ರೈಲಿನಲ್ಲಿ ವೈದ್ಯರಿಲ್ಲದ ಕಾರಣ ತಾನೇ ಹೆರಿಗೆ ಮಾಡಿಸಿದ TTE, ಫೋಟೋ ಶೇರ್ ಮಾಡಿದ ರೈಲ್ವೇ!
ಟ್ರೈನ್, ಬಸ್, ರೈಲ್ವೇ ನಿಲ್ದಾಣದಲ್ಲಿ ಹೆರಿಗೆಯಾಗಿರುವ ಬಗ್ಗೆ ನೀವು ಹಲವು ಸುದ್ದಿಗಳನ್ನು ನೋಡಿರಬಹುದು. ಇಂದೂ ಕೂಡ ಅಂತಹ ಒಂದು ಘಟನೆ ಬಗ್ಗೆ ನಾವು ತಿಳಿಸಲಿದ್ದೇವೆ. ಆದರೆ ಈ ಘಟನೆ ಸ್ವಲ್ಪ ವಿಭಿನ್ನವಾಗಿದೆ.
ನವದೆಹಲಿ: ಟ್ರೈನ್, ಬಸ್, ರೈಲ್ವೇ ನಿಲ್ದಾಣದಲ್ಲಿ ಹೆರಿಗೆಯಾಗಿರುವ ಬಗ್ಗೆ ನೀವು ಹಲವು ಸುದ್ದಿಗಳನ್ನು ನೋಡಿರಬಹುದು. ಇಂದೂ ಕೂಡ ಅಂತಹ ಒಂದು ಘಟನೆ ಬಗ್ಗೆ ನಾವು ತಿಳಿಸಲಿದ್ದೇವೆ. ಆದರೆ ಈ ಘಟನೆ ಸ್ವಲ್ಪ ವಿಭಿನ್ನವಾಗಿದೆ.
ವಾಸ್ತವವಾಗಿ, ರೈಲ್ವೆ ದೆಹಲಿ ವಿಭಾಗದಲ್ಲಿ ಟಿಟಿಇ ಆಗಿ ಕಾರ್ಯನಿರ್ವಹಿಸುವ ಎಚ್.ಎಸ್. ರಾಣಾ ಪ್ರಯಾಣಿಕರ ಸಹಾಯದಿಂದ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದರು. ರೈಲಿನಲ್ಲಿ ವೈದ್ಯರು ಇಲ್ಲದ ಕಾರಣ ರಾಣಾ ಮಹಿಳೆಗೆ ತಾವೇ ಹೆರಿಗೆ ಮಾಡಿಸಿದ್ದಾರೆ. ರಾಣಾ ಅವರ ಈ ಕೆಲಸಕ್ಕೆ ಭಾರತೀಯ ರೈಲ್ವೆಯ ಮುಖ್ಯಸ್ಥರು ಹೆಮ್ಮೆ ಪಡುತ್ತಿದ್ದಾರೆ.
ಟಿಟಿಇ ಪ್ರಯತ್ನಕ್ಕೆ ಸಂತಸ ವ್ಯಕ್ತಪಡಿಸಿದ ರೈಲ್ವೇ:
ಟಿಟಿಇ ಎಚ್.ಎಸ್. ರಾಣಾ ಅವರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಕಂಡು ಬೇರೆ ಪ್ರಯಾಣಿಕರ ಸಹಾಯ ಪಡೆದು ಹೆರಿಗೆ ಮಾಡಿಸಿದ್ದಾರೆ. ವಾಸ್ತವವಾಗಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ರಾತ್ರಿ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಟಿಟಿಇ ರಾಣಾ ಅವರು ರೈಲಿನಲ್ಲಿ ಯಾರಾದರು ವೈದ್ಯರು ಪ್ರಯಾಣಿಸುತ್ತಿದ್ದಾರೆಯೇ ಎಂದು ಹುಡುಕಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ವೈದ್ಯರು ಸಿಗದ ಕಾರಣ ಅಲ್ಲೇ ಇತರ ಪ್ರಯಾಣಿಕರ ಸಹಾಯ ಪಡೆದು ಸ್ವತಃ ಮಹಿಳೆಗೆ ಹೆರಿಗೆ ಮಾಡಿಸಲು ನಿರ್ಧರಿಸಿದರು. ಟಿಟಿಇ ಪ್ರಯತ್ನದಿಂದ ಬಹಳ ಸಂತಸ ವ್ಯಕ್ತಪಡಿಸಿರುವ ಭಾರತೀಯ ರೈಲ್ವೆ, ರಾಣಾ ಅವರ ಮಾನವೀಯ ಮತ್ತು ಉದಾತ್ತ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರೈಲ್ವೇ ಸಚಿವಾಲಯವು ಟ್ವೀಟ್ ಮಾಡಿದೆ.