ್ ಈಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ರೈಲು
20889 ಹೌರಾ-ತಿರುಪತಿ ಎಕ್ಸ್‌ಪ್ರೆಸ್ ರೈಲು
18044 ಭದ್ರಕ್-ಹೌರಾ ಎಕ್ಸ್‌ಪ್ರೆಸ್ ರೈಲು
18038 ಜಜ್‌ಪುರ್ ಕಿಯೋಂಜರ್ ರಸ್ತೆ-ಖರಗ್‌ಪುರ ಎಕ್ಸ್‌ಪ್ರೆಸ್ ರೈಲು
12073 ಹೌರಾ-ಭುವನೇಶ್ವರ ಎಕ್ಸ್‌ಪ್ರೆಸ್ ರೈಲು
12074 ಭುವನೇಶ್ವರ-ಹೌರಾ ಎಕ್ಸ್‌ಪ್ರೆಸ್ ರೈಲು
12277 ಹೌರಾ-ಪುರಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲು
12078 ಪುರಿ-ಹೌರಾ ಶತಾಬ್ದಿ ಎಕ್ಸ್‌ಪ್ರೆಸ್ ರೈಲು
08032 ಭದ್ರಕ್-ಬಾಲಾಸೋರ್ ವಿಶೇಷ ರೈಲು
08032 ಭದ್ರಕ್-ಬಾಲಾಸೋರ್ ವಿಶೇಷ ರೈಲು
12822 ಪುರಿ-ಶಾಲಿಮಾರ್ ಎಕ್ಸ್‌ಪ್ರೆಸ್ ರೈಲು
12815 ಪುರಿ-ಆನಂದ್ ವಿಹಾರ್ ಎಕ್ಸ್‌ಪ್ರೆಸ್ ರೈಲು
08064 ಭದ್ರಕ್-ಖರಗ್‌ಪುರ ವಿಶೇಷ ರೈಲು
22896 ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
08416 ಪುರಿ-ಜಲೇಶ್ವರ ವಿಶೇಷ ರೈಲು
08439 ಪುರಿ-ಪಾಟ್ನಾ ವಿಶೇಷ ರೈಲು
ಕೆಳಗಿನ ರೈಲುಗಳನ್ನು ತಿರುಗಿಸಲಾಗಿದೆ
12841 ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಅನ್ನು ಖರಗ್‌ಪುರ-ಟಾಟಾ-ಜಾರ್ಸುಗುಡ-ಸಂಬಲ್‌ಪುರ ಸಿಟಿ-ಕಟಕ್ ಮೂಲಕ ತಿರುಗಿಸಲಾಗುತ್ತದೆ.
18477 ಪುರಿ-ಯೋಗ್ ನಗ್ರಿ ರಿಷಿಕೇಶ್ (20.11. 2022 ರಂದು ಪುರಿಯಿಂದ ಹೊರಡುವುದು) ಝರ್ಸುಗುಡ ಬದಲಿಗೆ ಸಂಬಲ್‌ಪುರ್ ಸಿಟಿ-ಝಾರ್ಸುಗುಡ ರಸ್ತೆ-ಐಬಿ ಮೂಲಕ ತಿರುಗಿಸಲಾಗುತ್ತದೆ.
ಘಟನೆಯ ವಿವರ : 12864 ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಕೋಚ್‌ಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಬಹನಾಗಾ ಬಜಾರ್ ನಿಲ್ದಾಣದ ಬಳಿ ಭಯಾನಕ ದೃಶ್ಯವನ್ನು ವಿವರಿಸಿದ್ದಾರೆ. ಹಳಿತಪ್ಪಿದ ಕೋಚ್‌ಗಳಿಗೆ 12841 ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅದರ ಕೋಚ್‌ಗಳು ಸಹ ಮಗುಚಿ ಬಿದ್ದವು. ಇದಲ್ಲದೆ, ಕೋರಮಂಡಲ್ ಎಕ್ಸ್‌ಪ್ರೆಸ್‌ನ ಕೋಚ್‌ಗಳಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ.
ದುರಂತದ ನಂತರ, ಭಾರತೀಯ ರೈಲ್ವೆ ಮತ್ತು ಒಡಿಶಾ ಸರ್ಕಾರವು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಬೆಂಬಲ ನೀಡಲು ತ್ವರಿತ ಕ್ರಮ ಕೈಗೊಂಡಿದೆ. ಹೆಚ್ಚುವರಿಯಾಗಿ, ರೈಲ್ವೇ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಎಕ್ಸ್ ಗ್ರೇಷಿಯಾ ಪರಿಹಾರವನ್ನು ಘೋಷಿಸಿದೆ. ಸಹಾಯವಾಣಿ ಸಂಖ್ಯೆಗಳು ಮತ್ತು ಲಭ್ಯವಿರುವ ಬೆಂಬಲದ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
ರೈಲ್ವೆ ಸಹಾಯವಾಣಿ ಸಂಖ್ಯೆಗಳು
ಹೌರಾ: 033-26382217
ಖರಗ್‌ಪುರ: 8972073925
ಬಾಲಸೋರ್: 8249591559
ಚೆನ್ನೈ: 044-25330952
ಒಡಿಶಾ ಸರ್ಕಾರದ ಸಹಾಯವಾಣಿ
ಹೆಚ್ಚಿನ ಸಹಾಯಕ್ಕಾಗಿ ಒಡಿಶಾ ಸರ್ಕಾರವು ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಿದೆ: 06782-262286
ಎಕ್ಸ್ ಗ್ರೇಷಿಯಾ ಪರಿಹಾರ: ರೈಲು ಅಪಘಾತದ ಸಂತ್ರಸ್ತರಿಗೆ ಭಾರತೀಯ ರೈಲ್ವೆ ಈ ಕೆಳಗಿನ ಪರಿಹಾರವನ್ನು ಘೋಷಿಸಿದೆ:
ಮೃತರಿಗೆ 10 ಲಕ್ಷ ರೂ
ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ
ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂ
ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಹೆಚ್ಚುವರಿ ಪರಿಹಾರವನ್ನು ಘೋಷಿಸಿದರು: ಮೃತರಿಗೆ 2 ಲಕ್ಷ ರೂ., ಗಾಯಗೊಂಡವರಿಗೆ 50 ಸಾವಿರ ರೂ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