ನವದೆಹಲಿ: ಅಂತರಾಷ್ಟ್ರೀಯ ಬೌದ್ಧ ಒಕ್ಕೂಟವು ಮಯನ್ಮಾರ್, ಥೈಲಾಂಡ್,ಕಾಂಬೋಡಿಯಾ,ಲಾವೋ,ಶ್ರೀಲಂಕಾದಲ್ಲಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ತ್ರಿಪುರಾದಲ್ಲಿ ಅಂತರಾಷ್ಟ್ರೀಯ ಬೌದ್ಧ ವಿವಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.


COMMERCIAL BREAK
SCROLL TO CONTINUE READING

ಈಗ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂತರಾಷ್ಟ್ರೀಯ ಬೌದ್ಧ ಒಕ್ಕೂಟದ ಸೆಕ್ರಟರಿ ಜನರಲ್ ದಮ್ಮಪಿಯಾ ಕಳೆದ ವಾರ ಈ ಯೋಜನೆ ಕುರಿತಾಗಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ರೊಂದಿಗೆ ಚರ್ಚೆನಡೆಸಿದ್ದಾರೆ ಎಂದರು.


"ನಾನು ಮತ್ತು ಬೌದ್ಧ ಸಮುದಾಯಕ್ಕೆ ಸೇರಿದ ಪ್ರತಿನಿಧಿಗಳು ಕಳೆದ ವಾರ ತ್ರಿಪುರಾ ಸಚಿವಾಲಯದಲ್ಲಿ ಸಿಎಂ ಬಿಪ್ಲಬ್ ದೇವ್ ರನ್ನು ಭೇಟಿ ಮಾಡಿದ್ದೇವೆ.ಅವರು ಈ ಯೋಜನೆ ಕುರಿತಾಗಿ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ" ಎಂದರು 


ಧಮ್ಮಪಿಯಾ ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಧಮ್ಮ ದೀಪ ಫೌಂಡೆಶನ್ ನ್ನು ಸ್ಥಾಪನೆ ಮಾಡಿದ್ದಾರೆ.ಕಳೆದ ಡಿಸೆಂಬರ್ 2017 ರಿಂದ ಅಂತರಾಷ್ಟ್ರೀಯ ಬೌದ್ಧ ಒಕ್ಕೂಟದ ನೇತೃತ್ವವನ್ನು ವಹಿಸಿದ್ದಾರೆ.