ನವದೆಹಲಿ: ಈಗ ರೈಲಿನಲ್ಲಿ ಪ್ರಯಾಣಿಸುವುದೂ ಒಂದು ಸಾಹಸಕ್ಕಿಂತ ಕಡಿಮೆಯಿಲ್ಲ. ನಿಮಗಾಗಿ ವಿಶೇಷ ಮತ್ತು ಅತ್ಯುತ್ತಮ ಸೇವೆಯನ್ನು ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಪ್ರಯಾಣಿಕರು ಈಗ ಹೆಚ್ಚಿನ ವೇಗದ ರೈಲುಗಳಲ್ಲಿ ಸವಾರಿ ಮಾಡುವ ಉಡುಗೊರೆಯನ್ನು ಪಡೆಯಲಿದ್ದಾರೆ. ಹೌದು  ಕೇಂದ್ರ ಸರ್ಕಾರ ಇದಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದೆ.


Sarkari Naukri: SSLC, ಪಿಯುಸಿ, ಪದವೀಧರಿಗೆ ಬಂಪರ್ ಉದ್ಯೋಗಾವಕಾಶ


COMMERCIAL BREAK
SCROLL TO CONTINUE READING

ದೇಶಾದ್ಯಂತ ಹೈಸ್ಪೀಡ್ ರೈಲುಗಳನ್ನು ಓಡಿಸುವ ಯೋಜನೆಯಲ್ಲಿ ಸರ್ಕಾರ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆಗಾಗಿ ದೇಶಾದ್ಯಂತ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಜೊತೆಗೆ ಹೊಸ ಹಳಿಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಪಕ್ಕದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಭೂಸ್ವಾಧೀನಕ್ಕಾಗಿ ಎನ್‌ಎಚ್‌ಎಐ 4 ಸದಸ್ಯರ ಸಮಿತಿಯನ್ನು ರಚಿಸಿದ್ದು ಈ ಪ್ರಕ್ರಿಯೆಯನ್ನು ಮುಂದೆ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.


ಕರೋನಾ ಯುಗದಲ್ಲೂ ಹೊಸ ದಾಖಲೆ ನಿರ್ಮಿಸಿದ ಭಾರತೀಯ ರೈಲ್ವೆ


ಮೊದಲ ಹಂತದಲ್ಲಿ ಈ ಏಳು ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಚಲಿಸಲಿವೆ:
ಮೊದಲ ಹಂತದಲ್ಲಿ ದೇಶದಲ್ಲಿ ಏಳು ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಪ್ರಕರಣಕ್ಕೆ ಸಂಬಂಧಿಸಿದ ತಜ್ಞರು ಹೇಳುತ್ತಾರೆ. ಆರಂಭಿಕ ಹಂತದಲ್ಲಿ ಈ ವೇಗದ ರೈಲುಗಳು ಈ ಮಾರ್ಗಗಳಲ್ಲಿ ಚಲಿಸುತ್ತವೆ. ಈ ಮಾರ್ಗಗಳಲ್ಲಿ ಹೈಸ್ಪೀಡ್ ರೈಲುಗಳಿಗೆ ಸಂಬಂಧಿಸಿದ ವಿವರಗಳನ್ನು ಭಾರತೀಯ ರೈಲ್ವೆ (Indian Railways) ಸಿದ್ಧಪಡಿಸುತ್ತಿದೆ.


ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಪ್ರಮುಖ ಬದಲಾವಣೆ, ಈ ಟೆಕ್ನಿಕ್ ಬಳಸಿ ಕನ್ಫರ್ಮ್ ಟಿಕೆಟ್‌ ಪಡೆಯಿರಿ


ಈ ಮಾರ್ಗಗಳು ಹೀಗಿವೆ: -
1. ದೆಹಲಿಯಿಂದ ವಾರಣಾಸಿಗೆ (ನೋಯ್ಡಾ, ಆಗ್ರಾ ಮತ್ತು ಲಕ್ನೋ ಮೂಲಕ)
2. ವಾರಣಾಸಿಯಿಂದ ಹೌರಾ (ಪಾಟ್ನಾ ಮೂಲಕ)
3. ದೆಹಲಿಯಿಂದ ಅಹಮದಾಬಾದ್ (ಜೈಪುರ ಮತ್ತು ಉದಯಪುರದ ಮೂಲಕ)
4. ದೆಹಲಿಯಿಂದ ಅಮೃತಸರಕ್ಕೆ (ಚಂಡೀಗಢ, ಲುಧಿಯಾನ ಮತ್ತು ಜಲಂಧರ್ ಮೂಲಕ)
5. ಮುಂಬೈನಿಂದ ನಾಗ್ಪುರಕ್ಕೆ (ನಾಸಿಕ್ ಮೂಲಕ)
6. ಮುಂಬೈನಿಂದ ಹೈದರಾಬಾದ್ (ಪುಣೆ ಮೂಲಕ)
7. ಮುಂಬೈನಿಂದ ಮೈಸೂರು (ಬೆಂಗಳೂರು ಮೂಲಕ)