ಟಿಆರೆಸ್ಸ್ ಎಂದಿಗೂ ಕೂಡ 2019 ರ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ- ಕೆಟಿಆರ್
ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಮತ್ತು ಸಚಿವ ಕೆ.ಟಿ ರಾಮರಾವ್ 2019ರ ಲೋಕಸಭೆ ಚುನಾವಣೆಗಯಲ್ಲಿ ಟಿಆರ್ಎಸ್ ಪಕ್ಷವು ಎಂದಿಗೂ ಕೂಡ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನವದೆಹಲಿ: ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಮತ್ತು ಸಚಿವ ಕೆ.ಟಿ ರಾಮರಾವ್ 2019ರ ಲೋಕಸಭೆ ಚುನಾವಣೆಗಯಲ್ಲಿ ಟಿಆರ್ಎಸ್ ಪಕ್ಷವು ಎಂದಿಗೂ ಕೂಡ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಬಿಜೆಪಿ ವಿಚಾರದಲ್ಲಿ ಬಲವಾದ ಭಿನ್ನಾಭಿಪ್ರಾಯವನ್ನು ಹೊಂದಿದ್ದೇವೆ ಆದ್ದರಿಂದ ಬಿಜೆಪಿ ಪಕ್ಷದ ಜೊತೆ ಖಂಡಿತವಾಗಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.
ಕೆಟಿಆರ್ ಟಿಆರ್ಎಸ್ ಪಕ್ಷವನ್ನು ಜಾತ್ಯತೀತ ಪಕ್ಷ ಎಂದು ಕರೆದುಕೊಳ್ಳಲು ಇಚ್ಛಿಸಿದರು."ನಾವು ವಿಭಿನ್ನ ವರ್ಣಗಳು ಮತ್ತು ಛಾಯೆಗಳ ಮತ್ತು ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಳಗೊಂಡಿರುವ ಜಾತ್ಯತೀತ ಪಕ್ಷವಾಗಿದ್ದು, ಆದ್ದರಿಂದ ಯಾವುದೇ ವಿಭಜನೆ ಮಾನದಂಡಗಳ ಆಧಾರದ ಮೇಲೆ ನಾವು ಧ್ರುವೀಕರಣ ಮಾಡಲು ಇಚ್ಚಿಸುವುದಿಲ್ಲ, ಆದ್ದರಿಂದ ಅವರೊಂದಿಗೆ ಸೇರುವ ಅಥವಾ ಒಗ್ಗೂಡಿಸುವ ಪ್ರಶ್ನೆಯೇ ಇಲ್ಲ ಎಂದು ಟ್ವಿಟ್ಟರ್ನಲ್ಲಿನ ಲೈವ್ ಪ್ರಶ್ನೋತ್ತರ ಸಂದರ್ಭದಲ್ಲಿ ಹೇಳಿದರು.
ಮುಂಬರುವ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಈ ತಿಂಗಳು ಅನಾವರಣ ಮಾಡಲಿದೆ ಎಂದು ಕೆಟಿಆರ್ ಹೇಳಿದರು. ಈ ಪ್ರಣಾಳಿಕೆಯಲ್ಲಿ ನಗರ ಮತ್ತು ಗ್ರಾಮೀಣ ಮೂಲಭೂತ ಸೌಕರ್ಯ, ಆರೋಗ್ಯ ಮತ್ತು ಶಿಕ್ಷಣಕ್ಕೆ ಮುಖ್ಯ ಪ್ರಾಮುಖ್ಯತೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.