Election Result 2024: ಹರಿಯಾಣ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಎರಡೂ ರಾಜ್ಯಗಳ ಫಲಿತಾಂಶದ ಚಿತ್ರಣ ಸ್ಪಷ್ಟವಾಗಿದೆ. ಅದರಲ್ಲೂ ಹರಿಯಾಣದ ಫಲಿತಾಂಶದಲ್ಲಿ ಅನಿರೀಕ್ಷಿತ ಬದಲಾವಣೆಯಾಗಿದ್ದು, ಕೇವಲ ಒಂದೇ ಒಂದು ಗಂಟೆಯಲ್ಲಿ ರಿಸಲ್ಟ್‌ ಉಲ್ಟಾಪಲ್ಟಾ ಆಗಿದೆ.


COMMERCIAL BREAK
SCROLL TO CONTINUE READING

ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಸ್ಥಾನಗಳು ನೋಡ ನೋಡುತ್ತಿದ್ದಂತೆಯೆ ಒಂದೇ ಸಮನೇ ಏರಿಕೆಯಾಗಿತ್ತು. ಮತ ಎಣಿಕೆ ಆರಂಭಗೊಂಡ ಕೆಲ ಗಂಟೆಗಳಲ್ಲಿ 50ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡು ಕ್ಲೀನ್‌ ಸ್ವೀಪ್‌ನತ್ತ ಸಾಗುತ್ತಿತ್ತು. ಸರಳ ಬಹುಮತ ಪಡೆದು ಕಾಂಗ್ರೆಸ್‌ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವುದು ಖಚಿತ ಅನ್ನೋವಾಗಲೇ ಫಲಿತಾಂಶ ಸಂಪೂರ್ಣ ತಲೆಕೆಳಗಾಗಿದೆ. ಈ ಮೂಲಕ ಗಂಟೆಯೊಳಗೆ ಟ್ರೆಂಡ್ ಚೇಂಜ್ ಆಗಿದ್ದು, ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಶೋಕ, ದುಃಖ ಆವರಿಸಿದರೆ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆದಿದೆ.


The first selfie of India: 1880 ರಲ್ಲಿಯೇ ಭಾರತದಲ್ಲಿ ತೆಗೆದ ಸೆಲ್ಫಿ ಫೋಟೋ ಹೇಗಿದೆ ಗೊತ್ತಾ? ಇದರ ಹಿಂದಿದೆ ರೋಚಕ ಕಹಾನಿ...!


ಸದ್ಯ ಹರಿಯಾಣದಲ್ಲಿ ಬಿಜೆಪಿ 50, ಕಾಂಗ್ರೆಸ್‌ 35, INLD 2 ಮತ್ತು ಸ್ವತಂತ್ರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದು ಹ್ಯಾಟ್ರಿಕ್‌ ಗೆಲುವಿನ ಕನಸು ಹೊತ್ತಿರುವ ಬಿಜೆಪಿಗೆ ಕೊಂಚ ನಿರಾಳವೆನಿಸಿದೆ. ಒಟ್ಟು 90 ಕ್ಷೇತ್ರಗಳಿರುವ ಹರಿಯಾಣದಲ್ಲಿ ಬಹುಮತಕ್ಕೆ 46ಸ್ಥಾನಗಳು ಬೇಕಾಗಿದ್ದು, ಈಗಾಗಲೇ ಬಿಜೆಪಿ ಅಷ್ಟೂ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವ ಕಾಂಗ್ರೆಸ್‌ ಕನಸು ಭಗ್ನವಾಗುವ ಆತಂಕವಿದೆ.   


ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್‌ ಮೈತ್ರಿಕೂಟ ಭಾರೀ ಮುನ್ನಡೆ!


AAAP 1, CPI(M) 1 ಮತ್ತು ಸ್ವತಂತ್ರ ಅಭ್ಯರ್ಥಿಳು 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 


ಇದನ್ನೂ ಓದಿ: Jammu Kashmir Election: ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಗೆ ವಿಜಯಮಾಲೆ: ಕಣಿವೆ ರಾಜ್ಯದ ಗದ್ದುಗೆ ಏರಲಿರುವ ನೂತನ ಸಿಎಂ ಇವರೇ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.