ಜಮುಯಿ : ಬಿಹಾರದ ಜಮುಯಿಯಲ್ಲಿ ಮಹಿಳೆಯೊಬ್ಬರು ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆದರೆ, ಕೋಚ್‌ನಲ್ಲಿದ್ದ ಇತರ ಮಹಿಳೆಯರು ಅವರಿಗೆ ಸಹಾಯ ಮಾಡಲು ಹಿಂದೇಟು ಹಾಕಿದರು. ಅಷ್ಟರಲ್ಲಿ ತೃತೀಯ ಲಿಂಗಿಗಳು (ಮಂಗಳಮುಖಿಯರು) ಮಹಿಳೆಯ ಸ್ಥಿತಿ ಕಂಡು ಸಹಾಯ ಮಾಡಲು ಮುಂದಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಬಿಹಾರದ ಶೇಖ್‌ಪುರ ಜಿಲ್ಲೆಯ ಮಹಿಳಾ ಪ್ರಯಾಣಿಕರು ಜಮುಯಿ ಜಿಲ್ಲೆಯ ಝಾಝಾ-ಜಸಿದಿಹ್ ರೈಲು ವಿಭಾಗದ ಹೌರಾ ಜನಶತಾಬ್ದಿ ಎಕ್ಸ್‌ಪ್ರೆಸ್‌ನ ಡಿ 5 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ಮಧ್ಯ ಮಹಿಳೆಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿತು. ಜಸಿದಿಹ್ ರೈಲು ನಿಲ್ದಾಣದಿಂದ ಲಖಿಸಾರೈಗೆ ಹೋಗುವ ಮಾರ್ಗದಲ್ಲಿ ರೈಲು ಪ್ರಾರಂಭವಾದ ತಕ್ಷಣ ಮಹಿಳೆಗೆ ನೋವು ಕಾಣಿಸಿಕೊಂಡಿತು ಎಂದು ಹೇಳಲಾಗಿದೆ.


ಇದನ್ನೂ ಓದಿ: ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ಮತದಾನ ದಿನಾಂಕ ಪ್ರಕಟ


ದೇವರಂತೆ ಬಂದ ತೃತೀಯ ಲಿಂಗಿಗಳು : ಈ ವೇಳೆ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಪತಿ ಹಾಗೂ ಸಂಬಂಧಿಕರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಬೋಗಿಯಲ್ಲಿ ಹಲವು ಮಹಿಳಾ ಪ್ರಯಾಣಿಕರಿದ್ದರು. ಸಡನ್ನಾಗಿ ಅವರಿಗೂ ಅವರಿಗೂ ಏನು ಮಾಡಬೇಕೆಂದು ಅರ್ಥವಾಗಿಲ್ಲ. ಇದೇ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಕರಿಂದ ಹಾಡು ಹೇಳಿ ಹಣ ಕೇಳುತ್ತಿದ್ದ ಮಂಗಳಮುಖಿಯರು ಮಹಿಳೆಯ ಸ್ಥಿತಿ ಕಣ್ಣಿಗೆ ಬಿದ್ದಿದೆ. ಎದೆಗುಂದದರೆ ಗರ್ಭಿಣಿಗೆ ಸಹಾಯ ಮಾಡಲು ಮುಂದಾಗಿದ್ದರು.


ಮಂಗಳಮುಖಿಯರು ಮುಂದಾಳತ್ವ ವಹಿಸಿ ಮಹಿಳೆಗೆ ರೈಲಿನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ರೈಲಿ ಶೌಚ ಗೃಹಕ್ಕೆ ಕರೆದುಕೊಂಡು ಹೋಗಿ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದಾರೆ. ನವಜಾತ ಶಿಶುವನ್ನು ತಮ್ಮ ತೋಳುಗಳಲ್ಲಿ ಎತ್ತಿಕೊಂಡು ತೃತಿಯ ಲಿಂಗಿಗಳು ಆಶೀರ್ವದಿಸಿದರು. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಗಿ ವರದಿಯಾಗಿದೆ.


ಇದನ್ನೂ ಓದಿ: ‘ನೇಮಕಾತಿಗಾಗಿ ನನಗೆ ಲಂಚ ನೀಡಲಾಗಿದೆ’! ಅಸೆಂಬ್ಲಿಯಲ್ಲಿ ನೋಟುಗಳ ಬಂಡಲ್ ತೋರಿಸಿದ ಆಪ್ ಶಾಸಕ!


ಮಂಗಳಮುಖಿಯರು ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ : ಸಾಮಾನ್ಯವಾಗಿ ರೈಲಿನಲ್ಲಿ ತೃತಿಯ ಲಿಂಗಿಗಳನ್ನು ಕಂಡರೆ ರೈಲಿನಲ್ಲಿ ಅವರನ್ನು ನೋಡುವ ವಿಧಾನವೇ ಬೆರೆಯಾಗಿರುತ್ತದೆ. ಅವರು ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಅಂತ ಭಾವಿಸುತ್ತಾರೆ. ಆದರೆ, ತೃತಿಯ ಲಿಂಗಿಗಳು ಒಂದು ಹೆಜ್ಜೆ ಮುಂದೆ ಹೋಗಿ ತಾಯಿ ಮಗುವನ್ನು ಕಾಪಾಡಿದ್ದು, ಜನರ ಮೆಚ್ಚುಗೆಗೆ ಕಾರಣವಾಗಿದೆ. ದೇವರು ಯಾವ ರೀತಿಯಲ್ಲಿ ಬರುತ್ತಾನೆ ಎಂದು ಗೊತ್ತಾಗುವುದಿಲ್ಲ. ಇದೀಗ ಬಾಣಂತಿ ಮತ್ತು ಮಗುವಿಗೆ ತೃತಿಯ ಲಿಂಗಿಗಳ ರೂಪದಲ್ಲಿ ಬಂದು ಕಾಪಾಡಿದ್ದಾನೆ ಎಂದು ಜನ ಹೊಗಳುತ್ತಿದ್ದಾರೆ. ಈ ಕುರಿತು ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.