ಕರೋನಾದಿಂದ ಚೇತರಿಸಿಕೊಂಡ ಬಳಿಕವೂ ಆಸ್ಪತ್ರೆಗೆ ಸುತ್ತಾಡುತ್ತಿರುವ ಜನ, ಕಾರಣ...!

ದೇಶದಲ್ಲಿ ಸುಮಾರು 67 ಲಕ್ಷಕ್ಕೂ ಹೆಚ್ಚು ಜನರು ಕರೋನಾವೈರಸ್ ವಿರುದ್ಧದ ಯುದ್ಧದಲ್ಲಿ ಗೆದ್ದು ಆಸ್ಪತ್ರೆಗಳಿಂದ ಮನೆಗೆ ಮರಳಿದ್ದಾರೆ. ಆದರೆ ಅವರಲ್ಲಿ ಅನೇಕರು ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡುವಂತಾಗಿದೆ.  

Last Updated : Oct 21, 2020, 08:05 AM IST
  • ಕರೋನಾವೈರಸ್ ಜನರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥಗೊಳಿಸಿರುವುದು ಮಾತ್ರವಲ್ಲದೆ ಬಹುತೇಕ ಜನರಿಗೆ ಆರ್ಥಿಕ ಪೆಟ್ಟು ನೀಡಿದೆ.
  • ಕರೋನಾ ವಿರುದ್ಧ ಹೋರಾಡುವಲ್ಲಿ ನಿಮ್ಮ ಆಯುಧ ನಿಮ್ಮಲ್ಲಿರುವ ರೋಗನಿರೋಧಕ ಶಕ್ತಿ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಕರೋನಾದಿಂದ ಚೇತರಿಸಿಕೊಂಡ ಬಳಿಕವೂ ಆಸ್ಪತ್ರೆಗೆ ಸುತ್ತಾಡುತ್ತಿರುವ ಜನ, ಕಾರಣ...! title=

ನವದೆಹಲಿ: ಇಡೀ ವಿಶ್ವವೇ ಕರೋನಾವೈರಸ್ ವಿರುದ್ಧದ ಯುದ್ಧದಲ್ಲಿ ಹೋರಾಡುತ್ತಿದೆ. ಕರೋನಾ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರ ಸಂಖ್ಯೆಯಲ್ಲಿ ವಿಶ್ವದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ ದೇಶದಲ್ಲಿ ಈ ಕರೋನಾವೈರಸ್ (Coronavirus) ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣವೂ ಹೆಚ್ಚಾಗಿದೆ. ದೇಶದಲ್ಲಿ ಸುಮಾರು 67 ಲಕ್ಷಕ್ಕೂ ಹೆಚ್ಚು ಜನರು ಕರೋನಾವೈರಸ್ ವಿರುದ್ಧದ ಯುದ್ಧದಲ್ಲಿ ಗೆದ್ದು ಆಸ್ಪತ್ರೆಗಳಿಂದ ಮನೆಗೆ ಮರಳಿದ್ದಾರೆ. ಆದರೆ ಅವರಲ್ಲಿ ಅನೇಕರು ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡುವಂತಾಗಿದೆ. ಇದಕ್ಕೆ ಹಲವು ಅವರು ಎದುರಿಸುತ್ತಿರುವ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳು ಮುಖ್ಯ ಕಾರಣವಾಗಿದೆ.

