ಮುಂಬೈ: ಕರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುಡು ಮತ್ತು ಆಗಾಗ್ಗೆ ಕೈ ಸ್ವಚ್ಛಗೊಳಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ. ಇಂದು ವಿವಿಧ ರೀತಿಯ ಫೇಸ್ ಮಾಸ್ಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಫೇಸ್ ಮಾಸ್ಕ್ ಬೆಲೆ 10 ರೂಪಾಯಿಗಳಿಂದ ಸಾವಿರಾರು ರೂಪಾಯಿಗಳವರೆಗೆ ಇರುತ್ತದೆ. ಮಾಸ್ಕ್ ಬೆಲೆಯನ್ನು ನಿರ್ದಿಷ್ಟಪಡಿಸದ ಕಾರಣ ಮಾಸ್ಕ್ (Mask)  ತಯಾರಕರು ಮತ್ತು ಮಾರಾಟಗಾರರು ತಮ್ಮ ಇಚ್ಚೆಯಂತೆ ಬೆಲೆ ವಿಧಿಸುತ್ತಿದ್ದಾರೆ. ಆದರೆ ಅದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ರಾಜ್ಯದಲ್ಲಿ ಮಾಸ್ಕ್‌ಗಳ ಬೆಲೆಯನ್ನು ನಿಗದಿಪಡಿಸಿದೆ. ಈ ಮೂಲಕ ಮಾಸ್ಕ್‌ಗಳ ಬೆಲೆ (Mask Price) ನಿಗದಿ ಪಡಿಸಿದ ದೇಶದ ಮೊದಲ ರಾಷ್ಟ್ರ ಮಹಾರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಕರೋನಾದಿಂದ ಚೇತರಿಸಿಕೊಂಡ ಬಳಿಕವೂ ಆಸ್ಪತ್ರೆಗೆ ಸುತ್ತಾಡುತ್ತಿರುವ ಜನ, ಕಾರಣ...!


ಹೌದು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮಾಸ್ಕ್‌ಗಳನ್ನು ಸೇರಿಸುವ ಮೂಲಕ ಬೆಲೆಗಳನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ (Maharashtra government)  ನಿರ್ಧರಿಸಿದೆ.


ಮಾಸ್ಕ್‌ ಧರಿಸದೇ ರಸ್ತೆಗಿಳಿಯುವವರಿಗೆ ಕಡಿವಾಣ ಹಾಕಲು ಈ ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ

ಅಧಿಸೂಚನೆ ಪ್ರಕಾರ ಮಹಾರಾಷ್ಟ್ರದಲ್ಲಿ ಮಾಸ್ಕ್‌ಗಳ ಬೆಲೆ ಕೆಳಕಂಡಂತಿದೆ:-


  • ವಿ (V) ಆಕಾರದ ಎನ್ -95 ಮಾಸ್ಕ್ (N-95 Mask) ಬೆಲೆ - 19 ರೂ.

  • ಎನ್ -95 3 ಡಿ ಮಾಸ್ಕ್ (N-95 3D Mask) ಬೆಲೆ - 25 ರೂ. ಮತ್ತು 

  • ಎನ್ -95 ಮಾಸ್ಕ್ (Without Venus) ಬೆಲೆ -  28 ರೂ.

  • ಡಬಲ್ ಲೇಯರ್ ಸರ್ಜಿಕಲ್ ಮಾಸ್ಕ್ ದರ - 3 ರೂ.

  • ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಬೆಲೆ - 4 ರೂ.


VIDEO: ಮಾಸ್ಕ್ ಬದಲಿಗೆ ಹಾವು ಧರಿಸಿ ಬಸ್‌ನಲ್ಲಿ ಹತ್ತಿದ ವ್ಯಕ್ತಿ, ಮುಂದೆ...!


ಇದಲ್ಲದೆ ಕರೋನಾ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಒದಗಿಸುವ ಕಿಟ್‌ನ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. ಕಿಟ್‌ನ ಬೆಲೆ 127 ರೂ. ಮತ್ತು ಈ ಕಿಟ್‌ 5 N-95 ಮಾಸ್ಕ್‌ಗಳು, 5 ಮೂರು-ಪದರದ ಮಾಸ್ಕ್‌ಗಳನ್ನು ಒಳಗೊಂಡಿದೆ.


ವಾಸ್ತವವಾಗಿ ಮಾಸ್ಕ್‌ಗಳು ಹಾಗೂ ಸ್ಯಾನಿಟೈಜರ್ ಗಳ ಬೆಲೆಯನ್ನು ಕಡಿಮೆ ಮಾಡಲು ಮಹಾರಾಷ್ಟ್ರ ಸರ್ಕಾರ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಮಾಸ್ಕ್‌ಗಳ ಗರಿಷ್ಠ ಬೆಲೆಯನ್ನು ಮಿತಗೊಳಿಸುವಂತೆ ಕಳೆದ ವಾರ ತನ್ನ ಶಿಫಾರಸ್ಸು ಸಲ್ಲಿಸಿತು. ಸಮಿತಿಯ ಶಿಫಾರಸ್ಸಿನ ಅನ್ವಯ ಇದೀಗ ಮಾಸ್ಕ್ ಬೆಲೆಯನ್ನು ನಿಗದಿಗೊಳಿಸಲಾಗಿದೆ.