ಅಗರ್ತಲಾ: ಮಹಾಭಾರತ ಕಾಲದಲ್ಲಿ ಇಂಟರ್ನೆಟ್ ಇತ್ತು ಎಂದು ಸುದ್ದಿ ಮಾಡಿದ್ದ ತ್ರಿಪುರಾ ಮುಖ್ಯಮಂತ್ರಿ ಬಿಪ್ಲೇಬ್ ಕುಮಾರ್ ದೇವ್ ಈಗ ತ್ರಿಪುರಾದ ಯುವಕರು ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದರೆ 56 ಇಂಚಿನ ಎದೆ ಬೆಳೆಸಲು ಸಾಧ್ಯ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಕ್ರೀಡಾ ಸಚಿವ  ರಾಜವರ್ಧನ್ ಸಿಂಗ್ ಪ್ರಾರಂಭಿಸಿದ ಫಿಟ್ ನೆಸ್ ಚಾಲೆಂಜ್ ಕುರಿತಾಗಿ ಮಾತನಾಡಿದ ಅವರು  "ಎಲ್ಲಾ ಯುವಕರು ಸದೃಡವಾಗಿರಬೇಕು, ಎಲ್ಲರು ಪುಷ್-ಅಪ್ಗಳನ್ನು ಮಾಡಬೇಕು ಹಾಗೆ ಮಾಡುವುದರ ಮೂಲಕ ಆರೋಗ್ಯವಾಗಿರಬೇಕು, ಆ ಮೂಲಕ ತ್ರಿಪುರಾ ಸಶಕ್ತ ರಾಜ್ಯವಾಗಿ ಪರಿಣಮಿಸುತ್ತದೆ ಅಲ್ಲದೆ  ತ್ರಿಪುರಾ ಕೂಡ  56 ಇಂಚಿನ ಎದೆಯನ್ನು ಅಭಿವೃದ್ಧಿಪಡಿಸುತ್ತದೆ  ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಅವರ ಫಿಟ್ನೆಸ್ ಸವಾಲನ್ನು ಸ್ವೀಕರಿಸಿದ ಬಗ್ಗೆ ತಿಳಿಸಿದ ಅವರು ಪ್ರತಿದಿನ 20 ಪುಷ್-ಅಪ್ಗಳನ್ನು ಮಾಡುತ್ತಾರೆ ಎಂದರು.


ತ್ರಿಪುರದಲ್ಲಿ ಕ್ರೀಡಾಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಹಣವನ್ನು ಒದಗಿಸಲು ಕ್ರೀಡಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದ ಅವರು ಇದಕ್ಕೆ ಸ್ವತಃ ಸಚಿವರು ಒಪ್ಪಿಗೆ ನೀಡಿ 17 ಎಕರೆ ಜಾಗದಲ್ಲಿ ಕ್ರೀಡಾ ಸಂಕೀರ್ಣವನ್ನು ಅಭಿವೃದ್ದಿಪಡಿಸುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿಪ್ಲಾವ್ ದೇವ್ ತಿಳಿಸಿದರು.