27 ವರ್ಷದ ವಿನೀತ್ ಕಥೆ: 
ಈ ಕುರಿತಂತೆ  27 ವರ್ಷದ ವಿನೀತ್ ಎಂಬಾತ ತನ್ನ ಅನುಭವವನ್ನು ಹಂಚಿಕೊಂಡಿದ್ದು ಕೋವಿಡ್ 19 (Covid 19) ಸೋಂಕಿಗೆ ಒಳಗಾಗಿದ್ದ ನಾನು ಆಗಸ್ಟ್ 14 ರಂದು ಕರೋನಾ ವರದಿ ನೆಗೆಟಿವ್ ಬಂದಿದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದೆ. ಆದರೆ ನನ್ನ ತೊಂದರೆಗಳು ಇನ್ನೂ ಮುಗಿದಿಲ್ಲ. ನಾನೀಗಲೂ ಉಸಿರಾಟದ ತೊಂದರೆ, ಎದೆ ನೋವು, ಸುಸ್ತು, ಆಗಾಗ್ಗೆ ಜ್ವರ ಬರುವುದರಿಂದ ನರಳುತ್ತಿದ್ದೇನೆ. ಇದರಿಂದಾಗಿ ನನಗೆ ಮೊದಲಿನ ಹಾಗೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇದಕ್ಕೆ ಕಾರಣ ಏನೆಂಬುದರ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು ಕರೋನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಅನೇಕ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಪ್ರಾರಂಭಿಸುತ್ತದೆ. ಇದರಿಂದಾಗಿ ಆಮ್ಲಜನಕದ ಮಟ್ಟವು ವೇಗವಾಗಿ ಬೀಳಲು ಪ್ರಾರಂಭಿಸುತ್ತದೆ. ರಕ್ತ ಪೂರೈಸಲು ಹೃದಯ ಹೆಚ್ಚು ಶ್ರಮಿಸಬೇಕಾಗುತ್ತದೆ. ಮೇಲಿನಿಂದ ವೈರಸ್ ಸೋಂಕು ಹೃದಯ ಸ್ನಾಯುವಿನ ಉರಿಯೂತವನ್ನು ಹೆಚ್ಚಿಸುತ್ತದೆ. ಈ ರೋಗಿಗಳಲ್ಲಿ ಆಂಜಿಯೋಗ್ರಫಿ ಹೃದಯದ ಅಪಧಮನಿಗಳು ಸಾಮಾನ್ಯವಾಗಿರುತ್ತದೆ.  ಆದರೆ ರೋಗಲಕ್ಷಣಗಳಿಂದಾಗಿ ತುಂಬಾ ನೋವು ಅನುಭವಿಸಿದ ನಂತರ, ದೇಹವು ತನ್ನ ಹಳೆಯ ಸ್ಥಿತಿಗೆ ಮರಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಎಲ್ಲರೂ ಕರೋನಾ ಸಂಕಷ್ಟದಲ್ಲಿದ್ದಾಗ ಚೀನಾ ಬಿಲಿಯನೇರ್‌ಗಳ ಸಂಪತ್ತು ಏಕೆ ಹೆಚ್ಚುತ್ತಲೇ ಇತ್ತು?

15 ದಿನಗಳಿಂದ 3 ತಿಂಗಳವರೆಗೆ ಅಡ್ಡಪರಿಣಾಮ:
ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೋವಿಡ್ ಕೇಂದ್ರದ ನೋಡಲ್ ಅಧಿಕಾರಿ ಡಾ.ಅಜಿತ್ ಜೈನ್ ಈ ಬಗ್ಗೆ ಮಾತನಾಡಿ, ಪೋಸ್ಟ್ ಟು ಕೋವಿಡ್ ಕೇರ್ ಸೆಂಟರ್‌ಗಳು ವೇಗವಾಗಿ ತೆರೆಯುತ್ತಿವೆ ಎಂದು ಹೇಳುತ್ತಾರೆ. ಕೋವಿಡ್ ನಿಂದ ಚೇತರಿಸಿಕೊಂಡ ಬಳಿಕ ರೋಗಿಗಳಲ್ಲಿ ಅದರ ಅಡ್ಡಪರಿಣಾಮಗಳು 15 ದಿನಗಳಿಂದ ಸುಮಾರು 3 ತಿಂಗಳವರೆಗೆ ಇರುವುದನ್ನು ಕಾಣಬಹುದು. ಕರೋನದ ಅಡ್ಡಪರಿಣಾಮಗಳ ಜೊತೆಗೆ, ಅನೇಕ ಜನರು ಮತ್ತೆ ಕರೋನಾ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಇಂತಹ ಪ್ರಕರಣಗಳ ಬಗ್ಗೆ ಸರ್ಕಾರ ಕೂಡ ಎಚ್ಚರವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಕರೋನಾದಿಂದ ಚೇತರಿಸಿಕೊಂಡ ನಂತರವೂ ಮುನ್ನೆಚ್ಚರಿಕೆ ಅಗತ್ಯ!
ಕರೋನಾ ಸೋಂಕಿನ ನಂತರ ದೇಹದಲ್ಲಿ ಪ್ರತಿಕಾಯಗಳು ಬೆಳೆಯುತ್ತವೆ ಎಂದು ಐಸಿಎಂಆರ್ (ICMR) ನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದರು. ಈ ಪ್ರತಿಕಾಯವು ಎಷ್ಟು ಕಾಲ ಉಳಿಯುತ್ತದೆ ಎಂಬುದರ ಕುರಿತು ಅನೇಕ ಅಧ್ಯಯನಗಳು ನಡೆದಿವೆ. ಇದು 3 ತಿಂಗಳವರೆಗೆ ಇರುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಇನ್ನೂ ಕೆಲವು ಸಂಶೋಧನೆಗಳಲ್ಲಿ ಇದು 4 ತಿಂಗಳವರೆಗೆ ಇರುತ್ತದೆ ಎಂದು ತಿಳಿದುಬಂದಿದೆ. ಯಾವುದೇ ಪ್ರತಿಕಾಯಗಳು ಕೊರತೆಯಿದ್ದರೆ ಸೋಂಕು ಸಂಭವಿಸಬಹುದು, ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

