ಎಲಾನ್ ಮಸ್ಕ್ ಎಫೆಕ್ಟ್ : ಸಿಎಂ, ಡಿಕೆಶಿ, ಸೇರಿ ಯಶ್, ಸುದೀಪ್ ಟ್ವೀಟರ್ ಬ್ಲೂಟಿಕ್ ಮಾಯ..!
Twitter Blue Tick : ನಟ, ನಟಿ, ರಾಜಕೀಯ ಪ್ರಮುಖರು, ಕ್ರೀಡಾಪಟುಗಳು, ಮುಂತಾದವರಿಗೆ ಟ್ವೀಟರ್ ನಲ್ಲಿ ನೀಲಿ ಬಣ್ಣದ ಗುರುತು ಇರೋದು ಎಲ್ಲರಿಗೂ ತಿಳಿದಿರುಚವ ವಿಷಯ. ಸಾಮಾನ್ಯವಾಗಿ ಟ್ವೀಟರ್‌ನಲ್ಲಿ ಈ ಬ್ಲೂ ಟಿಕ್ ಇದ್ದರೆ ಅವರು ಸೆಲಿಬ್ರಿಟಿಗಳೆ ಅಂತಾನೇ ಹೇಳಲಾಗುತ್ತದೆ. ಆದರೆ ಇದೀಗ ಇವರಿಗೆಲ್ಲ ಟ್ವೀಟರ್ ಒಂದು ಶಾಂಕಿಂಗ್ ಅಪ್ಡೇಟ್ ಅನ್ನು ನೀಡಿದೆ.
Celebrities Twitter Account : ಹೌದು ಇದೀಗ ದಿಢೀರನೆ ಟ್ವೀಟರ್ ಬಳಕೆ ಮಾಡುತ್ತಿರುವ ನಟ ನಟಿಯರು ರಾಜಕೀಯ ಮುಖಂಡರು ಹಾಗೂ ಪ್ರಮುಖ ಕ್ರೀಡಾಪಟುಗಳ ಟ್ವೀಟರ್ ಅಕೌಂಟ್‌ನಿಂದ ಬ್ಲೂ ಟಿಕ್ ಅನ್ನು ತೆಗೆದುಹಾಕಲಾಗಿದೆ. ಕಳೆದ ರಾತ್ರಿಯಿಂದಲೇ ರಾಹುಲ್ ಗಾಂಧಿ, ವಿರಾಟ್ ಕೊಹ್ಲಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಸಿನಿಮಾ ನಟರಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಯಶ್, ದರ್ಶನ್ ಸೇರಿದಂತೆ ಹಲವರ ಟ್ವಿಟ್ಟರ್ ಬ್ಲೂ ಟಿಕ್ ಕಾಣದಾಗಿದೆ.
ಟ್ವಿಟ್ಟರ್‌ನ ಎಲಾನ್ ಮಸ್ಕ್ ಖರೀದಿಸುವ ಮುನ್ನ ಭಾರತೀಯ ಬಳಕೆದಾರರಿಗೆ ಆ ಮೈಕ್ರೋಬ್ಲಾಗಿಂಗ್ ಸೈಟ್ ಉಚಿತವಾಗಿ ಬ್ಲೂ ಟಿಕ್ ನೀಡಿತ್ತು. ಟ್ವೀಟರ್‌ಅನ್ನು ಎಲಾನ್ ಮಸ್ಕ್ ಖರೀದಿಸಿದಾಗಿನಿಂದಲೂ ಆತ ನಿಯಮಗಳನ್ನು ಬದಲಾಯಿಸುತ್ತಲೇ ಇದ್ದಾನೆ. ಆದರೆ ಇದೀಗ ಬ್ಲೂಟಿಕ್ ಬೇಕೆನಿಸಿದರೆ ಹಣ ಕಟ್ಟಲೇಬೇಕು. ಸಬ್ ಸ್ಕ್ರೈಬ್ ಮಾಡಿಕೊಳ್ಳದವರ ಖಾತೆಯ ಬ್ಲೂಟಿಕ್ ತೆಗೆದು ಹಾಕುವುದಾಗಿ ಇತ್ತೀಚೆಗೆ ಟ್ವೀಟರ್ ಹೇಳಿಕೆ ನೀಡಿತ್ತು. ಆದರೆ ಟ್ವೀಟರ್ ಆ ಕೆಲಸವನ್ನು ಈಗ ಮಾಡಿದೆ.
