ನವದೆಹಲಿ: ನೀವು ಟ್ವಿಟರ್ ಬಳಕೆದಾರರಾಗಿದ್ದರೆ ನಿಮಗೊಂದು ಸಂದೇಶವಿದೆ. ತಮ್ಮ Password ಅನ್ನು ಬೇಗ ಬದಲಿಸುವಂತೆ ಸುಮಾರು 3.30 ಕೋಟಿಗೂ ಹೆಚ್ಚು ಬಳಕೆದಾರರನ್ನು ಮುಂಜಾಗ್ರತ ಕ್ರಮವಾಗಿ ಟ್ವಿಟರ್ ಮನವಿ ಮಾಡಿಕೊಂಡಿದೆ. ವಾಸ್ತವವಾಗಿ, ಟ್ವಿಟ್ಟರ್ನ ಆಂತರಿಕ ಲಾಗ್ಗಳಲ್ಲಿ ಒಂದು ದೋಷ ಕಂಡುಬಂದಿದೆ, ಅದನ್ನು ಸರಿಪಡಿಸಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಟ್ವಿಟ್ಟರ್ ಅದರ ಬಗ್ಗೆ ಮಾಹಿತಿ ನೀಡಿದೆ. ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿಲ್ಲ ಹಾಗೇ ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ ಎಂದು ಟ್ವಿಟ್ಟರ್ ಭರವಸೆ ನೀಡಿದೆ. 


COMMERCIAL BREAK
SCROLL TO CONTINUE READING

ನಾವು ಇತ್ತೀಚಿಗೆ ಆಂತರಿಕ ಲಾಗ್ನಲ್ಲಿ ಪಾಸ್ವರ್ಡ್ಗಳನ್ನು ಸಂಗ್ರಹಿಸದ ದೋಷವನ್ನು ಪತ್ತೆಹಚ್ಚಿದ್ದೇವೆ. ನಾವು ದೋಷವನ್ನು ಪರಿಹರಿಸಿದ್ದೇವೆ ಮತ್ತು ಯಾವುದೇ ರೀತಿಯಲ್ಲಿ ಡೇಟಾ ಸೋರಿಕೆಯಾಗಿಲ್ಲ ಎಂದು ಭರವಸೆ ನೀಡಿದೆ. ಮುನ್ನೆಚ್ಚರಿಕೆಯಾಗಿ, ನೀವು ಈ ಪಾಸ್ವರ್ಡ್ ಅನ್ನು ಬದಲಾಯಿಸಿ ಎಂದು ಟ್ವಿಟ್ಟರ್ ತನ್ನ ಟ್ವೀಟ್ ಮೂಲಕ ತಿಳಿಸಿದೆ.