ಜಾಗಟೆ ಬಾರಿಸಿ, ದೀಪ ಹಚ್ಚಿ ಕೊರೊನಾ ಎದುರಿಸಲು ಹೇಳಿದ ಮೋದಿ ಭಾಷಣವೇ ಜನರ ನಿರ್ಲಕ್ಷಕ್ಕೆ ಮುಖ್ಯ ಕಾರಣ-ಸಿದ್ಧರಾಮಯ್ಯ

ಕರೋನದ ವಿರುದ್ಧದ ನಿಮ್ಮ ಮಾರಕ ಆಯುಧ 'ಉತ್ತಮ ರೋಗನಿರೋಧಕ ಶಕ್ತಿ':
ಕರೋನಾ ವಿರುದ್ಧ ಹೋರಾಡುವಲ್ಲಿ ನಿಮ್ಮ ಆಯುಧ ನಿಮ್ಮಲ್ಲಿರುವ ರೋಗನಿರೋಧಕ ಶಕ್ತಿ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಇದರಿಂದಾಗಿಯೇ ಕರೋನಾ ಕೆಲವರಿಗೆ ಕಡಿಮೆ ಚಿಂತೆ ಉಂಟು ಮಾಡಿದರೆ ಕೆಲವರಿಗೆ ದೀರ್ಘಾವಧಿಯವರೆಗೆ ಕಾಡುತ್ತದೆ. ಆದ್ದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ. ತಾಜಾ ಬಿಸಿ ಆಹಾರವನ್ನು ಸೇವಿಸಿ. ಬಿಸಿ ನೀರನ್ನು ತೆಗೆದುಕೊಳ್ಳಿ. ಜಂಕ್ ಫುಡ್ ಮತ್ತು ತಣ್ಣನೆಯ ಆಹಾರಗಳಿಂದ ದೂರವಿರಿ. ಹವಾನಿಯಂತ್ರಣ ಬಳಕೆಯನ್ನು ಕಡಿಮೆ ಮಾಡಿ ಮತ್ತು ಆರೋಗ್ಯವಾಗಿರಲು ಯೋಗ ಮತ್ತು ವ್ಯಾಯಾಮ ಮಾಡಿ. ಇಲ್ಲಿಯವರೆಗೆ ಇದು ಕರೋನಾ ವಿರುದ್ಧದ ಅತ್ಯಂತ ಪರಿಣಾಮಕಾರಿ ಲಸಿಕೆ ಎಂದು ಸಾಬೀತಾಗಿದೆ ಎಂದು ಭೂಷಣ್ ತಿಳಿಸಿದ್ದಾರೆ.

ಕರೋನಾವೈರಸ್ ಜನರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥಗೊಳಿಸಿರುವುದು ಮಾತ್ರವಲ್ಲದೆ ಬಹುತೇಕ ಜನರಿಗೆ ಆರ್ಥಿಕ ಪೆಟ್ಟು ನೀಡಿದೆ. ಸರ್ಕಾರಿ ಆಸ್ಪತ್ರೆಗಳ ದುಃಸ್ಥಿತಿಯಿಂದ ತೊಂದರೆಗೀಡಾದ ಅನೇಕ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಪ್ರವೇಶ ಪಡೆದರು. ಚೇತರಿಸಿಕೊಂಡು ಮನೆಗೆ ಮರಳುವ ಹೊತ್ತಿಗೆ ಕೆಲವರ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗಿದ್ದರೆ, ಇನ್ನೂ ಕೆಲವರು ಸಾಲಗಾರರಾಗಿರುವ ಉದಾಹರಣೆಗಳು ಕೂಡ ಕಣ್ಣ ಮುಂದಿದೆ.  ಅನೇಕ ರಾಜ್ಯಗಳು ಜನರಿಗೆ ಹೊರೆಯಾಗದಂತೆ ನಿಗಾ ವಹಿಸಿದ್ದು ಆಸ್ಪತ್ರೆಗಳ ಹೆಚ್ಚುವರಿ ಶುಲ್ಕಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿವೆ. ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಸಾಮಾನ್ಯ ವಾರ್ಡ್‌ಗೆ 10 ಸಾವಿರಕ್ಕಿಂತ ಅಧಿಕ ಶುಲ್ಕ ವಿಧಿಸಬಾರದು. ಅಂತೆಯೇ ಐಸಿಯು ಹಾಸಿಗೆಗಳಿಗೆ 15 ಸಾವಿರ ಮತ್ತು ವೆಂಟಿಲೇಟರ್‌ಗಳೊಂದಿಗೆ ಐಸಿಯು ಹಾಸಿಗೆಗಳಿಗೆ 18 ಸಾವಿರಕ್ಕಿಂತ ಹೆಚ್ಚಿನ ಶುಲ್ಕ  ತೆಗೆದುಕೊಳ್ಳಬಾರದು ಎಂದು ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ. ಆದರೆ ರೋಗಿಗಳ ದೂರುಗಳು ಮಾತ್ರ ಕಡಿಮೆಯಾಗಿಲ್ಲ.

Trending News