ನವದೆಹಲಿ: Government banks strike: ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಸರ್ಕಾರಿ ಬ್ಯಾಂಕುಗಳ ನೌಕರರ ಸಂಘಟನೆಗಳು ಜನವರಿ 31 ರಿಂದ ಎರಡು ದಿನಗಳ ಮುಷ್ಕರ ನಡೆಸುವ ಎಚ್ಚರಿಕೆ ನೀಡಿವೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಈ ಮುಷ್ಕರಕ್ಕೆ ಕರೆ ನೀಡಿದೆ. ಇದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಸ್ಥೆ ಸೇರಿದಂತೆ ಒಂಬತ್ತು ಉದ್ಯೋಗಿ ಸಂಸ್ಥೆಗಳ ಸಂಸ್ಥೆಯಾಗಿದೆ. ಪಿಟಿಐ ವರದಿಗಳ ಪ್ರಕಾರ, ಎಐಬಿಒಸಿ ಅಧ್ಯಕ್ಷ ಸುನಿಲ್ ಕುಮಾರ್ ಅವರು, ಮುಖ್ಯ ಕಾರ್ಮಿಕ ಆಯುಕ್ತರ ಮುಂದೆ ಸೋಮವಾರ ನಡೆದ ಸಭೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕಾಗಿಯೇ ನೌಕರ ಸಂಸ್ಥೆಗಳು ಸ್ಟ್ರೈಕ್ ನೋಟಿಸ್ ಅನ್ನು ಹಿಂತೆಗೆದುಕೊಂಡಿಲ್ಲ  ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ ವಿಷಯವು ನವೆಂಬರ್ 2017 ರಿಂದ ಬಾಕಿ ಉಳಿದಿದೆ. ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಯಾವುದೇ ಸ್ಪಷ್ಟ ಬದ್ಧತೆಯನ್ನು ನೀಡಿಲ್ಲ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕಾರಣದಿಂದಾಗಿ, ಮುಷ್ಕರಕ್ಕೆ ನೀಡಿದ ನೋಟಿಸ್ ಹಿಂತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ಐಬಿಎಯ ಹಠಮಾರಿ ನಿಲುವಿನಿಂದಾಗಿ, ಮುಷ್ಕರ ನಡೆಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ. ಮುಷ್ಕರದಿಂದಾಗಿ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕುಗಳು ಸಹಕಾರಕ್ಕಾಗಿ ಗ್ರಾಹಕರಿಗೆ ಮನವಿ ಮಾಡುತ್ತವೆ. ಆದರೆ ಇದನ್ನು ಬ್ಯಾಂಕ್ ಮ್ಯಾನೇಜ್‌ಮೆಂಟ್ ಮತ್ತು ಐಬಿಎ ನಮ್ಮ ಮೇಲೆ ಹೇರಿವೆ ಎಂದವರು ಅಸಮಾಧಾನ ಹೊರಹಾಕಿದ್ದಾರೆ.


ಜನವರಿ 31 ರಿಂದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವು ಕಾರ್ಯಾಚರಣೆಯ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ ಹಲವಾರು ಬ್ಯಾಂಕುಗಳು ಗ್ರಾಹಕರಿಗೆ ಮಾಹಿತಿ ನೀಡಿವೆ. ಉದ್ದೇಶಿತ ಮುಷ್ಕರ ನಡೆದರೆ, ಸತತ ಮೂರು ದಿನಗಳ ವರೆಗೆ ಬ್ಯಾಂಕ್ ಗಳು ಮುಚ್ಚಲ್ಪಟ್ಟಿರುತ್ತವೆ. 


ನಿಮ್ಮ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಬೇಕಾದಲ್ಲಿ ನೀವು ಜನವರಿ 31 ಮತ್ತು ಫೆಬ್ರವರಿ 1 ರ ಮೊದಲು ನಿಮ್ಮ ಕೆಲಸವನ್ನು ಪೂರ್ಣಗೊಳಿಸುವುದು ಉತ್ತಮ. ಇದು ನಿಮಗೆ ಒಂದಷ್ಟು ತೊಂದರೆಯನ್ನು ತಪ್ಪಿಸುತ್ತದೆ.  ಬ್ಯಾಂಕ್ ಕಾರ್ಮಿಕರು ತಮ್ಮ ಬೇಡಿಕೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸರ್ಕಾರದ ಮುಂದೆ ಇಟ್ಟುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ, ಬ್ಯಾಂಕ್ ಮುಷ್ಕರವು ಸರ್ಕಾರದ ನಿಲುವನ್ನು ಅವಲಂಬಿಸಿರುತ್ತದೆ ಎಂದು ನಿರೀಕ್ಷಿಸಲಾಗಿದೆ.