ರಾಜಕೀಯ ಮುಖಂಡರಾದಂತಹ ಸಿಎಂ ಬೊಮ್ಮಾಯಿ, ಡಿಕೆ ಶಿವಕುಮಾರ್, ಮತ್ತು ಖ್ಯಾತ ಸ್ಟಾರ್ ನಟರಾದಂತಹ ಕಿಚ್ಚ ಸುದೀಪ್, ಯಶ್, ಹಾಗೂ ದರ್ಶನ್ ಸೇರಿದಂತೆ ಹಲವು ನಟ-ನಟಿಯರ ಟ್ವೀಟರ್ ಅಕೌಂಟ್‌ನ ಬ್ಲೂಟಿಕ್ ಮಾಯವಾಗಿದೆ.
ಇದನ್ನೂ ಓದಿ-Aishwarya Rai : ಮದುವೆಯಲ್ಲಿ ಐಶ್ವರ್ಯಾ ರೈ ಉಟ್ಟಿದ್ರು 75 ಲಕ್ಷದ ಸೀರೆ, ಕೋಟಿ ಕೋಟಿ ಹಣ ನೀರಿನಂತೆ ಹರಿಯಿತು!
ಕೆಲವು ಸೆಲೆಬ್ರಿಟಿ ಮತ್ತು ರಾಜಕೀಯ ಮುಖಂಡರ ಖಾತೆಗಳಿಂದ ಬ್ಲೂಟಿಕ್ ಮಾಯವಾಗಿದೆ. ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇರುವ ಪ್ರಮುಖರು ಟ್ವೀಟರ್‌ನ ಈ ನಿಯಮದಿಂದ ಶಾಕ್ ಆಗಿದ್ದಾರೆ. ಏಪ್ರಿಲ್ 1 ರಿಂದ ಟ್ವಿಟ್ಟರ್ ನಿಯಮಗಳನ್ನು ಬದಲಿಸಿ ಬೇಗ ಸಬ್‌ಸ್ಕ್ರೈಬ್ ಮಾಡಿಕೊಳ್ಳುವಂತೆ ಟ್ವಿಟ್ಟರ್ ಹೇಳಿತ್ತು. ಮುನ್ನೆಚ್ಚರಿಕೆ ವಹಿಸಿದವರ ಬ್ಲೂ ಟಿಕ್ ಹಾಗೆ ಇದೆ. ಆದರೆ ಎಲಾನ್ ಮಸ್ಕ್ ನಿಯಮವನ್ನು ಪಾಲಿಸದವರ ಅಕೌಂಟ್‌ನಿಂದ ಬ್ಲೂ ಟಿಕ್ ಮಾಯವಾಗಿದೆ.
ಈ ಟ್ವೀಟರ್ ಬ್ಲೂ ಟಿಕ್ ಬೇಕೆಂದರೆ ಒಂದು ತಿಂಗಳಿಗೆ 900 ಇಲ್ಲವಾದರೆ ವಾರ್ಷಿಕವಾಗಿ 9400 ರೂಗಳನ್ನು ಪಾವತಿಸಬೇಕು. ಈ ಟ್ವೀಟರ್‌ನಲ್ಲಿ ಬ್ಲೂ ಟಿಕ್ ಇಲ್ಲವಾದರೇ ಸೆಲೆಬ್ರಿಟಿಗಳ ಪಾಲೋವರ್ಸ ಕಡಿಮೆಯಾಗುತ್ತಾರೆ. ಬಾಲಿವುಡ್ ಸ್ಯಾಂಡಲ್‌ವುಡ್‌ನ ಅನೇಕರು ತಮ್ಮ ಅಕೌಂಟ್‌ನ ಬ್ಲೂ ಟಿಕ್‌ನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ-Mamata Mohandas: ನಯನತಾರಾ ಬೆದರಿಕೆ ಹಾಕಿ ಆ ಅವಕಾಶ ಕಿತ್ತುಕೊಂಡ್ರು - ‘ಗೂಳಿ’ ನಟಿ ಮಮತಾ ಮೋಹನ್‌ದಾಸ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.